ರಾಹುಲ್ ದ್ರಾವಿಡ್‍ಗೆ ಕ್ರಿಕೆಟ್ ಬಗ್ಗೆ ಎಲ್ಲವೂ ತಿಳಿದಿದೆ: ಪೃಥ್ವಿ ಶಾ

ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪೃಥ್ವಿ ಶಾ ಅವರು ಟೀಕೆಗಳನ್ನು ಎದುರಿಸಿದ್ದರು. ನಂತರ ಐಪಿಎಲ್ ಟೂರ್ನಮೆಂಟ್‍ನಲ್ಲಿ ಅದ್ಭುತ ಆಟ ಪ್ರದರ್ಶಿಸಿ ಇದೀಗ ಶ್ರೀಲಂಕಾ ಸರಣಿಯಲ್ಲಿ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.

Rahul Dravid

Rahul Dravid

 • Share this:

  ಭಾರತದ 19 ವರ್ಷದೊಳಗಿನ ಯುವ ಕ್ರಿಕೆಟ್ ತಂಡದ ಓಪನರ್ ಪೃಥ್ವಿ ಶಾ ಅವರು, ತಮ್ಮ ತಂಡಕ್ಕೆ ಈ ಹಿಂದೆ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ವೈಖರಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.


  ಅವರ ತರಬೇತಿಯ ಅಡಿಯಲ್ಲಿ ಆಡುವುದೇ ಒಂದು ವಿಭಿನ್ನ ರೀತಿಯ ಮನರಂಜನೆ, ಅನುಭವ. ಮುಖ್ಯ ತರಬೇತುದಾರರಾಗಿ ಆಯ್ಕೆಯಾದ ನಂತರ ದ್ರಾವಿಡ್ ಶ್ರೀಲಂಕಾದಲ್ಲಿ ಭಾರತ ತಂಡದ ಮೇಲ್ವಿಚಾರಣೆ ನಡೆಸಲಿದ್ದಾರೆ.


  ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪೃಥ್ವಿ ಶಾ ಅವರು ಟೀಕೆಗಳನ್ನು ಎದುರಿಸಿದ್ದರು. ನಂತರ ಐಪಿಎಲ್ ಟೂರ್ನಮೆಂಟ್‍ನಲ್ಲಿ ಅದ್ಭುತ ಆಟ ಪ್ರದರ್ಶಿಸಿ ಇದೀಗ ಶ್ರೀಲಂಕಾ ಸರಣಿಯಲ್ಲಿ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.


  19 ವರ್ಷದೊಳಗಿನವರ ವಿಶ್ವಕಪ್ ತರಬೇತುದಾರರ ಮಾರ್ಗದರ್ಶನದಲ್ಲಿ ಮತ್ತು ಮತ್ತೊಮ್ಮೆ ಪ್ರಪಂಚದಿಂದ ಹೊರಗೆ ತೆರಳಿ ಮತ್ತಷ್ಟು ಕ್ರಿಕೆಟ್ ಅನುಭವವನ್ನು ಹೊಂದಲು ಉತ್ಸುಕರಾಗಿದ್ದಾರೆ.


  ರಾಹುಲ್ ಸರ್ ಅವರೊಟ್ಟಿಗಿನ ಆಟ ಒಂದು ವಿಭಿನ್ನವಾದ ಮನರಂಜನೆ ನೀಡುತ್ತದೆ. ಅವರು 19 ವಯೋಮಿತಿಯೊಳಗಿನ ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗಿದ್ದರು. ಅವರು ಮಾತನಾಡುವ ರೀತಿ, ಅವರು ಕೋಚಿಂಗ್ ಅನುಭವವನ್ನು ನಮ್ಮೊಟ್ಟಿಗೆ ಶೇರ್ ಮಾಡುವ ರೀತಿ ನಿಜವಾಗಿಯೂ ಅದ್ಭುತ. ಅವರು ಆಟದ ಬಗ್ಗೆ ಮಾತನಾಡಲು ಬಂದರೆ ಸಾಕು ಅವರಲ್ಲಿ ಕ್ರಿಕೆಟ್ ಕುರಿತಾಗಿ ಹಂಚಿಕೊಳ್ಳುವ ರೀತಿಯಲ್ಲಿ ಕ್ರಿಕೆಟ್ ಕುರಿತಾಗಿ ಅವರು ಹೊಂದಿರುವ ಜ್ಞಾನ ಅನಾವರಣ ಆಗುತ್ತದೆ. ದ್ರಾವಿಡ್ ಅವರಿಗೆ ಕ್ರಿಕೆಟ್ ಬಗ್ಗೆ ಪ್ರತಿಯೊಂದು ಅಂಶವೂ ತಿಳಿದಿದೆ. ಪರಿಸ್ಥಿತಿಗಳ ಬಗ್ಗೆ ಅವರು ಮಾತನಾಡುವ ರೀತಿ, ಅದನ್ನು ಎದುರಿಸುವ ಪರಿ ನಿಜವಾಗಿಯೂ ತರ್ಕಕ್ಕೆ ನಿಲುಕದ್ದು ಎಂದು ಇಂಡಿಯನ್ ಎಕ್ಸ್‍ಪ್ರೆಸ್‍ಗೆ ನೀಡಿದ ಸಂದರ್ಶನದಲ್ಲಿ ದ್ರಾವಿಡ್ ಅವರ ಕ್ರಿಕೆಟ್ ವೈಖರಿಯನ್ನು ಬಣ್ಣಿಸಿದ್ದಾರೆ.


  ದ್ರಾವಿಡ್ ಸರ್ ಅವರು ಪ್ರತಿಯೊಬ್ಬ ಆಟಗಾರರಿಂದಲೂ ಡ್ರೆಸಿಂಗ್ ರೂಂನಲ್ಲಿ ಶಿಸ್ತನ್ನು ಅಪೇಕ್ಷಿಸುತ್ತಾರೆ. ಇದು ಅವರ ಒಂದು ಶಿಸ್ತು. ನಾನು ರಾಹುಲ್ ಸರ್ ಅವರೊಂದಿಗೆ ಅಭ್ಯಾಸದ ಅವಧಿಗಳನ್ನು ಎದುರು ನೋಡುತ್ತಿದ್ದೇನೆ ಏಕೆಂದರೆ ನಾನು ಅವರೊಂದಿಗೆ ಗಂಟೆಗಟ್ಟಲೆ ಮಾತನಾಡಲು ಇಷ್ಟಪಡುತ್ತೇನೆ. ನಾನು ಈ ಪ್ರವಾಸದ ಅವಕಾಶವನ್ನು ಪಡೆದುಕೊಳ್ಳಬೇಕು. ನಾನು ಮರಳಿ ಭಾರತ ತಂಡಕ್ಕೆ ಬರಲು ಉತ್ಸುಕನಾಗಿದ್ದೇನೆ. ನಾನು ಯಾವಾಗಲೂ ನನ್ನ ತಂಡವನ್ನು ನನ್ನ ಮೇಲೆ ಹೊತ್ತು ತಿರುಗುತ್ತೇನೆ. ಅಂದರೆ ಭಾರತವನ್ನು ಯಾವಾಗಲೂ ಅಗ್ರಸ್ಥಾನದಲ್ಲಿರಿಸಲು ಶ್ರಮವಹಿಸುತ್ತೇನೆ. ಅದು ಭಾರತ, ರಣಜಿ ಟ್ರೋಫಿ ತಂಡ, ಕ್ಲಬ್ ಅಥವಾ ನನ್ನ ಶಾಲಾ ತಂಡವಾಗಿರಲಿ. ನನ್ನಲ್ಲಿ ಸಾಧ್ಯವಾದಷ್ಟು ಅತ್ಯುತ್ತಮವಾದದನ್ನು ನೀಡಲು ನಾನು ಸದಾ ಬಯಸುತ್ತೇನೆ, ”ಎಂದು ಪೃಥ್ವಿ ಹೇಳಿದರು.


  ಮುಂಗಾಲಿನ ಗಾಯದ ಸಮಸ್ಯೆ ಕಾರಣ ಶುಭಮನ್ ಗಿಲ್ ಮುಂಬರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯಿಂದ ಹೊರಬಿದ್ದಿದ್ದು, ಪೃಥ್ವಿ ಶಾ ಬದಲಿ ಆಟಗಾರನಾಗಿ ಇಂಗ್ಲೆಂಡ್‍ಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಪಂದ್ಯದಲ್ಲಿ ಪೃಥ್ವಿ ಶಾ ಎರಡನೇ ಓಪನರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.


  ಇದನ್ನೂ ಓದಿ: Samantha Akkineni: ವೈರಲ್​ ಆಗುತ್ತಿರುವ ಸಮಂತಾರ ಬ್ಯಾಕ್​ಲೆಸ್​ ಫೋಟೋ ನೋಡಿ ಸುಸ್ತಾದ ರಾಕುಲ್​ ಪ್ರೀತ್​ ಸಿಂಗ್​..!

  ಭಾರತದ ಸೀಮಿತ ಓವರ್​ಗಳ ಪ್ರವಾಸ ಜುಲೈ 13 ರಂದು ಮೊದಲ ಏಕದಿನ ಪಂದ್ಯದೊಂದಿಗೆ ಪ್ರಾರಂಭವಾಗುತ್ತದೆ. ಎಲ್ಲಾ ಆರು ಪಂದ್ಯಗಳು ಶ್ರೀಲಂಕಾ ದೇಶದ ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: