Prithvi Shaw Record - ಪೃಥ್ವಿ ಶಾ ಡಬಲ್ ಸೆಂಚುರಿ; ವಿಜಯ್ ಹಜಾರೆ ಟ್ರೋಫಿಯಲ್ಲಿ ಹೊಸ ದಾಖಲೆ

ಮುಂಬೈ ಕ್ರಿಕೆಟ್ ತಂಡದ ನಾಯಕ ಪೃಥ್ವಿ ಶಾ ಅಜೇಯ 227 ರನ್ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ. ಪಾಂಡಿಚೆರಿ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಅವರ ಈ ಆಟ ಬಂದಿದೆ. ಟೂರ್ನಿ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರ್ ಇದಾಗಿದೆ.

ಪೃಥ್ವಿ ಶಾ

ಪೃಥ್ವಿ ಶಾ

 • Share this:
  ಜೈಪುರ(ಫೆ. 25): ಭಾರತದ ಉದಯೋನ್ಮುಖ ಬ್ಯಾಟಿಂಗ್ ಪ್ರತಿಭೆ ಪೃಥ್ವಿ ಶಾ ವಿಜಯ್ ಹಜಾರೆ ಟ್ರೋಫಿಯಲ್ಲಿ ಸಖತ್ತಾಗಿ ಮಿಂಚುತ್ತಿದ್ದಾರೆ. ಇಂದು ಡಿ ಗುಂಪಿನಲ್ಲಿ ಪಾಂಡಿಚೆರಿ ವಿರುದ್ಧದ ಪಂದ್ಯದಲ್ಲಿ ಶಾ ದ್ವಿಶತಕ ಭಾರಿಸಿದ್ದಾರೆ. ಕೇವಲ 152 ಎಸೆತದಲ್ಲಿ ಅಜೇಯ 227 ರನ್ ಭಾರಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಗಳಿಸಿದ್ದಾರೆ. 2019ರಲ್ಲಿ ಸಂಜು ಸ್ಯಾಮ್ಸನ್ ಗಳಿಸಿದ ಅಜೇಯ 212 ರನ್ ಸ್ಕೋರ್ ದಾಖಲೆಯನ್ನು ಪೃಥ್ವಿ ಶಾ ಮುರಿದಿದ್ದಾರೆ. ಮುಂಬೈ ತಂಡದ ನಾಯಕರಾದ ಇವರ ಆಟದ ಫಲವಾಗಿ ತಂಡವು ನಿಗದಿತ 50 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 457 ರನ್ ಪೇರಿಸಿತು. ಇದೂ ಕೂಡ ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ತಂಡವೊಂದರ ಗರಿಷ್ಠ ಮೊತ್ತವಾಗಿದೆ. ಕಳೆದ ವಾರ ಜಾರ್ಖಂಡ್ ತಂಡ 422 ರನ್ ಕಲೆಹಾಕಿ ದಾಖಲೆ ನಿರ್ಮಿಸಿತ್ತು.

  ಮುಂಬೈ ತಂಡದ ಸ್ಕೋರು ಇಷ್ಟು ಉಬ್ಬಲು ಪೃಥ್ವಿ ಶಾ ಮಾತ್ರ ಕಾರಣವಲ್ಲ, ಸೂರ್ಯಕುಮಾರ್ ಯಾದವ್ ಕೇವಲ 58 ಎಸೆತದಲ್ಲಿ 133 ರನ್ ಚಚ್ಚಿದ್ದೂ ನೆರವಾಗಿದೆ. ಅವರ ಇನ್ನಿಂಗ್ಸಲ್ಲಿ 4 ಸಿಕ್ಸರ್ ಹಾಗೂ 22 ಬೌಂಡರಿ ಒಳಗೊಂಡಿವೆ. ಇನ್ನು, ನಾಯಕ ಪೃಥ್ವಿ ಶಾ ಅವರ 227 ರನ್​ಗಳ ಇನಿಂಗ್ಸಲ್ಲಿ 31 ಬೌಂಡರಿ ಹಾಗೂ 5 ಸಿಕ್ಸರ್​ಗಳ ಸುರಿಮಳೆಯಾಗಿದೆ.

  ಇದನ್ನೂ ಓದಿ: Ishant Sharma: ಈ ಸಾಧನೆ ಮಾಡಿದ ಟೀಮ್ ಇಂಡಿಯಾದ 2ನೇ ವೇಗಿ, 4ನೇ ಬೌಲರ್ ಇಶಾಂತ್ ಶರ್ಮಾ..!

  ಪೃಥ್ವಿ ಶಾ ಕೆಲ ದಾಖಲೆಗಳು ಹಾಗೂ ಮೈಲಿಗಲ್ಲುಗಳಿಗೂ ಬಾಜನರಾಗಿದ್ದಾರೆ:  

  1) ಲಿಸ್ಟ್ ಎ ಕ್ರಿಕೆಟ್​ನಲ್ಲಿ ಪೃಥ್ವಿ ಶಾ ಅವರ ಮೊದಲ ದ್ವಿಶತಕ

  2) ಅವರ ಅಜೇಯ 227 ರನ್​ಗಳು ವಿಜಯ್ ಹಜಾರೆ ಟ್ರೋಫಿಯಲ್ಲಿ ಹೊಸ ದಾಖಲೆ

  3) ವಿಶ್ವದ ಲಿಸ್ಟ್ ಎ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದವರ ಪಟ್ಟಿಯಲ್ಲಿ ಪೃಥ್ವಿ ಶಾ ಅವರದು 7ನೇ ಸ್ಥಾನ

  4) ಲಿಸ್ಟ್ ಎ ಕ್ರಿಕೆಟ್​ನಲ್ಲಿ ದ್ವಿಶತಕ ಭಾರಿಸಿದ ಭಾರತದ ಎಂಟನೇ ಆಟಗಾರ

  5) ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಶಾ ಅವರ ದ್ವಿಶತಕ ನಾಲ್ಕನೆಯದು
  Published by:Vijayasarthy SN
  First published: