IPL 2021: ಶಾರುಖ್‌ ಖಾನ್‌ ಪಂಜಾಬ್‌ ಪಾಲಾಗುತ್ತಿದ್ದಂತೆ ಪ್ರೀತಿ ಜಿಂಟಾ ಸಂತಸದ ವಿಡಿಯೋ ವೈರಲ್‌

ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟಿಗ ಶಾರುಖ್‌ ಖಾನ್‌ ಫೋಟೋ ಬದಲಾಗಿ ನೈಟ್ ರೈಡರ್ಸ್ ಮಾಲೀಕ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಫೋಟೋ ಮತ್ತು ಪ್ರೀತಿ ಜಿಂಟಾ ಅವರ ಫೋಟೋವಿರುವ ಚಿತ್ರಗಳು ವೈರಲ್‌ ಆಗುತ್ತಿವೆ.

ಪ್ರೀತಿ ಜಿಂಟಾ.

ಪ್ರೀತಿ ಜಿಂಟಾ.

 • Share this:
  ಕ್ರಿಕೆಟ್‌ ಅಂದ್ರೆ ಸಾಕು ಊಟ ಬಿಟ್ಟು ಮ್ಯಾಚ್‌ ನೋಡುವವರ ಸಂಖ್ಯೆ ಹೆಚ್ಚಿದೆ. ಇನ್ನು, ತಮ್ಮ ನೆಚ್ಚಿನ ಆಟಗಾರರು ಉತ್ತಮವಾಗಿ ಬ್ಯಾಟಿಂಗ್‌ ಮಾಡಲಿ ಎಂದು ದೇವರಲ್ಲಿ ಕೇಳಿಕೊಳ್ಳುವವರೂ ಇದ್ದಾರೆ. ಅಷ್ಟೇ ಅಲ್ಲದೇ ತಮ್ಮ ನೆಚ್ಚಿನ ಆಟಗಾರರ ತಾನು ಬೆಂಬಲಿಸುವ ತಂಡಕ್ಕೆ ಬರಲಿ ಎಂದು ಕಾಯುವವರ ಸಂಖ್ಯೆ ಕೂಡ ಕಡಿಮೆ ಇಲ್ಲ. ಇದು ಸಾಮಾನ್ಯವಾಗಿ ಕ್ರಿಕೆಟ್‌ ಪ್ರೇಮಿಗಳಿಗೆ ಅಷ್ಟೇ ಅಲ್ಲದೇ ಐಪಿಎಲ್‌ ಪ್ರಾಂಚೈಸಿಗಳಿಗೂ ಬಿಟ್ಟಿಲ್ಲ. ಹೌದು, ಈ ಬಾರಿನ ಐಪಿಎಲ್‌ ಹರಾಜಿನಲ್ಲಿ ಶಾರುಖ್ ಖಾನ್ 5.25 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಇನ್ನು ಶಾರುಖ್‌ ಖಾನ್‌ರನ್ನು ಖರೀದಿಸಿದ ನಂತರ ಪ್ರೀತಿ ಜಿಂಟಾ ಸಂತಸಗೊಂಡು ಸಂಭ್ರಮಿಸಿದ ಕ್ಷಣ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

  ಐಪಿಎಲ್‌ ಆಟಗಾರರ ಹರಾಜಿನ ವೇಳೆ ಕುತೂಹಲಕಾರಿ ಪ್ರಸಂಗ!

  ಈ ಬಾರಿ ನಡೆದ ಐಪಿಎಲ್‌ 2021ರ ಆಟಗಾರರ ಹರಾಜಿನ ವೇಳೆ ಕುತೂಹಲಕಾರಿ ಪ್ರಸಂಗವೊಂದು ನಡೆದಿದೆ. ಪಂಜಾಬ್‌ ಕಿಂಗ್ಸ್‌ ಮಾಲಕಿ ಪ್ರೀತಿ ಜಿಂಟಾ ಅವರು 5.25 ಕೋಟಿ ರೂಪಾಯಿಗೆ ಆಲ್‌ರೌಂಡರ್ ಶಾರುಖ್ ಖಾನ್ ಅವರನ್ನು ಖರೀದಿಸಿ ಸಂತಸಗೊಂಡು ಕುಪ್ಪಳಿಸಿದರು. ಶಾರುಖ್‌ ಖಾನ್‌ ಅವರನ್ನು ಖರೀದಿಸಿದ ಬಳಿಕ ಸುಮ್ಮನೇ ಕುಳಿತುಕೊಳ್ಳದ ಪ್ರೀತಿ, ಕೋಲ್ಕತಾ ನೈಟ್ ರೈಡರ್ಸ್ ತಂಡದ ಕಡೆಗೆ ನೋಡಿ ನಮಗೆ ಶಾರುಖ್ ಖಾನ್‌ ಸಿಕ್ಕಿದರು ಎಂದು ಸಂತಸದಿಂದ ಕೂಗಿದ್ದಾರೆ. ಇದರಿಂದ ಈ ವಿಡಿಯೋ ಟ್ವಿಟ್ಟರ್‌ನಲ್ಲಿ ಭಾರೀ ವೈರಲ್‌ ಆಗುತ್ತಿದೆ.

  ಯಾರು ಈ ಶಾರುಖ್‌ ಖಾನ್‌?

  ಪಂಜಾಬ್‌ ಕಿಂಗ್ಸ್‌ ಮಾಲಕಿ ಪ್ರೀತಿ ಹರಾಜಿನಲ್ಲಿ ಖರೀದಿಸಿದ್ದು ಕೋಲ್ಕತಾ ನೈಟ್ ರೈಡರ್ಸ್ ಮಾಲೀಕ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅಲ್ಲ. ಬದಲಿಗೆ‌ ಆಲ್‌ರೌಂಡರ್‌ ಕ್ರಿಕೆಟಿಗ ಆಟಗಾರ ಶಾರುಖ್‌ ಖಾನ್‌. ಈತನಿಗೆ ಈಗ 25 ವರ್ಷ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿದ್ದು, ದೊಡ್ಡ ಹೊಡೆತ ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು, ಟಿ-20 ಪಂದ್ಯಗಳಲ್ಲಿ ಶಾರುಖ್‌ ಖಾನ್‌ 30 ಮತ್ತು 40 ರನ್‌ಗಳನ್ನು ಬೇಗನೇ ಪಡೆಯುತ್ತಾರೆ. 2018ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಟಿ-20ಗೆ ಪಾದಾರ್ಪಣೆ ಮಾಡಿದ ಶಾರುಖ್‌ ಖಾನ್ ಉತ್ತಮವಾಗಿ ಆಡಿ ಹಲವರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೇ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಶಾರುಖ್‌ ಖಾನ್‌ ಅವರು ಅದ್ಭುತವಾಗಿ ಬ್ಯಾಟಿಂಗ್‌ ಪ್ರದರ್ಶನ ಮಾಡಿದ್ದರು.

  ಇನ್ನು, ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟಿಗ ಶಾರುಖ್‌ ಖಾನ್‌ ಫೋಟೋ ಬದಲಾಗಿ ನೈಟ್ ರೈಡರ್ಸ್ ಮಾಲೀಕ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಫೋಟೋ ಮತ್ತು ಪ್ರೀತಿ ಜಿಂಟಾ ಅವರ ಫೋಟೋವಿರುವ ಚಿತ್ರಗಳು ವೈರಲ್‌ ಆಗುತ್ತಿವೆ.

  ಇದನ್ನೂ ಓದಿ: IPL 2021: ಹರಾಜಿನಲ್ಲಿ ಬಿಕರಿಯಾಗದ ಸ್ಟಾರ್ ಆಟಗಾರರ ಪಟ್ಟಿ ಹೀಗಿದೆ..!

  ಐಪಿಎಲ್‌ ಅಧಿಕೃತ ಖಾತೆಯಲ್ಲೂ ಪ್ರೀತಿ-ಶಾರುಖ್‌!

  ಐಪಿಎಲ್‌ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಶಾರುಖ್‌ ಖಾನ್‌ ಅವರನ್ನು ಹರಾಜಿನಲ್ಲಿ ಪಡೆದ ವೇಳೆ ಪ್ರೀತಿ ಜಿಂಟಾ ಅವರ ಪ್ರತಿಕ್ರಿಯೆ ವಿಡಿಯೋವನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಶೀರ್ಷಿಕೆಯಲ್ಲಿ ‘ಶಾರುಖ್‌ ಖಾನ್‌ ಸಿಕ್ಕಾಗ’ ಎಂದು ಬರೆದುಕೊಂಡು ಪ್ರೀತಿ ಜಿಂಟಾ ಅವರ ಸಂತಸಗೊಂಡಿರುವ ವಿಡಿಯೋವನ್ನು ಹಂಚಿಕೊಂಡಿದೆ.

  ಇನ್ನು, ಕಾಕತಾಳೀಯ ಎಂಬಂತೆ ಪಂಜಾಬ್‌ ಕಿಂಗ್ಸ್‌ ಟ್ವಿಟ್ಟರ್‌ ಖಾತೆ ಕೂಡ ಶಾರುಕ್‌ ಖಾನ್‌ ಅವರ ಮೀಮ್ಸ್‌‌ ಅನ್ನು ಟ್ವೀಟ್‌ ಮಾಡಿದೆ. ಈ ವಿಡಿಯೋಗಳು ವೈರಲ್‌ ಆಗುತ್ತಿದ್ದು, ಕ್ರಿಕೆಟ್‌ ಪ್ರಿಯರು ತಮ್ಮ ಕಾಮೆಂಟ್ಸ್‌ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಟ್ವಿಟರ್‌ ಬಳಕೆದಾರನೊಬ್ಬನು ಶಾರುಖ್‌ ಫೈಟಿಂಗ್ ಫಾರ್‌ ಪ್ರೀತಿ ಎಂದು ಬರೆದುಕೊಂಡರೆ ಮತ್ತೊಬ್ಬ ಬಳಕೆದಾರ 5.25 ಕೋಟಿ ರೂಪಾಯಿಗೆ ಪಂಜಾಬ್‌ ತಂಡಕ್ಕೆ ಹೋದ ಶಾರುಕ್‌ ಎಂದು ಬರೆದುಕೊಂಡಿದ್ದಾರೆ. ಈ ರೀತಿಯ ಕುಹೂತಹಲಕಾರಿ ಶೀರ್ಷಿಕೆಗಳನ್ನು ಕ್ರಿಕೆಟ್‌ ಪ್ರಿಯರು ಸಾಮಾಜಿಕ ತಾಣಗಳಲ್ಲಿ ಬರೆದುಕೊಂಡಿದ್ದಾರೆ.
  Published by:MAshok Kumar
  First published: