ವಿಶ್ವಕಪ್​ ಸೆಮಿ ಫೈನಲ್​ ಪ್ರವೇಶಿಸಲು ಪಾಕ್​ಗೆ ಇನ್ನೂ ಇದೆ ಅವಕಾಶ​?; ನ್ಯೂಜಿಲೆಂಡ್​​ಗೆ ಕಾಡಿದ ಆತಂಕ

ICC Cricket World cup 2019: ಬಾಂಗ್ಲಾ ವಿರುದ್ಧ ಪಾಕ್​ ಗೆದ್ದರೆ ಅಂಕಪಟ್ಟಿಯಲ್ಲಿ 11 ಪಾಯಿಂಟ್​ ಗಳಿಸಿಕೊಳ್ಳುವುದರ ಮೂಲಕ ನ್ಯೂಜಿಲೆಂಡ್ ಜೊತೆ ಸಮಬಲ ಸಾಧಿಸಲಿದೆ. ಈ ವೇಳೆ ಎರಡು ನೆಟ್​​ ರನ್​ ರೇಟ್​ ಯಾವ ತಂಡಕ್ಕೆ ಹೆಚ್ಚಿದೆಯೋ ಆ ತಂಡಕ್ಕೆ ಸೆಮೀಸ್​ನಲ್ಲಿ ಸ್ಥಾನ ನೀಡಲಾಗುತ್ತದೆ.

Rajesh Duggumane | news18
Updated:July 4, 2019, 9:41 AM IST
ವಿಶ್ವಕಪ್​ ಸೆಮಿ ಫೈನಲ್​ ಪ್ರವೇಶಿಸಲು ಪಾಕ್​ಗೆ ಇನ್ನೂ ಇದೆ ಅವಕಾಶ​?; ನ್ಯೂಜಿಲೆಂಡ್​​ಗೆ ಕಾಡಿದ ಆತಂಕ
ಪಾಕಿಸ್ತಾನ ಕ್ರಿಕೆಟ್ ತಂಡ
  • News18
  • Last Updated: July 4, 2019, 9:41 AM IST
  • Share this:
ನ್ಯೂಜಿಲೆಂಡ್​ ವಿರುದ್ಧ ಭರ್ಜರಿ ಜಯಗಳಿಸುವ ಮೂಲಕ ಆತಿಥೇಯ ಇಂಗ್ಲೆಂಡ್ ವಿಶ್ವಕಪ್​​ನಲ್ಲಿ ಸೆಮಿ ಫೈನಲ್​ ಪ್ರವೇಶಿಸಿದೆ. ಈ ಮೂಲಕ ಮೂರು ತಂಡಗಳು ವಿಶ್ವಕಪ್​ ಸೆಮೀಸ್​ನಲ್ಲಿ ಸ್ಥಾನ ಭದ್ರಪಡಿಸಿಕೊಂಡಂತಾಗಿದೆ. ಈಗ ನಾಲ್ಕನೆಯವರಾಗಿ ಸೆಮಿಫೈನಲ್​ ಪ್ರವೇಶಿಸಲು ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್​ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಈ ಬಾರಿಯ ವಿಶ್ವಕಪ್​ನಲ್ಲಿ ಸೆಮಿ ಫೈನಲ್​ ಪ್ರವೇಶಿಸಿದ ಮೊದಲ ತಂಡ ಆಸ್ಟ್ರೇಲಿಯಾ. ನಂತರ ಭಾರತ, ಈಗ ಇಂಗ್ಲೆಂಡ್​ ಕೂಡ ಸೆಮೀಸ್​ ಕಾದಾಟದಲ್ಲಿ ಸ್ಥಾನ ಪಡೆದುಕೊಂಡಿದೆ. ನಿನ್ನೆಯ ಪಂದ್ಯದಲ್ಲಿ ಗೆದ್ದಿದ್ದರೆ ನ್ಯೂಜಿಲೆಂಡ್ ಸುಲಭವಾಗಿ ಸೆಮೀಸ್​ಗೆ ಲಗ್ಗೆ ಇಡುತ್ತಿತ್ತು. ಆದರೆ, ಹಾಗಾಗಲಿಲ್ಲ. ಸತತ ಎರಡು ಪಂದ್ಯಗಳಲ್ಲಿ ಗೆಲುವ ಸಾಧಿಸುವ ಮೂಲಕ ಇಂಗ್ಲೆಂಡ್​ ಸೆಮಿ ಫೈನಲ್​ಗೆ ಸ್ಥಾನ ಭದ್ರಪಡಿಸಿಕೊಂಡಿದೆ.

ರ್ಯಾಂಕಿಂಗ್​ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ 11 ಅಂಕ ಹೊಂದಿದ್ದು, +0.17 ನೆಟ್​ ರನ್​ ರೇಟ್​ ಹೊಂದಿದೆ. ಪಾಕ್​ 9 ಅಂಕ ಗಳಿಸುವ ಮೂಲಕ ಐದನೇ ಸ್ಥಾನದಲ್ಲಿದೆ. ನಾಳೆ ಪಾಕ್​-ಬಾಂಗ್ಲಾದೇಶದ ನಡುವೆ ಕ್ರಿಕೆಟ್​ ಪಂದ್ಯ ನಡೆಯಲಿದೆ. ಈ ವೇಳೆ ಪಾಕ್​ ಗೆದ್ದರೆ ಅಂಕಪಟ್ಟಿಯಲ್ಲಿ 11 ಪಾಯಿಂಟ್​ ಗಳಿಸಿಕೊಳ್ಳುವುದರ ಮೂಲಕ ನ್ಯೂಜಿಲೆಂಡ್ ಜೊತೆ ಸಮಬಲ ಸಾಧಿಸಲಿದೆ. ಈ ವೇಳೆ ಪಾಕ್​ ಹಾಗೂ ನ್ಯೂಜಿಲೆಂಡ್​ ನಡುವೆ ನೆಟ್​​ ರನ್​ ರೇಟ್​ ಯಾವ ತಂಡಕ್ಕೆ ಹೆಚ್ಚಿದೆಯೋ ಅವರಿಗೆ ಸೆಮೀಸ್​ನಲ್ಲಿ ಸ್ಥಾನ ನೀಡಲಾಗುತ್ತದೆ.

ಇದನ್ನೂ ಓದಿ: ಸೆಮಿ ಫೈನಲ್​ನಲ್ಲಿ ವಿರಾಟ್​ ಕೊಹ್ಲಿ ಪಡೆಗೆ ಕಂಟಕವಾಗಬಹುದು ಈ ವಿಚಾರ!

ಒಂದೊಮ್ಮೆ ಪಾಕ್​ ನಾಳಿನ ಪಂದ್ಯದಲ್ಲಿ ದೊಡ್ಡ ಮೊತ್ತದ ಅಂತರದಿಂದ ಗೆಲುವು ಸಾಧಿಸಿದರೆ, ಸೆಮಿಫೈನಲ್​ನಲ್ಲಿ ಸ್ಥಾನ ಪಡೆದುಕೊಳ್ಳಬಹುದು. ಈ ಮೂಲಕ ಬಲಶಾಲಿ ತಂಡ ಎನಿಸಿಕೊಂಡಿದ್ದ ನ್ಯೂಜಿಲೆಂಡ್​ ಟೂರ್ನಿಯಿಂದಲೇ ಹೊರ ನಡೆಯಲಿದೆ.

First published: July 4, 2019, 9:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading