HOME » NEWS » Sports » CRICKET R SAMARTH HITS UNBEATEN CENTURY TO PROP UP KARNATAKA IN FIRST DAY OF RANJI MATCH AGAINST MADHYA PRADESH AT SHIVAMOGGA SNVS

ಶಿವಮೊಗ್ಗದಲ್ಲಿ ರಣಜಿ ಪಂದ್ಯ: ಮಧ್ಯಪ್ರದೇಶ ವಿರುದ್ಧ ಸಮರ್ಥ್ ಭರ್ಜರಿ ಶತಕ

6 ಪಂದ್ಯಗಳಿಂದ 8 ಪಾಯಿಂಟ್ ಪಡೆದು ಅಂಕಪಟ್ಟಿಯಲ್ಲಿ ತಳದಲ್ಲಿರುವ ಮಧ್ಯ ಪ್ರದೇಶಕ್ಕೆ ಇದು ಮಾಡು ಇಲ್ಲ ಮಡಿ ಎಂಬಂತಿನ ಪಂದ್ಯವಾಗಿದೆ. ಆದರೆ, ಕರ್ನಾಟಕ ತಂಡ 6 ಪಂದ್ಯಗಳಿಂದ 24 ಅಂಕ ಗಳಿಸಿದ್ದು, ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

news18
Updated:February 4, 2020, 7:23 PM IST
ಶಿವಮೊಗ್ಗದಲ್ಲಿ ರಣಜಿ ಪಂದ್ಯ: ಮಧ್ಯಪ್ರದೇಶ ವಿರುದ್ಧ ಸಮರ್ಥ್ ಭರ್ಜರಿ ಶತಕ
ರವಿಕುಮಾರ್ ಸಮರ್ಥ್
  • News18
  • Last Updated: February 4, 2020, 7:23 PM IST
  • Share this:
ಶಿವಮೊಗ್ಗ(ಫೆ. 04): ರವಿಕುಮಾರ್ ಸಮರ್ಥ್ ಅವರ ಅಜೇಯ ಶತಕದ ನೆರವಿನಿಂದ ಕರ್ನಾಟಕ ಕ್ರಿಕೆಟ್ ತಂಡ ಮಧ್ಯಪ್ರದೇಶ ವಿರುದ್ಧದ ರಣಜಿ ಪಂದ್ಯದ ಮೊದಲ ದಿನ ಮೇಲುಗೈ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಕರ್ನಾಟಕ ಮೊದಲ ದಿನಾಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತು. ರವಿಕುಮಾರ್ ಸಮರ್ಥ್ ಅಜೇಯ 105 ರನ್ ಗಳಿಸಿದರು. ಕೆ. ಸಿದ್ಧಾರ್ಥ್ ಜೊತೆ ಸಿದ್ಧಾರ್ಥ್ ಉತ್ತಮ ಜೊತೆಯಾಟದಲ್ಲೂ ಭಾಗಿಯಾಗಿ ತಂಡಕ್ಕೆ ಗೌರವ ತಂದುಕೊಟ್ಟರು.

ಇವರಿಬ್ಬರ ಜೊತೆಯಾಟಕ್ಕೆ ಮುನ್ನ ಕರ್ನಾಟಕದ ಇನ್ನಿಂಗ್ಸ್​ಗೆ ಆರಂಭದಲ್ಲೇ ಆಘಾತವಾಗಿತ್ತು. ಭರ್ಜರಿ ಫಾರ್ಮ್​ನಲ್ಲಿದ್ದ ದೇವದತ್ ಪಡಿಕ್ಕಲ್ ಶೂನ್ಯಕ್ಕೆ ಔಟಾದರು. ರೋಹನ್ ಕದಮ್ ಕೂಡ ಎರಡಂಕಿ ಮೊತ್ತ ಗಳಿಸಲಿಲ್ಲ. ನಾಯಕ ಕರುಣ್ ನಾಯರ್ 22 ರನ್​ಗೆ ತೃಪ್ತಿ ಪಟ್ಟುಕೊಂಡರು. 83 ರನ್​ಗೆ 3 ವಿಕೆಟ್ ಕಳೆದುಕೊಂಡ ಕರ್ನಾಟಕ ತುಸು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಆರ್. ಸಮರ್ಥ್ ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್ ಜೊತೆಗೂಡಿ 4ನೇ ವಿಕೆಟ್​ಗೆ 150 ರನ್​ಗಳ ಮುರಿಯದ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಇಬ್ಬರೂ ಓಡಿದರು, ಆದರೆ ಒಂದೇ ಕಡೆ: ಸಖತ್ ವೈರಲ್ ಆಗ್ತಿದೆ ಪಾಕ್ ಬ್ಯಾಟ್ಸ್​ಮನ್​ಗಳ ವಿಡಿಯೋ

ಆರಂಭಿಕ ಹಂತ ಹೊರತುಪಡಿಸಿದ ಮಧ್ಯಪ್ರದೇಶದ ಬೌಲರ್​ಗಳಿಗೆ ಯಾವುದೇ ಯಶಸ್ಸು ಸಿಗಲಿಲ್ಲ. 6 ಪಂದ್ಯಗಳಿಂದ 8 ಪಾಯಿಂಟ್ ಪಡೆದು ಅಂಕಪಟ್ಟಿಯಲ್ಲಿ ತಳದಲ್ಲಿರುವ ಮಧ್ಯ ಪ್ರದೇಶಕ್ಕೆ ಇದು ಮಾಡು ಇಲ್ಲ ಮಡಿ ಎಂಬಂತಿನ ಪಂದ್ಯವಾಗಿದೆ. ಆದರೆ, ಕರ್ನಾಟಕ ತಂಡ 6 ಪಂದ್ಯಗಳಿಂದ 24 ಅಂಕ ಗಳಿಸಿದ್ದು, ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಕರ್ನಾಟಕ-ಮ.ಪ್ರ. ಸ್ಕೋರು ವಿವರ (ಮೊದಲ ದಿನಾಂತ್ಯಕ್ಕೆ):

ಕರ್ನಾಟಕ ಮೊದಲ ಇನ್ನಿಂಗ್ಸ್ 86 ಓವರ್ 233/3
(ರವಿಕುಮಾರ್ ಸಮರ್ಥ್ ಅಜೇಯ 105, ಕೃಷ್ಣಮೂರ್ತಿ ಸಿದ್ಧಾರ್ಥ್ ಅಜೇಯ 62 ರನ್)ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Youtube Video
First published: February 4, 2020, 7:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories