Pro Kabaddi 2019: ಪ್ರೋ ಕಬಡ್ಡಿ ಲೀಗ್​ನಲ್ಲಿ ಪವನ್ ದಾಖಲೆ; ಪ್ಲೇ ಆಫ್​​ಗೆ ಲಗ್ಗೆಯಿಟ್ಟ ಬೆಂಗಳೂರು

ಬೆಂಗಳೂರು ತಂಡ ದಾಳಿಯಲ್ಲಿ ಒಟ್ಟು 39 ಅಂಕಗಳನ್ನು ಕಲೆಹಾಕಿತು. ಎಲ್ಲಾ ಅಂಕಗಳು ಪವನ್ ಕಲೆಹಾಕಿದ್ದು ಎನ್ನುವುದು ವಿಶೇಷ.

Vinay Bhat | news18-kannada
Updated:October 3, 2019, 10:22 AM IST
Pro Kabaddi 2019: ಪ್ರೋ ಕಬಡ್ಡಿ ಲೀಗ್​ನಲ್ಲಿ ಪವನ್ ದಾಖಲೆ; ಪ್ಲೇ ಆಫ್​​ಗೆ ಲಗ್ಗೆಯಿಟ್ಟ ಬೆಂಗಳೂರು
ಪವನ್ ಕುಮಾರ್
  • Share this:
ಬೆಂಗಳೂರು (ಅ. 03): ಪ್ರೋ ಕಬಡ್ಡಿ ಟೂರ್ನಿಯ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್​ ತಂಡ ಸತತ ಎರಡನೇ ಬಾರಿ ಪ್ಲೇ ಆಫ್​​ಗೆ ಲಗ್ಗೆಯಿಟ್ಟಿದೆ. ನಿನ್ನೆ ನಡೆದ ಹರಿಯಾಣ ಸ್ಟೀಲರ್ಸ್​ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಸುಲಭ ಜಯ ಸಾಧಿಸಿತು.

ಸೂಪರ್ ರೈಡರ್ ಪವನ್ ಕುಮಾರ್ ಅವರ ಅತ್ಯುತ್ತಮ ಆಟದ ನೆರವಿನಿಂದ ಹರ್ಯಾಣ ವಿರುದ್ಧ ಬುಲ್ಸ್​ ತಂಡ 56-39 ಅಂತರದಿಂದ ಗೆದ್ದು ಕ್ವಾಲಿಫೈಯರ್ ಪ್ರವೇಶಿಸಿದೆ.

ಪವನ್ 34 ಬಾರಿ ಎದುರಾಳಿ ಕೋರ್ಟ್​ಗೆ ಕಾಲಿಟ್ಟು 39 ಅಂಕಗಳನ್ನು ಕಲೆಹಾಕಿದರು. ಅಲ್ಲದೆ ಈ ಸೀಸನ್‌ನಲ್ಲಿ ಅತೀ ಹೆಚ್ಚು ರೈಡಿಂಗ್ ಪಾಯಿಂಟ್‌ ಹೊಂದಿದ್ದ ಪಾಟ್ನಾ ಪೈರೇಟ್ಸ್ ಟಾಪ್ ರೈಡರ್ ಪರ್ದೀಪ್ ನರ್ವಾಲ್ ಹೆಸರಿನಲ್ಲಿದ್ದ ದಾಖಲೆಯನ್ನು ಪವನ್ ಸರಿಗಟ್ಟಿದರು.

India vs South Africa: ರೋಹಿತ್ ಶತಕ, ಅಗರ್ವಾಲ್ ಅರ್ಧಶತಕ; ಮೊದಲ ದಿನ ಭಾರತ ಮೇಲುಗೈ!

ಪಂದ್ಯದ ಆರಂಭದಲ್ಲಿ ಹರಿಯಾಣ ಉತ್ತಮ ಪ್ರದರ್ಶನ ನೀಡಿತಾದರು ಬಳಿಕ ಅಂಕದಲ್ಲಿ ಕುಸಿತ ಕಂಡಿತು. ದ್ವಿತಿಯಾರ್ಧದಲ್ಲಿ ಹರಿಯಾಣಕ್ಕೆ ಚೇತರಿಕೆ ಕಾಣಲು ಬಿಡದ ಬುಲ್ಸ್​ ತನ್ನ ಆರ್ಭಟ ಮುಂದುವರಿಸಿತು. ಹೀಗಾಗಿ ಎದುರಾಳಿ ತಂಡವನ್ನು ಮೇಲಿಂದ ಮೇಲೆ ಬುಲ್ಸ್​ ಆಲೌಟ್​ ಬಲೆಗೆ ಸಿಲುಕಿಸಿ ತನ್ನ ಅಂಕ ಏರಿಕೆ ಮಾಡಿಕೊಂಡಿತು.

ಬೆಂಗಳೂರು ತಂಡ ದಾಳಿಯಲ್ಲಿ ಒಟ್ಟು 39 ಅಂಕಗಳನ್ನು ಕಲೆಹಾಕಿತು. ಎಲ್ಲಾ ಅಂಕಗಳು ಪವನ್ ಕಲೆಹಾಕಿದ್ದು ಎನ್ನುವುದು ವಿಶೇಷ.

ಹರ್ಯಾಣ ಸ್ಟೀಲರ್ಸ್‌ನಿಂದ ಪ್ರಶಾಂತ್‌ ಕುಮಾರ್ 17, ವಿಕಾಸ್ ಖಂಡೋಲಾ 6, ವಿನಯ್ 5, ನವೀನ್ 3, ರವಿ ಕುಮಾರ್ 1, ಸುನಿಲ್ 1, ಧರ್ಮರಾಜ್ 1 ಅಂಕ ಸೇರಿಸಿ ಎದುರಾಳಿಗೆ ತಕ್ಕ ಮಟ್ಟಿನ ಪೈಪೋಟಿ ನೀಡಿದರಷ್ಟೆ.
First published: October 3, 2019, 7:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading