Pro Kabaddi 2019: ತಲೈವಾಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಡೆಲ್ಲಿ

30-29 ಅಂಕದೊಂದಿಗೆ ದಬಾಂಗ್ ಡೆಲ್ಲಿ ರೋಚಕ ಜಯ ತನ್ನದಾಗಿಸಿತು. ಗೆಲ್ಲುವ ಪಂದ್ಯದಲ್ಲಿ ತಲೈವಾಸ್ ತಂಡ ಸೋಲು ಕಾಣಬೇಕಾಯಿತು.

Vinay Bhat | news18
Updated:July 25, 2019, 10:42 PM IST
Pro Kabaddi 2019: ತಲೈವಾಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಡೆಲ್ಲಿ
ತಮಿಳ್ ತಲೈವಾಸ್ ಹಾಗೂ ದಬಾಂಗ್ ಡೆಲ್ಲಿ ತಂಡ
  • News18
  • Last Updated: July 25, 2019, 10:42 PM IST
  • Share this:
ಹೈದರಾಬಾದ್ (ಜು. 25): ಪ್ರೋ ಕಬಡ್ಡಿ ಲೀಗ್​ನ 7ನೇ ಆವೃತ್ತಿ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಇಂದು ಇಲ್ಲಿನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ತಮಿಳ್ ತಲೈವಾಸ್ ವಿರುದ್ಧದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ ರೋಚಕ ಗೆಲುವು ದಾಖಲಿಸಿದೆ.

ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ್ದ ತಮಿಳ್ ತಲೈವಾಸ್ ತಂಡ ಕೊನೆಯ ಹಂತದ ವರೆಗೂ ಗೆಲುವು ಸಾಧಿಸುತ್ತದೆ ಎಂದೇ ನಂಬಲಾಗಿತ್ತು. ಆದರೆ, ಅಂತಿಮ ಐದು ನಿಮಿಷದಲ್ಲಿ 20-28ರಲ್ಲಿ ಹಿನ್ನಡೆಯಲ್ಲಿದ್ದ ಡೆಲ್ಲಿ, ನವೀನ್‌ ಕುಮಾರ್‌ ಅವರ ಸೂಪರ್‌ ರೇಡ್‌ ಚಾಣಾಕ್ಷತೆಯಿಂದ ಹಿನ್ನಡೆ ತಗ್ಗಿಸಿಕೊಂಡಿತು.

ಪರಿಣಾಮ ಸುಲಭವಾಗಿ ಗೆಲ್ಲುವ ಪಂದ್ಯದಲ್ಲಿ ತಲೈವಾಸ್ ತಂಡ ಸೋಲು ಕಾಣಬೇಕಾಯಿತು. ಅಂತಿಮವಾಗಿ 30-29 ಅಂಕದೊಂದಿಗೆ ದಬಾಂಗ್ ಡೆಲ್ಲಿ ರೋಚಕ ಜಯ ತನ್ನದಾಗಿಸಿತು.

ತಾರಕಕ್ಕೇರಿದ ಕೊಹ್ಲಿ-ರೋಹಿತ್ ಒಳ ಜಗಳ; ಇನ್​​ಸ್ಟಾಗ್ರಾಂನಲ್ಲಿ ಹಿಟ್​ಮ್ಯಾನ್ ಮಾಡಿದ್ದೇನು ನೋಡಿ!

 



ಡೆಲ್ಲಿ ಪರ ನವೀನ್​ ಕುಮಾರ್​ 8, ಆಲ್​ರೌಂಡರ್​ ಮಿರಾಜ್​ ಶೇಖ್​ 6 , ಜೋಗಿಂದರ್​ ಸಿಂಗ್​ ನರ್ವಾಲ್​ 4 ವಿಶಾಲ್​ ಮನೆ 2 ಅಂಕ ತಮ್ಮ ಖಾತೆಗೆ ಸೇರಿಸಿಕೊಂಡರು.

ತಮಿಳ್​ ತಲೈವಾಸ್​ ಪರ ರಾಹುಲ್​ ಚೌದರಿ 7, ಅಜಯ್​ ಠಾಕೂರ್​ ಹಾಗೂ ಡಿಫೆಂಡರ್​ ಮಂಜೀತ್​ ಚಿಲ್ಲರ್ ತಲಾ​ 5, ಮೋಹಿತ್​ ಚಿಲ್ಲರ್​ ಹಾಗೂ ಅಜಿತ್ ತಲಾ​ 2 ಅಂಕ ಗಳಿಸಿದರು.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ

First published:July 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ