HOME » NEWS » Sports » CRICKET PRIYAM GARG WAS 5 WHEN SURESH RAINA MADE INDIA DEBUT NOW HE WILL LEAD HIM IN SYED MUSHTAQ TROPHY ZP

ಸುರೇಶ್ ರೈನಾ ಪದಾರ್ಪಣೆ ಮಾಡಿದಾಗ 5 ವರ್ಷದ ಬಾಲಕ, ಇದೀಗ ಅವರಿಗೆ ನಾಯಕ..!

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಉತ್ತರ ಪ್ರದೇಶ ತಂಡವು ಎ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಇದೇ ಗುಂಪಿನಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಕೂಡ ಇದ್ದು ಉಭಯ ತಂಡಗಳು ಬೆಂಗಳೂರಿನಲ್ಲಿ ಮುಖಾಮುಖಿಯಾಗಲಿವೆ.

news18-kannada
Updated:January 5, 2021, 7:23 PM IST
ಸುರೇಶ್ ರೈನಾ ಪದಾರ್ಪಣೆ ಮಾಡಿದಾಗ 5 ವರ್ಷದ ಬಾಲಕ, ಇದೀಗ ಅವರಿಗೆ ನಾಯಕ..!
Raina-Garg
  • Share this:
ಪ್ರಿಯಂ ಗರ್ಗ್...ಈ ಹೆಸರು ಬಹುತೇಕರಿಗೆ ಪರಿಚಿತ. ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಪರ ಕಣಕ್ಕಿಳಿದಿದ್ದ ಪ್ರಿಯಂ ಇದೀಗ ಉತ್ತರ ಪ್ರದೇಶ ಟಿ20 ತಂಡ ನಾಯಕ. ಹೌದು, ಅಂಡರ್​ 19 ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಗರ್ಗ್​ಗೆ ಈ ಬಾರಿ ಯುಪಿ ತಂಡದ ನಾಯಕನ ಪಟ್ಟ ಒಲಿದು ಬಂದಿದೆ. ಆದರೆ ಇಲ್ಲಿ ಆಸಕ್ತಿಕರ ವಿಷಯ ಎಂದರೆ ಸೈಯದ್ ಮುಷ್ತಾಕ್ ಅಲಿ ಟೂರ್ನಿಗಾಗಿ ಆಯ್ಕೆ ಮಾಡಲಾಗಿರುವ ಉತ್ತರ ಪ್ರದೇಶ ತಂಡದಲ್ಲಿ ಸುರೇಶ್ ರೈನಾ ಇರುವುದು.

ಹೌದು, ಸುರೇಶ್ ರೈನಾ 2005ರಲ್ಲಿ ಟೀಮ್ ಇಂಡಿಯಾ ಪರ ಪಾದರ್ಪಣೆ ಮಾಡಿದಾಗ ಪ್ರಿಯಂ ಗರ್ಗ್​ಗೆ ಕೇವಲ 5 ವರ್ಷ. ಇದೀಗ ಗರ್ಗ್​ ನಾಯಕತ್ವದ ಅಡಿಯಲ್ಲಿ ರೈನಾ ಆಡಲಿದ್ದಾರೆ. 20ರ ಹರೆಯ ಪ್ರಿಯಂ ಗರ್ಗ್ ಇದೇ ಮೊದಲ ಬಾರಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ರಾಜ್ಯ ತಂಡವನ್ನು ಮುನ್ನಡೆಸುವ ಅವಕಾಶ ಪಡೆದುಕೊಂಡಿದ್ದಾರೆ.

ಇನ್ನು 34 ವರ್ಷದ ಸುರೇಶ್ ರೈನಾ ಕಳೆದ ಆಗಸ್ಟ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಇದರ ಬಳಿಕ ನಡೆದ ಐಪಿಎಲ್​ನಲ್ಲಿ ರೈನಾ ಸಿಎಸ್​ಕೆ ಪರ ಕಣಕ್ಕಿಳಿದಿರಲಿಲ್ಲ. ಹೀಗಾಗಿ ಈ ಬಾರಿ ನಡೆಯುವ ದೇಶೀಯ ಟಿ20 ಟೂರ್ನಿಯಲ್ಲಿ ಕಣಕ್ಕಿಳಿಯಲು ಎಡಗೈ ದಾಂಡಿಗ ಬಯಸಿದ್ದಾರೆ. ಅದರಂತೆ ಉತ್ತರ ಪ್ರದೇಶದ ಪರ ರೈನಾ ಬ್ಯಾಟ್ ಬೀಸಲಿದ್ದು, ಈ ಮೂಲಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಉತ್ತರ ಪ್ರದೇಶ ತಂಡವು ಎ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಇದೇ ಗುಂಪಿನಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಕೂಡ ಇದ್ದು ಬೆಂಗಳೂರಿನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಜನವರಿ 10 ರಿಂದ ಶುರುವಾಗಲಿರುವ ಮುಷ್ತಾಕ್ ಅಲಿ ಟೂರ್ನಿಯ ಫೈನಲ್ ಪಂದ್ಯ ಜನವರಿ 31 ರಂದು ನಡೆಯಲಿದೆ.

ಉತ್ತರ ಪ್ರದೇಶ ತಂಡ ಹೀಗಿದೆ:
ಪ್ರಿಯಮ್ ಗರ್ಗ್ (ನಾಯಕ), ಕರಣ್ ಶರ್ಮಾ (ಉಪನಾಯಕ), ಸುರೇಶ್ ರೈನಾ, ರಿಂಕು ಸಿಂಗ್, ಮಾಧವ್ ಕೌಶಿಕ್, ಸಮರ್ತ್ ಸಿಂಗ್, ಶುಭಮ್ ಚೌಬೆ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್ಯನ್ ಜುಯಲ್ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಅಂಕಿತ್ ರಾಜ್‌ಪೂತ್, ಮೊಹ್ಸಿನ್ ಖಾನ್ , ಶಿವ ಸಿಂಗ್, ಶಾನು ಸೈನಿ.
ಕರ್ನಾಟಕ ತಂಡ ಇಂತಿದೆ:
ಕರುಣ್ ನಾಯರ್ (ನಾಯಕ), ಪವನ್ ದೇಶಪಾಂಡೆ (ಉಪನಾಯಕ), ದೇವದತ್ ಪಡಿಕ್ಕಲ್, ರೋಹನ್ ಕದಮ್, ಸಿದ್ಧಾರ್ಥ್ ಕೆವಿ, ಶ್ರೀಜಿತ್ ಕೆಎಲ್ (ವಿಕೆಟ್ ಕೀಪರ್), ಶರತ್ ಬಿಆರ್‌ (ವಿಕೆಟ್ ಕೀಪರ್), ಪ್ರವೀಣ್ ದುಬೆ, ಮಿಥುನ್ ಎ, ಪ್ರಸಿದ್ಧ್ ಎಂ ಕೃಷ್ಣ, ಪ್ರತೀಕ್ ಜೈನ್, ಕೌಶಿಕ್ ವಿ, ರೋನಿತ್ ಮೋರೆ, ದರ್ಶನ್ ಎಂಬಿ, ಮನೋಜ್ ಭಂಡಾಜೆ, ಶುಭಾಂಗ್ ಹೆಗ್ಡೆ, ಅನಿರುದ್ಧ್ ಜೋಶಿ, ಶ್ರೇಯಸ್ ಗೋಪಾಲ್, ಗೌತಮ್ ಕೆ, ಸುಚಿತ್ ಜೆ.
Published by: zahir
First published: January 5, 2021, 7:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories