ನಾಡಹಬ್ಬ ದಸರಾದಲ್ಲಿ ಚಿನ್ನದ ಹುಡುಗಿ; ಯುವ ದಸರೆಗೆ ಪಿ.ವಿ.ಸಿಂಧು ಚಾಲನೆ!

ಸಿಂಧು ಅವರು ಇತ್ತೀಚೆಗಷ್ಟೆ ಬಿಡಬ್ಲ್ಯುಎಫ್ ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತ ಮೊದಲ ತಾರೆ ಎಂಬ ದಾಖಲೆ ಬರೆದು ಇತಿಹಾಸದ ಪುಟ ಸೇರಿದ್ದರು.

Vinay Bhat | news18-kannada
Updated:September 7, 2019, 12:06 PM IST
ನಾಡಹಬ್ಬ ದಸರಾದಲ್ಲಿ ಚಿನ್ನದ ಹುಡುಗಿ; ಯುವ ದಸರೆಗೆ ಪಿ.ವಿ.ಸಿಂಧು ಚಾಲನೆ!
ಪಿ ವಿ ಸಿಂಧು
  • Share this:
ಮೈಸೂರು (ಸೆ. 07): ವಿಶ್ವವಿಖ್ಯಾತ ಮೈಸೂರು ದಸರಾ ಆರಂಭದಕ್ಕೆ ದಿನಗಣನೆ ಶುರುವಾಗಿದೆ. ನಾಡಹಬ್ಬ ದಸರಾ ಎಂದರೆ ಅದು ಪಾರಂಪರಿಕ, ಐತಿಹಾಸಿಕ, ವಿಶ್ವವಿಖ್ಯಾತ ಹಬ್ಬ. ಸಾಂಸ್ಕೃತಿಕ ನಗರಿ, ಅರಮನೆ ನಗರಿ ಎಂದೇ ಕರೆಯಲಾಗುವ ಮೈಸೂರಿನಲ್ಲಿ ಜಗದ್ವಿಖ್ಯಾತ ದಸರಾ ಸಂಭ್ರಮ ಮನೆ ಮಾಡಿದೆ.

ಈ ಬಾರಿ ದಸರಾ ಕ್ರೀಡಾಕೂಟ ಹಾಗೂ ಯುವ ದಸರಾವನ್ನು ಉದ್ಘಾಟಿಸಲು ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ, ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಅವರನ್ನು ಆಹ್ವಾನಿಸಲಾಗಿದೆ.

ಸಿಂಧು ಅವರು ಇತ್ತೀಚೆಗಷ್ಟೆ ಬಿಡಬ್ಲ್ಯುಎಫ್ ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತ ಮೊದಲ ತಾರೆ ಎಂಬ ದಾಖಲೆ ಬರೆದು ಇತಿಹಾಸದ ಪುಟ ಸೇರಿದ್ದರು.

ಇವೆರಡು 2019ರ ಹೃದಯ ವಿದ್ರಾವಕ ಫೋಟೋಗಳು; ಟ್ವಿಟ್ಟರ್​ನಲ್ಲಿ ಭಾರತೀಯರ ಬೇಸರ!

'ಸೆ. 30ರಿಂದ ಅ.8ರವರೆಗೆ ನಡೆಯಲಿರುವ ನಾಡಹಬ್ಬ ದಸರಾಕ್ಕೆ ಯೂತ್ ಐಕಾನ್ ಚಿನ್ನದ ಹುಡುಗಿ ಪಿ.ವಿ.ಸಿಂಧು ಅವರನ್ನು ಕ್ರೀಡಾಕೂಟದ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಆದರೆ, ಅಂದು ಪ್ರಮುಖ ಬ್ಯಾಡ್ಮಿಂಟನ್ ಪಂದ್ಯ ಇರುವ ಕಾರಣ ಸಿಂಧು ಉದ್ಘಾಟನೆಗೆ ಗೈರಾಗು ಸಾಧ್ಯತೆ ಇದೆ'

'ಇದರ ಬದಲಾಗಿ 10 ದಿನದೊಳಗಿನ ದಸರಾ‌ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ. ಸಿಂಧು ಅವರ ‌ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರ ಆಗಮನ ದಸರಾ ಕ್ರೀಡಾಕೂಟಕ್ಕೆ‌ ಮತ್ತಷ್ಟು ಮೆರಗು ತರಲಿದೆ' ಎಂದು ಜಿಲ್ಲಾಧಿಕಾರಿ ಅಭಿರಾಮ್ ಅವರು ನ್ಯೂಸ್‌18ಗೆ ಹೇಳಿದ್ದಾರೆ.

(ವರದಿ: ಪುಟ್ಟಪ್ಪ)
First published:September 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ