FIFA World Cup 2022: ಫುಟ್​ಬಾಲ್​ ಪಂದ್ಯ ವೀಕ್ಷಕರಿಗೆ ಬಿಯರ್​ ಸೇವಿಸಲು ಅನುಮತಿ ನೀಡಿದ ಕತಾರ್​ ಸರ್ಕಾರ!

ಕ್ರೀಡಾ ಪ್ರೇಮಿಗಳಿಗಾಗಿ ಟಿಕೆಟ್​ ಖರೀದಿಸುವ ಜಾಗದಲ್ಲಿ ಬಿಯರ್​ ಅನ್ನು ಕೂಡ ಖರೀದಿಸಲು ಅವಕಾಶವಿದೆ. ಆದರೆ ಪಂದ್ಯ ವೀಕ್ಷಣೆಯ ಸಮಯದಲ್ಲಿ ಮಾತ್ರ ಬಿಯರ್​ ಸೇವಿಸಲು ಮತ್ತು ಖರೀದಿಸಲು ಸಾಧ್ಯವಾಗುದಿಲ್ಲ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಬಹುತೇಕ ಮುಸ್ಲಿಂ ರಾಷ್ಟ್ರಗಳು ಮದ್ಯ ಮಾರಾಟ ನಿರ್ಬಂಧದ ಕಾನೂನನ್ನು ಅನುಸರಿಸುತ್ತಿದೆ. ಆದರೀಗ ಕತಾರ್​ (Qatar ) ಮುಂಬರುವ ಫಿಫಾ ವಲ್ಡ್​ ಕಪ್ 2022 (FIFA World Cup 2022)​​ ವಿಚಾರವಾಗಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಫಿಫಾ ವಿಶ್ವಕಪ್​ ಸಂಘಟಕರು ಕತಾರ್​ನ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡಿ, ಸ್ಟೇಡಿಯಂ (Stadium) ಮತ್ತು ವೀಕ್ಷಕರು ಪಂದ್ಯ ವೀಕ್ಷಣೆಯ ಸಮಯದಲ್ಲಿ ಬಿಯರ್ (Beer)​ ಸೇವಿಸುವ ಮತ್ತು ಹಂಚುವ ನೀತಿಗೆ ಒಪ್ಪಿಗೆ ದೊರೆತಿದೆ. ನಿಯಮಾವಳಿಯ ಪ್ರಕಾರ ವೀಕ್ಷಕರಿಗೆ ಬಿಯರ್​ ಖರೀದಿಸಲು ಅನುಮತಿ ನೀಡಲಾಗಿದೆ. ಮಾತ್ರವಲ್ಲದೆ, ಅದಕ್ಕಾಗಿ ಸಮಯವಕಾಶವನ್ನು ನೀಡಿದೆ.

    ಮುಸ್ಲಿಂ ರಾಷ್ಟ್ರದಲ್ಲಿ ಮದ್ಯ ಮಾರಾಟಕ್ಕೆ ನಿರ್ಭಂದನೆಯ ಕಾನೂನಿದೆ. ಆದರೆ ಕತಾರ್​ನಲ್ಲಿ ಫಿಪಾ ವಲ್ಡ್​​ ವಿಚಾರವಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಮಾಹಿತಿಯ ಪ್ರಕಾರ, ಫುಟ್​ಬಾಲ್​ ಪಂದ್ಯ ನೋಡುವ ವೀಕ್ಷಕರಿಗೆ ಅಂದರೆ ಟಿಕೆಟ್​ ಖರೀದಿಸಿ ಪಂದ್ಯ ನೋಡುಗರು ಆಟ ಪ್ರಾರಂಭಕ್ಕೂ 3 ಗಂಟೆಯ ಮೊದಲು ಮತ್ತು ಒಂದು ಗಂಟೆಯ ಒಳಗೆ ಬಿಯರ್​ ಖರೀದಿಸಬಹುದಾಗಿದೆ. ಆದರೆ ಫಿಫಾ ಪಂದ್ಯಾಟ ಪ್ರಾರಂಭವಾದ ಮೇಲೆ ಬಿಯರ್​ ಖರೀದಿಸಲು ಮತ್ತು ಸೇವಿಸಲು ಅನುಮತಿ ನೀಡಿಲ್ಲ.

    ಕ್ರೀಡಾ ಪ್ರೇಮಿಗಳಿಗಾಗಿ ಟಿಕೆಟ್​ ಖರೀದಿಸುವ ಜಾಗದಲ್ಲಿ ಬಿಯರ್​ ಅನ್ನು ಕೂಡ ಖರೀದಿಸಲು ಅವಕಾಶವಿದೆ. ಆದರೆ ಪಂದ್ಯ ವೀಕ್ಷಣೆಯ ಸಮಯದಲ್ಲಿ ಮಾತ್ರ ಬಿಯರ್​ ಸೇವಿಸಲು ಮತ್ತು ಖರೀದಿಸಲು ಸಾಧ್ಯವಾಗುದಿಲ್ಲ. ಅದಕ್ಕಾಗಿ ಕತಾರ್​ ಪಂದ್ಯ ಪ್ರಾರಂಭಕ್ಕೂ 3 ಗಂಟೆ ಅಥವಾ 1 ಗಂಟೆ ಮೊದಲು ಸಮಯವನ್ನು ನಿಗದಿಪಡಿಸಿದೆ.

    ಫಿಫಾ ವಿಶ್ವಕಪ್​ ವಿಶೇಷವಾಗಿ ಬಿಯರ್​ ಬ್ರ್ಯಾಂಡ್​ ಬಡ್​ವೈಸರ್​ ಅನ್ನು ಮಾರಾಟ ಮಾಡಲಾಗುತ್ತದೆ. ಪಂದ್ಯ ಪ್ರಾರಂಭಕ್ಕೂ ಮೊದಲು ಮತ್ತು ಫ್ಯಾನ್​ ಫೆಸ್ಟಿವಲ್​ ಸಮಯ ಸಂಜೆ 6:30ರಿಂದ ಮಾರಾಟ ಮಾಡಲಿದೆ.

    ಟಿಕೆಟ್​ ಪಡೆದ ಮತ್ತು ಪಂದ್ಯ ವೀಕ್ಷಣೆಗೆಂದು ಬಂದ ವೀಕ್ಷಕರಿಗೆ ಮಾತ್ರ ಬಡ್​ವೈಸರ್​ ಝಿರೋಗೆ ಪ್ರವೇಶವನ್ನು ನೀಡಲಾಗುತ್ತದೆ.

    ಇದನ್ನೂ ಓದಿ: Viral Video: ನ್ಯೂಸ್​ ಓದುವ ವೇಳೆ ಆ್ಯಂಕರ್​ ಬಾಯಿಯೊಳಕ್ಕೆ ಹೋದ ನೊಣ! ನಗು ತರಿಸುತ್ತೆ ಈ ವಿಡಿಯೋ

    ಸಾಂಪ್ರದಾಯಿಕ ಇಸ್ಲಾಮಿಕ್ ಕಾನೂನನ್ನು ಆಧರಿಸಿದ ಆಲ್ಕೋಹಾಲ್ ಮಾರಾಟದ ಮೇಲಿನ ತನ್ನ ಭಾರೀ ನಿಯಂತ್ರಣವನ್ನು ವಿಶ್ವಕಪ್‌ಗಾಗಿ ಕತಾರ್ ಸಡಿಲಿಸಬೇಕಾಗಿರುವುದರಿಂದ ಬಿಯರ್ ನೀತಿ ಬಂದಿದೆ. ಕತಾರ್‌ನಲ್ಲಿ, ಆಲ್ಕೋಹಾಲ್ ಸೇವನೆಯು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಮತ್ತು ಸೇವೆ ನೀಡಲು ಪರವಾನಗಿ ಹೊಂದಿರುವ ಬಾರ್‌ಗಳಲ್ಲಿ ಮಾತ್ರ ಕಾನೂನುಬದ್ಧವಾಗಿದೆ.

    ಕತಾರ್ ತನ್ನ ಪಂದ್ಯ ನೋಡಲು ಬಂದ ವೀಕ್ಷಕರಿಗಾಗಿ ಈ ಮೊದಲು ಬಿಯರ್​ ನೀತಿಯನ್ನು ಸಡಿಲಗೊಳಿಸಿತ್ತು. ಯುರೋಪ್ ಮತ್ತು ಉತ್ತರ ಮತ್ತು ದಕ್ಷಿಣ ಅಮೆರಿಕಾದ ತಂಡಗಳನ್ನು ಒಳಗೊಂಡಿರುವ 2019 ರ ಕ್ಲಬ್ ವರ್ಲ್ಡ್ ಕಪ್ ಸೇರಿದಂತೆ ಇತರ ಸಾಕರ್ ಪಂದ್ಯಾವಳಿಗಳಿಗೆ ತನ್ನ ಆಲ್ಕೋಹಾಲ್ ನೀತಿಗಳನ್ನು ಸಡಿಲಗೊಳಿಸಿತ್ತು.

    ಇದನ್ನೂ ಓದಿ: Elephant Retirement: ಮನುಷ್ಯರಂತೆ ಆನೆಗಳಿಗೂ ನಿವೃತ್ತಿ; ವಿದಾಯ ಸಭೆಯ ಭಾವನಾತ್ಮಕ ವಿಡಿಯೋ ವೈರಲ್





    ಕತಾರ್ ವಿಶ್ವಕಪ್ ಅನ್ನು ಆಯೋಜಿಸುವ ಮಧ್ಯಪ್ರಾಚ್ಯದಲ್ಲಿ ಮೊದಲ ರಾಷ್ಟ್ರವಾಗಿದೆ. ಅಂದಹಾಗೆಯೇ ನವೆಂಬರ್​ ತಿಂಗಳಿನಲ್ಲಿ ಫಿಪಾ ವಲ್ಡ್​​ ಕಪ್​ ಪ್ರಾರಂಭವಾಗಲಿದೆ. ಈಗಾಗಲೇ ಅದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಬಹುತೇಕ ದೇಶಗಳ ಪುಟ್​ಬಾಲ್​ ತಾರೆಯರು ಈ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಫುಟ್ಬಾಲ್​ ಪ್ರಿಯರು ಕೂಡ ಪಂದ್ಯ ವೀಕ್ಷಿಸಲು ತುದಿಗಾಲಿನಲ್ಲಿದ್ದಾರೆ.

    ನವೆಂಬರ್​ 20 ರಿಂದ ಪಂದ್ಯ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಗ್ರೂಪ್​ ಏ ಭಾಗವಾಗಿ ಕತಾರ್​ ಮತ್ತು ಈಕ್ವೆಡರ್​ನೊಂದಿಗೆ ನಡೆಯಲಿದೆ.
    Published by:Harshith AS
    First published: