Vinay BhatVinay Bhat
|
news18-kannada Updated:October 20, 2019, 8:07 AM IST
ಚೊಚ್ಚಲ ಪ್ರೋ ಕಬಡ್ಡಿ ಕಿರೀಟ ತೊಟ್ಟ ಬೆಂಗಾಲ್ ವಾರಿಯರ್ಸ್
ಬೆಂಗಳೂರು (ಅ. 20): ಏಳನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ನಲ್ಲಿ ದಬಾಂಗ್ ಡೆಲ್ಲಿಗೆ ಸೋಲುಣಿಸಿದ ಬೆಂಗಾಲ್ ವಾರಿಯರ್ಸ್ ತಂಡ ಚೊಚ್ಚಲ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದೆ.
ಶನಿವಾರ ಅಹಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಾರಿಯರ್ಸ್ ತಂಡ 39-34 ಅಂಕಗಳ ಅಂತರದಿಂದ ದಬಾಂಗ್ ತಂಡವನ್ನು ಸೋಲಿಸಿತು. ಇದರೊಂದಿಗೆ ಪ್ರೋ ಕಬಡ್ಡಿ ಇತಿಹಾಸದಲ್ಲಿ ಬೆಂಗಾಲ್ ಮೊದಲ ಬಾರಿಗೆ ಪ್ರಶಸ್ತಿ ಗೆದ್ದರೆ, ಡೆಲ್ಲಿ ರನ್ನರ್ ಅಪ್ಗೆ ತೃಪ್ತಿ ಪಟ್ಟುಕೊಂಡಿತು.
ಆರಂಭದಲ್ಲಿ ಡೆಲ್ಲಿ ತಂಡ ಬೆಂಗಾಲ್ ಮೇಲೆ ಸವಾರಿ ಮಾಡಿ 14-9 ಅಂತರದ ಮುನ್ನಡೆ ಪಡೆದುಕೊಂಡಿತ್ತು. ನಂತರದಲ್ಲಿ ಅಂಕ ಸಮ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ ಬೆಂಗಾಲ್ ಎದುರಾಳಿ ತಂಡದ ಮೇಲೆ ತಿರುಗಿ ಬಿತ್ತು. ಬಳಿಕ ಅದ್ಭುತ ಪ್ರದರ್ಶನ ನೀಡಿದ ಬೆಂಗಾಲ್ ಕಮ್ಬ್ಯಾಕ್ ಮಾಡಿತು.
India vs South Africa: ರೋಹಿತ್-ರಹಾನೆ ಭರ್ಜರಿ ಆಟ; ಮೊದಲ ದಿನದಾಟದ ಅಂತ್ಯಕ್ಕೆ ಭಾರತ 224-3
ದ್ವಿತಿಯಾರ್ಧದ ಆರಂಭದಲ್ಲೇ ಮೊಹಮ್ಮದ್ ನಬೀಭಕ್ಷ್ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಆದರೆ ಬೆಂಗಾಲ್ ಮಗದೊಮ್ಮೆ ಸಾಂಘಿಕ ಪ್ರದರ್ಶನವನ್ನು ನೀಡಿತು. ಇದರಿಂದಾಗಿ ಉತ್ತಮ ಮುನ್ನಡೆ ಸಾಧಿಸಿತು.
ಬೆಸ್ಟ್ ರೈಡರ್ ಹಾಗೂ ಸ್ಟೈಲೀಶ್ ಪ್ಲೇಯರ್ ಆಫ್ ದಿ ಮ್ಯಾಚ್ ನವೀನ್ ಕುಮಾರ್ ತಮ್ಮದಾಗಿಸಿಕೊಂಡರೆ, ಬೆಸ್ಟ್ ಡಿಪೆಂಡರ್ ಆಫ್ ದಿ ಮ್ಯಾಚ್ ಜೀವ್ ಕುಮಾರ್ಗೆ ದಕ್ಕಿತು. ಗೇಮ್ ಚೇಂಜರ್ ಅವಾರ್ಡ್ ಮೊಹಮದ್ಗೆ ನೀಡಲಾಯಿತು.
First published:
October 20, 2019, 8:07 AM IST