ಕೋವಿಡ್ ದೇಣಿಗೆ ನೀಡಲು ಬ್ಯಾಟ್ ಹರಾಜಿಗಿಟ್ಟ ಪಾಕ್ ಕ್ರಿಕೆಟಿಗ; 10 ಲಕ್ಷ ರೂಪಾಯಿಗೆ ಖರೀದಿಸಿದ ಭಾರತ

ಅಜರ್​ ಅಲಿ ಇದೇ ಬ್ಯಾಟ್​ ಮೂಲಕ 2016ರಲ್ಲಿ ಯುಎಇನಲ್ಲಿ ವೆಸ್ಟ್​ ಇಂಡೀಸ್​​ ವಿರುದ್ಧ ನಡೆದಿದ್ದ ಟೆಸ್ಟ್​ ಪಂದ್ಯದಲ್ಲಿ ತ್ರಿಶತಕ (302 ರನ್)​ ಬಾರಿಸಿದ್ದರು.  ಮಾತ್ರವಲ್ಲದೆ ಹಗಲು ರಾತ್ರಿ ನಡೆದ ಈ ಟೆಸ್ಟ್​ನಲ್ಲಿ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದರು.

news18-kannada
Updated:May 9, 2020, 8:08 PM IST
ಕೋವಿಡ್ ದೇಣಿಗೆ ನೀಡಲು ಬ್ಯಾಟ್ ಹರಾಜಿಗಿಟ್ಟ ಪಾಕ್ ಕ್ರಿಕೆಟಿಗ; 10 ಲಕ್ಷ ರೂಪಾಯಿಗೆ ಖರೀದಿಸಿದ ಭಾರತ
ಅಜರ್​ ಅಲಿ
  • Share this:
ಮಹಾಮಾರಿ ಕೊರೋನಾ ವೈರಸ್​ ಪಾಕ್​ ದೇಶವನ್ನೂ ಬಿಟ್ಟಿಲ್ಲ. ಅಲ್ಲಿನ ಸಾಕಷ್ಟು ಜನರು ಕೊರೋನಾ ವೈರಾಣುವನ್ನು ಎದುರಿಸುತ್ತಿದ್ದಾರೆ. ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಹಿನ್ನಲೆಯಲ್ಲಿ ಪಾಕ್​​ ಟೆಸ್ಟ್​​ ಕ್ರಿಕೆಟ್​ ತಂಡದ ನಾಯಕ ಅಜರ್​ ಅಲಿ ಕೊರೋನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ತಮ್ಮ ಬ್ಯಾಟ್​ ಹಾಗೂ ಜೆರ್ಸಿಯನ್ನು ಹರಾಜಿಗಿಟ್ಟಿದ್ದರು. ಈ ಬಗ್ಗೆ ಟ್ವಿಟ್ಟರ್​ನಲ್ಲಿ ಹೇಳಿಕೊಂಡಿದ್ದರು. ಇದೀಗ ಭಾರತದ ಮ್ಯೂಸಿಯಂವೊಂದು ಅಜರ್​ ಅಲಿ ಅವರ ಬ್ಯಾಟನ್ನು ಖರೀದಿಸಿದೆ.

ಪುಣೆ ಮೂಲದ ಬ್ಲೇಡ್ಸ್​​ ಆಫ್​ ಗ್ಲೋರಿ ಕ್ರಿಕೆಟ್​ ಮ್ಯೂಸಿಯಂ ಅಜರ್​ ಅಲಿ ಅವರು ಹರಾಜಿಗಿಟ್ಟ ಬ್ಯಾಟನ್ನು 10 ಲಕ್ಷ ರೂಪಾಯಿ ನೀಡಿ ಖರೀದಿಸಿದೆ.

ಅಜರ್​ ಅಲಿ ಇದೇ ಬ್ಯಾಟ್​ ಮೂಲಕ 2016ರಲ್ಲಿ ಯುಎಇನಲ್ಲಿ ವೆಸ್ಟ್​ ಇಂಡೀಸ್​​ ವಿರುದ್ಧ ನಡೆದಿದ್ದ ಟೆಸ್ಟ್​ ಪಂದ್ಯದಲ್ಲಿ ತ್ರಿಶತಕ (302 ರನ್)​ ಬಾರಿಸಿದ್ದರು.  ಮಾತ್ರವಲ್ಲದೆ ಹಗಲು ರಾತ್ರಿ ನಡೆದ ಈ ಟೆಸ್ಟ್​ನಲ್ಲಿ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದರು.

ಇದರ ಜೊತೆಗೆ 2017ರಲ್ಲಿ ಚಾಂಪಿಯನ್​​ ಟ್ರೋಫಿ ಫೈನಲ್​​ನಲ್ಲಿ ಧರಿಸಿದ್ದ ಜೆರ್ಸಿಯನ್ನು ಅಜರ್​ ಅಲಿ ಹರಾಜಿಗೆ ಇಟ್ಟಿದ್ದರು. ಪಾಕಿಸ್ತಾನ ತಂಡ ಆಟಗಾರರ ಸಹಿ ಈ ಜೆರ್ಸಿಯಲ್ಲಿತ್ತು. ಈ ಜೆರ್ಸಿಯನ್ನು ಪಾಕಿಸ್ತಾನ  ಮೂಲದ ಕ್ಯಾಲಿಫೋರ್ನಿಯಾದಲ್ಲಿರುವ ಕಾಶ್​​​ ವಿಲಾನಿ ಎಂಬವರು 11 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ.

ಈ ಹಿಂದೆ ಅಜರ್​ ಅಲಿ ‘ಈ ಬ್ಯಾಟ್‌ ಮತ್ತು ಜೆರ್ಸಿ ನನಗೆ ಅತ್ಯಂತ ಪ್ರಿಯ ವಸ್ತುಗಳು. ಇವೆರಡನ್ನೂ ಹರಾಜಿಗಿಟ್ಟು ದೊರೆತ ಹಣವನ್ನು ಕೋವಿಡ್‌ನಿಂದ ಸಂತ್ರಸ್ತರಾದವರಿಗೆ ನೀಡಲು ನಿರ್ಧರಿಸಿದ್ದೇನೆ. ಪ್ರತಿಯೊಂದರ ಮೂಲ ಬೆಲೆ 10 ಲಕ್ಷ ಪಾಕಿಸ್ತಾನ ರೂಪಾಯಿಗಳು. ಮೇ 5ರವರೆಗೆ ಹರಾಜು ಅವಧಿ ಇದೆ’ ಎಂದು ಅಲಿ ಟ್ವೀಟ್‌ ಮಾಡಿದ್ದರು. ಇದೀಗ ಅವರು ಹರಾಜಿಗಿಟ್ಟಿದ್ದ ಬ್ಯಾಟ್​​ ಹಾಗೂ ಜೆರ್ಸಿ ಎರಡು ಖರೀದಿಗೊಂಡಿದೆ.

ಗೂಗಲ್​ನಲ್ಲಿ ಹೆಚ್ಚು ಸರ್ಜ್​ ಆದ ನಟಿಮಣಿಯರು; ಯಾರಿಗೆ ನಂ.1 ಸ್ಥಾನ?
First published: May 9, 2020, 6:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading