ಕೊರೋನಾ ಲಾಕ್ಡೌನ್ ಹಿನ್ನಲೆಯಲ್ಲಿ ಆಯಾ ರಾಜ್ಯದ ಸರ್ಕಾರಗಳು ಸಿನಿಮಾ ಸಂಬಂಧಿಸಿದ ಕೆಲಸಗಳಿಗೆ ಅನುಮತಿ ನೀಡಿದೆ. ಹಾಗಾಗಿ ಕೆಲವು ನಿರ್ದೇಶಕರು ತಮ್ಮ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಕಂಪ್ಲೀಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಕೆಲವರು ಸ್ಕ್ರಿಪ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಂತೆ ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಅದರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಚ್ಚರಿ ಏನೆಂದರೆ ಆ ಸಿನಿಮಾಕ್ಕಾಗಿ ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗನಿಗೆ ಆಫರ್ ನೀಡಿದ್ದಾರಂತೆ.
ಸಾಕಷ್ಟು ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಪುರಿ ಜಗನ್ನಾಥ್ ಇದೀಗ ತಮ್ಮ ಹೊಸ ಸಿನಿಮಾದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಅವರಿಗೆ ನಟಿಸಲು ಆಫರ್ ನೀಡಿದ್ದಾರೆ ಎಂಬ ಮಾತು ಟಾಲಿವುಡ್ನಲ್ಲಿ ಕೇಳಿಬಂದಿದೆ. ಇನ್ನು ಡೇವಿಡ್ ಐಪಿಎಲ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಾರೆ. ಇವರ ಸ್ಟೋಟಕ ಬ್ಯಾಟಿಂಗ್ಗೆ ಅನೇಕರು ಫೀದಾ ಆಗಿದ್ದಾರೆ. ಸಾಕಷ್ಟು ತೆಲುಗು ಅಭಿಮಾನಿಗಳನ್ನು ಸಹ ಡೇವಿಡ್ ಹೊಂದಿದ್ದಾರೆ.
ಸದ್ಯ ಲಾಕ್ಡೌನ್ನಿಂದಾಗಿ ಐಪಿಎಲ್ ಪಂದ್ಯ ಮುಂದಕ್ಕೆ ಹೋಗಿದೆ. ಹೀಗಾಗಿ ಡೇವಿಡ್ ತನ್ನ ಪತ್ನಿ ಮಕ್ಕಳೊಂದಿಗೆ ತವರಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಬಿಡುವಿದ್ದಾಗ ಟಿಕ್ ಟಾಕ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ನಟನೆಯ ‘ಅಲಾ ವೈಕುಂಠಪುರಂಲೋ‘ ಸಿನಿಮಾದ ‘ಬುಟ್ಟ ಬೊಮ್ಮಾ‘ ಹಾಡಿಗೆ ವಾರ್ನರ್ ಮತ್ತು ಅವರ ಕುಟುಂಬ ಟಿಕ್ ಟಾಕ್ ಮಾಡಿದ್ದರು. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಟಿಕ್ ಟಾಕ್ ವಿಡಿಯೋ ನೋಡಿ ಅಲ್ಲು ಅರ್ಜುನ್ ಕೂಡ ಟ್ವಿಟ್ಟರ್ ಮೂಲಕ ವಾರ್ನರ್ಗೆ ಧನ್ಯವಾದ ತಿಳಿಸಿದ್ದರು.
ಮಾತ್ರವಲ್ಲದೆ, ವಾರ್ನರ್ ಮಹೇಶ್ ಬಾಬು ಅವರ ‘ಪೊಕಿರಿ‘ ಸಿನಿಮಾ ಡೈಲಾಗ್ ಹೇಳುವ ಟಿಕ್ ಟಾಕ್ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿ ಅನೇಕರು ವಾರ್ನರ್ ಅವರ ತೆಲುಗು ಪ್ರೀತಿಗೆ ಕಾಮೆಂಟ್ ಬರೆದಿದ್ದಾರೆ. ಇದೀಗ ನಿರ್ದೇಶಕ ಪುರಿ ಜಗತ್ನಾಥ್ ಕೂಡ ವಾರ್ನರ್ ಟಿಕ್ ಟಾಕ್ ವಿಡಿಯೋವನ್ನು ಗಮನಿಸಿ ತಮ್ಮ ಸಿನಿಮಾದಲ್ಲಿ ನಟಿಸಲು ಆಫರ್ವೊಂದನ್ನು ನೀಡಿದ್ದಾರೆ ಎಂಬ ಮಾತು ಕೇಳಿಬಂದಿದೆ.
Tamannaah: ಲಾಕ್ಡೌನ್ ಅವಧಿಯಲ್ಲಿ ಭಾಷೆ ಕಲಿಯುತ್ತಿದ್ದಾರೆ ನಟಿ ತಮನ್ನಾ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ