Ravichandran Ashwin| ಐಸಿಸಿ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದ ಅಶ್ವಿನ್ ಹೇಳಿದ್ದೇನು ಗೊತ್ತೇ..?

ಸುಮಾರು 4 ವರ್ಷಗಳ ಕಾಲ ಭಾರತ ಟಿ20 ಪಂದ್ಯಗಳ ಆಡುವ ತಂಡದಿಂದ ಹೊರಗುಳಿದ ನಂತರ ಮತ್ತೆ ಈಗ ತಂಡಕ್ಕೆ ಮರಳಿದ್ದು, ತುಂಬಾನೇ ಸಂತೋಷವಾಗಿದೆ ಮತ್ತು ಕೃತಜ್ಞನಾಗಿದ್ದೇನೆ ಎಂದು ಅಶ್ವಿನ್ ಹೇಳಿದ್ದಾರೆ.

ಆರ್ ಅಶ್ವಿನ್.

ಆರ್ ಅಶ್ವಿನ್.

 • Share this:
  ಪ್ರಸ್ತುತ ಇಂಗ್ಲೆಂಡ್‌ನಲ್ಲಿ (England) ನಡೆಯುತ್ತಿರುವಂತಹ ಟೆಸ್ಟ್ ಸರಣಿಯಲ್ಲಿ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ರನ್ನು (Ravichandran Ashwin) ನಾಲ್ಕನೆಯ ಟೆಸ್ಟ್‌ನಲ್ಲಿ ತಂಡದಿಂದ ಕೈಬಿಡಲಾಗಿತ್ತು ಮತ್ತು ಇದು ಅವರ ಅಭಿಮಾನಿಗಳಿಗೆ ಬೇಸರ ತಂದಿತ್ತು. ಆದರೆ ಅಶ್ವಿನ್‌ ಅಭಿಮಾನಿಗಳಿಗೊಂದು ಸಿಹಿಸುದ್ದಿ ಇದೆ. ಅದೇನಪ್ಪಾ ಅಂತೀರಾ ಅಶ್ವಿನ್ ಮುಂಬರುವಂತಹ ಐಸಿಸಿ ಟಿ20 ವಿಶ್ವಕಪ್‌ಗಾಗಿ (T20 World Cup) ಭಾರತ ಟಿ20 ತಂಡದಲ್ಲಿ (India T20 Squad) ಮತ್ತೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸುಮಾರು 4 ವರ್ಷಗಳ ಹಿಂದೆ ಆರ. ಅಶ್ವಿನ್‌ರನ್ನು ಏಕದಿನ ಮತ್ತು ಟಿ20 ಭಾರತ ತಂಡದಿಂದ ಕೈಬಿಡಲಾಗಿತ್ತು. ಅವರು ಕೇವಲ ಟೆಸ್ಟ್ ಪಂದ್ಯಗಳನ್ನು ಮತ್ತು ಐಪಿಎಲ್ ಮಾತ್ರವೇ ಆಡುತ್ತಿದ್ದು, ಈಗ ಮತ್ತೆ ತಂಡಕ್ಕೆ ಮರಳಿದ್ದು ಅಶ್ವಿನ್‌ರಿಗೆ ತುಂಬಾನೇ ಸಂತೋಷ ತಂದಿದೆ ಎಂದು ಹೇಳಬಹುದು.

  ಅಶ್ವಿನ್ ಏಕದಿನ ಮತ್ತು ಟಿ20 ಭಾರತ ತಂಡಗಳಿಂದ ಹೊರಗುಳಿದ ನಂತರ 2017ರಲ್ಲಿ 'ತಮ್ಮ ಡೈರಿಯಲ್ಲಿ ಒಂದು ಮಿಲಿಯನ್ ಬಾರಿ ಬರೆದುಕೊಂಡಂತಹ ಒಂದು ಪ್ರೇರಣಾದಾಯಕವಾಗಿರುವಂತಹ ಕೆಲವು ಸಾಲುಗಳನ್ನು ತಮ್ಮ ಗೋಡೆಯ ಮೇಲೆ ಬರೆದಿದ್ದ ಫೋಟೋವನ್ನು ಸಾಮಾಜಿಕ ಮಾಧ್ಯಮದ ಖಾತೆಯಲ್ಲಿರುವ ಪುಟದಲ್ಲಿ ಹಂಚಿಕೊಂಡಿದ್ದಾರೆ.

  ಸುಮಾರು 4 ವರ್ಷಗಳ ಕಾಲ ಭಾರತ ಟಿ20 ಪಂದ್ಯಗಳ ಆಡುವ ತಂಡದಿಂದ ಹೊರಗುಳಿದ ನಂತರ ಮತ್ತೆ ಈಗ ತಂಡಕ್ಕೆ ಮರಳಿದ್ದು, ತುಂಬಾನೇ ಸಂತೋಷವಾಗಿದೆ ಮತ್ತು ಕೃತಜ್ಞನಾಗಿದ್ದೇನೆ ಎಂದು ಅಶ್ವಿನ್ ಹೇಳಿದ್ದಾರೆ.

  “ಈ ಪ್ರೇರಣೆ ನೀಡುವಂತಹ ಸಾಲುಗಳನ್ನು ನಾನು ಗೋಡೆಯ ಮೇಲೆ ಬರೆಯುವ ಮುನ್ನ ನಾನು ನನ್ನ ದಿನಚರಿಯನ್ನು ಬರೆಯುವಂತಹ ಡೈರಿಯಲ್ಲಿ ಒಂದು ಮಿಲಿಯನ್ ಬಾರಿ ಬರೆದಿದ್ದೇನೆ! ನಾವು ಓದುವ ಮತ್ತು ಮೆಚ್ಚುವ ಸಾಲುಗಳು ಕೆಲವೊಮ್ಮೆ ನಮಗೆ ಗೊತ್ತಿರದೆ ನಾವು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಾವು ಹೆಚ್ಚು ಆತ್ಮವಿಶ್ವಾಸ ಪಡೆಯುತ್ತೇವೆ. ಸಂತೋಷ ಮತ್ತು ಕೃತಜ್ಞತೆ ಎರಡು ಪದಗಳು ನನ್ನ ಬಗ್ಗೆ ವ್ಯಾಖ್ಯಾನಿಸಬಹುದು," ಎಂದು ಅವರು ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ.

  ಅಶ್ವಿನ್ ಇದುವರೆಗೂ 46 ಟಿ20 ಮತ್ತು 111 ಏಕದಿನ ಪಂದ್ಯಗಳನ್ನು ಆಡಿದ್ದು, ಇವರು ಜುಲೈ 2017 ರಿಂದ 'ಟೆಸ್ಟ್ ಆಟಗಾರ' ಆಗಿದ್ದರು ಎಂದು ಹೇಳಬಹುದಾಗಿದೆ. ಆದರೂ ಐಪಿಎಲ್‌ನಲ್ಲಿ ಸಾಕಷ್ಟು ಪ್ರಭಾವಶಾಲಿಯಾಗಿದ್ದಾರೆ. ಮುಖ್ಯ ಆಯ್ಕೆಗಾರರಾದಂತಹ ಚೇತನ್ ಶರ್ಮಾ ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಅಶ್ವಿನ್‌ರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

  ಇದನ್ನೂ ಓದಿ: Prasidh Krishna- ಮಸಾಲೆ ದೋಸೆ ಅಂದ್ರೆ ಬಾಯಿ ಚಪ್ಪರಿಸುತ್ತಾರೆ; ತಿನ್ನೋ ವಿಷಯದಲ್ಲಿ ಭಾರೀ ಫಾಸ್ಟ್ ಈ ಕೃಷ್ಣ

  "ಅಶ್ವಿನ್ ನಿರಂತರವಾಗಿ ಐಪಿಎಲ್ ಅನ್ನು ಆಡುತ್ತಿದ್ದಾರೆ. ಅವರು ಉತ್ತಮ ಪ್ರದರ್ಶನ ಸಹ ನೀಡಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ನಮಗೆ ಆಫ್ ಸ್ಪಿನ್ನರ್ ಅಗತ್ಯವಿದೆ. ಐಪಿಎಲ್‌ನ ದ್ವಿತೀಯಾರ್ಧವು ಯುಎಇಯಲ್ಲಿ ವಿಶ್ವಕಪ್‌ಗೆ ಮೊದಲು ನಡೆಯುತ್ತಿದ್ದು, ಅಲ್ಲಿನ ಪಿಚ್ ನಿಧಾನವಾಗಿದ್ದು, ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ತಂಡದಲ್ಲಿ ಆಫ್ ಸ್ಪಿನ್ನರ್ ಅಗತ್ಯವಿದೆ” ಎಂದು ಶರ್ಮಾ ಹೇಳಿದ್ದಾರೆ.
  First published: