IND vs WI: ಪೂಜಾರ ಶತಕ, ರೋಹಿತ್ ಅರ್ಧಶತಕ, ಮೊದಲ ದಿನದಾಟದಂತ್ಯಕ್ಕೆ ಭಾರತ 297/5

ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ ಜೊತೆಯಾದ ರೋಹಿತ್ ಶರ್ಮಾ ಅತ್ಯುತ್ತಮ ಆಟ ಪ್ರದರ್ಶಿಸಿದರು. ಕುಸಿದ ತಂಡಕ್ಕೆ ಆಸರೆಯಾದ ಈ ಜೋಡಿ ಎಚ್ಚರಿಕೆಯ ಆಟ ಪ್ರದರ್ಶಿಸಿ 132 ರನ್​ಗಳ ಜೊತೆಯಾಟ ಆಡಿದರು.

ಚೇತೇಶ್ವರ್ ಪೂಜಾರ

ಚೇತೇಶ್ವರ್ ಪೂಜಾರ

  • News18
  • Last Updated :
  • Share this:
ಬೆಂಗಳೂರು (ಆ. 18): ಅಂಟಿಗಾದಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ. ಪೂಜಾರ ಅವರ ಅಜೇಯ ಶತಕ ಹಾಗೂ ರೋಹಿತ್ ಶರ್ಮಾರ ಅರ್ಧಶತಕದ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 297 ರನ್ ಕಲೆಹಾಕಿದೆ.

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ನಾಯಕನಾಗಿ ಮುನ್ನಡೆಸಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಆದರೆ, ಭಾರತಕ್ಕೆ ಓಪನರ್​ಗಳು ಉತ್ತಮ ಆರಂಭ ಒದಗಿಸಿಲ್ಲ. ಇಬ್ಬರೂ ಕನ್ನಡಿಗರು ವೈಫಲ್ಯ ಅನುಭವಿಸಿದರು. ಮಯಾಂಕ್ ಅಗರ್ವಾಲ್ 12 ರನ್​ಗೆ ಔಟ್ ಆದರು, ಕೆ ಎಲ್ ರಾಹುಲ್ 46 ಎಸೆತಗಳಲ್ಲಿ 36 ರನ್​ಗೆ ಇನ್ನಿಂಗ್ಸ್​ ಅಂತ್ಯಗೊಳಿಸಿದರು. ನಾಯಕ ಅಜಿಂಕ್ಯ ರಹಾನೆ ನಿರೀಕ್ಷೆಗೆ ತಕ್ಕಂತೆ ಆಡದೆ 1 ರನ್​ಗೆ ಸುಸ್ತಾದರು.

ಈ ಸಂದರ್ಭ ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ ಜೊತೆಯಾದ ರೋಹಿತ್ ಶರ್ಮಾ ಅತ್ಯುತ್ತಮ ಆಟ ಪ್ರದರ್ಶಿಸಿದರು. ಕುಸಿದ ತಂಡಕ್ಕೆ ಆಸರೆಯಾದ ಈ ಜೋಡಿ ಎಚ್ಚರಿಕೆಯ ಆಟ ಪ್ರದರ್ಶಿಸಿ 132 ರನ್​ಗಳ ಜೊತೆಯಾಟ ಆಡಿದರು. ಚೆನ್ನಾಗಿಯೆ ಆಡುತ್ತಿದ್ದ ರೋಹಿತ್ ಶರ್ಮಾ ಅರ್ಧಶತಕ ಬಾರಿಸಿ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 115 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್​​ನೊಂದಿಗೆ 68 ರನ್ ಗಳಿಸಿ ಔಟ್ ಆದರು.

ಪಾಕ್​ ವೇಗಿಗೆ ಭಾರತದ ಹುಡುಗಿ ಕ್ಲೀನ್ ಬೌಲ್ಡ್: ಹೇಗಿದೆ ಗೊತ್ತಾ ಯುವಜೋಡಿ

 



ಬಳಿಕ ಹನಿಮಾ ವಿಹಾರಿ ಜೊತೆಯಾದ ಪೂಜಾರ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಆದರೆ, ಪೂಜಾರ ಶತಕ ಬಾರಿಸಿದ ಬೆನ್ನಲ್ಲೆ ರಿಟಾಯರ್ಡ್​ ಹೊಂದಿದರು. 187 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಿಡಿಸಿ ಪೂಜಾರ ಅಜೇಯ 100 ರನ್​ ಗಳಿಸಿ ಪೆವಿಲಿಯನ್ ಕಡೆ ನಡೆದರು. ರಿಷಭ್ ಪಂತ್(33) ಕೊಂಚ ಹೊತ್ತು ಬ್ಯಾಟ್ ಬೀಸಿ ಔಟ್ ಆದರು.

ಈ ಮೂಲಕ ಭಾರತ ಮೊದಲ ದಿನದಾಟ ಅಂತ್ಯಗೊಂಡಿದ್ದು 88.5 ಓವರ್​​​ನಲ್ಲಿ 297 ರನ್​ಗೆ 5 ವಿಕೆಟ್ ಕಳೆದುಕೊಂಡಿದೆ. ವಿಹಾರಿ 37 ಹಾಗೂ ರವೀಂದ್ರ ಜಡೇಜಾ 1 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. ವಿಂಡೀಸ್ ಪರ ಜೊನಥನ್ ಕಾರ್ಟರ್ 3 ವಿಕೆಟ್ ಕಿತ್ತರೆ, ಹಾರ್ಡಿಂಗ್ ಹಾಗೂ ಫ್ರಾಜೆರ್ 1 ವಿಕೆಟ್ ಪಡೆದರು.

First published: