2011ರ ವಿಶ್ವಕಪ್ ಫೈನಲ್ನ ಭಾರತ ಹಾಗೂ ಶ್ರೀಲಂಕಾ ನಡುವಣ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿದೆ ಎಂಬ ಆರೋಪವನ್ನು ಸೂಕ್ಷ್ಮವಾಗಿ ಪರಿಗಣಿಸಿರುವ ಶ್ರೀಲಂಕಾ ಸರ್ಕಾರ ಕ್ರಿಮಿನಲ್ ತನಿಖೆ ನಡೆಸಲು ಆದೇಶಿಸಿತ್ತು. 2011ರಲ್ಲಿ ಏಕದಿನ ವಿಶ್ವಕಪ್ ಫೈನಲ್ ವೇಳೆ ಭಾರತ-ಶ್ರೀಲಂಕಾ ಮಧ್ಯೆ ಫಿಕ್ಸಿಂಗ್ ನಡೆದಿತ್ತು, ಶ್ರೀಲಂಕಾ ತಂಡ ಗೆಲುವನ್ನು ಮಾರಿಕೊಂಡಿತ್ತು ಎಂಬರ್ಥದಲ್ಲಿ ಲಂಕಾ ಕ್ರೀಡಾ ಸಚಿವ ಮಹಿಂದಾನಂದ ಅಲುತ್‌ಗಮಗೆ ಅವರು ಆರೋಪಿಸಿದ್ದರು. ಸದ್ಯ ಈ ಆರೋಪದ ಬಗ್ಗೆ ಗಂಭೀರ ತನಿಖೆ ನಡೆಸಲು ಶ್ರೀಲಂಕಾ ಮುಂದಾಗಿದೆ.
ಈ ಸಂಬಂಧ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕರ ಅವರನ್ನು 10 ಗಂಟೆಗಳ ಕಾಲ ಪೊಲೀಸರ ವಿಶೇಷ ತನಿಖಾ ತಂಡ ವಿಚಾರಣೆಗೊಳಪಡಿಸಿದೆ.
ಸಲಹೆ ನೀಡಲು ಹೋಗಿದ್ದ ಕೋಚ್ಗೆ ಚಾಕು ತೋರಿಸಿದ್ದ ಈ ಸ್ಟಾರ್ ಕ್ರಿಕೆಟಿಗ; ಶಾಕಿಂಗ್ ವಿಚಾರ ಬಹಿರಂಗ
ಇನ್ನೂ ಇದೇವೇಳೆ ಆಧಾರರಹಿತ ಮ್ಯಾಚ್ ಫಿಕ್ಸಿಂಗ್ ಆರೋಪಗಳ ಮೇಲೆ ಕುಮಾರ ಸಂಗಕ್ಕರ ಮತ್ತು ಇತರ ಕ್ರಿಕೆಟಿಗರಿಗೆ ನಿರಂತರ ಕಿರುಕುಳ ನೀಡಲಾಗುತ್ತದೆ ಎಂದು ಆರೋಪಿಸಿ ಶ್ರೀಲಂಕಾ ಕ್ರೀಡಾ ಸಚಿವಾಲಯದ ಮುಂದೆ 'ಸಮಗಿ ಜನ ಬಾಲವೇಗಯಾ' ಸಂಘಟನೆಯ ಯುವ ವಿಭಾಗದ ಸದಸ್ಯರು ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ.
Members of the Samagi Tharuna Balawegaya (@youthforsjb) are currently staging a protest outside the SLC against the harassment Cricketer Kumar Sangakkara and 2011 cricket team. #SriLanka #LKA #Matchfixing #ProtestSL via @kataclysmichaos pic.twitter.com/BfOr6tcsOK
— Sri Lanka Tweet 🇱🇰 (@SriLankaTweet) July 2, 2020
IPL 2020: ಈ ಬಾರಿ ವಿದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆ?
ಮೂಲಗಳ ಪ್ರಕಾರ, ಸಂಗಕ್ಕರ ಅವರು ಮುಂದಿನ ವಾರ ತಮ್ಮ ಹೇಳಿಕೆ ದಾಖಲಿಸಬೇಕಿತ್ತು. ಆದರೆ, ಶೀಘ್ರವಾಗಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರಿಂದ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ವೇಳೆ ಏನೆಲ್ಲ ಮಾಹಿತಿ ಕಲೆಹಾಕಲಾಗಿದೆ ಎಂಬ ಬಗ್ಗೆ ತಿಳಿದುಬಂದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ