Virat Kohli: ತಿಂಡಿಪೋತ, ಅಗ್ರೆಸ್ಸಿವ್ ವಿರಾಟ್ ಕೊಹ್ಲಿ ಇಷ್ಟೊಂದು ಬದಲಾಗಿದ್ದು ಹೇಗೆ ಗೊತ್ತಾ

Kohli Diet: ಒಂದು ಕಾಲದಲ್ಲಿ ಬಿರಿಯಾನಿ ಎಂದರೆ ಬಾಯ್‌ ಚಪ್ಪರಿಸಿ ತಟ್ಟೆ ತುಂಬಾ ವಿರಾಟ್ ಕೊಹ್ಲಿ ಬಾರಿಸುತ್ತಿದ್ದರು.. ನೆಚ್ಚಿನ ತಿಂಡಿ ಹುಡುಕಿಕೊಂಡು ಗಂಟೆಗಟ್ಟಲೆ ಅಲದು ಮನಸ್ಸಿಗೆ ಇಚ್ಛೆ ಬಂದಷ್ಟು ತಿಂಡಿಯನ್ನು ತಿಂದು ವಿರಾಟ್ ಕೊಹ್ಲಿ ಸಂತಸಪಡುತ್ತಿದ್ದರು.. ಅಷ್ಟೇ ಅಲ್ಲದೆ ಮೈದಾನದಲ್ಲಿ ಯಾವುದಕ್ಕೂ ಕೇರ್ ಮಾಡದೇ ಇರುತ್ತಿದ್ದ ವಿರಾಟ್ ಕೊಹ್ಲಿ ಇಂದು ಸಾಕಷ್ಟು ಬದಲಾಗಿದ್ದಾರೆ

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Share this:
  ಭಾರತ (India)ಕಂಡ ಅತ್ಯಂತ ಉತ್ಸಾಹೀ ಮತ್ತು ಆಕ್ರಮಣಕಾರಿ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿಯೂ (Virat Kohli)ಒಬ್ಬರು. ಇವರು ಅದ್ಭುತ ಬ್ಯಾಟರ್, ಅಷ್ಟೇ ಅಲ್ಲ ಒಳ್ಳೆಯ ಫೀಲ್ಡರ್(Feelder) ಕೂಡ ಹೌದು. ಬೌಂಡರಿ ಭಾರಿಸುವುದಕ್ಕೂ ಸೈ, ರನ್ ಓಡುವುದಕ್ಕೂ ಸೈ. ಇಡೀ ಪಂದ್ಯದಲ್ಲಿ ಇವರ ಉತ್ಸಾಹ ಎಂದೂ ತಗ್ಗದು. ಇವರಿಗೆ ಎಲ್ಲಿಂದ ಇಷ್ಟು ಎನರ್ಜಿ ಬರುತ್ತೆ ಅನಿಸಬಹುದು. ಇವರ ಫಿಟ್ನೆಸ್(Fitness) ಮಟ್ಟವೇ ಅತ್ಯುಚ್ಚವಾದುದು..ಕೊಹ್ಲಿ ಕಟ್ಟು ನಿಟ್ಟಿನ ಆಹಾರ ಪದ್ದತಿಯನ್ನ(Food Diet) ಅಳವಡಿಸಿಕೊಂಡಿದ್ದಾರೆ. ಕೊಹ್ಲಿ ತಮ್ಮ ವೇಳಾಪಟ್ಟಿ ಬಿಟ್ಟು ಇತರ ಯಾವುದೇ ಆಹಾರವನ್ನು ತೆಗೆದುಕೊಳ್ಳುವುದಿಲ್ಲ. ಇದೇ ಕಾರಣದಿಂದ ಕೊಹ್ಲಿ ಫಿಟ್ಟೆಸ್ಟ್ ಮ್ಯಾನ್(Fitness Man) ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇಂತಹ ಫಿಟ್ನೆಸ್ ಕಾಪಾಡಿಕೊಂಡಿರುವುದರಿಂದಲೇ ವಿರಾಟ್ ಕೊಹ್ಲಿ 100 ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದಾರೆ. 

  ವಿರಾಟ್ ಕೊಹ್ಲಿ ಸಾಧನೆ ಬಗ್ಗೆ ಇಂದು ವಿಶ್ವದ ಕ್ರಿಕೆಟ್ ದಿಗ್ಗಜರು ಕೂಡ ಹೊಗಳುತ್ತಿದ್ದಾರೆ.. ಇಂದು ಇಷ್ಟೊಂದು ಬಿಟ್ಟಿರುವ ವಿರಾಟ್ ಕೊಹ್ಲಿ ಒಂದು ಕಾಲದಲ್ಲಿ ತಿಂಡಿಪೋತ ಅಂದರೆ ನಿಮಗೆ ನಂಬಲು ಸಾಧ್ಯವೇ ಆಗುವುದಿಲ್ಲ.. ಇಂತಹ ಮಹಾನ್ ತಿಂಡಿಪೋತ ವಿರಾಟ್ ಕೊಹ್ಲಿ ಹೇಗೆ ಇಷ್ಟೊಂದು ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ ಎಂದು ವಿರಾಟ್ ಕೊಹ್ಲಿಯನ್ನ ಹತ್ತಿರದಿಂದ ಕಂಡ ಅವರ ಒಡನಾಡಿಗಳು ಅವರು 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

  ಒಂದು ಕಾಲದ ತಿಂಡಿಪೋತ ವಿರಾಟ್ ಕೊಹ್ಲಿ

  ಇಂದು ಟೀಮ್‌ ಇಂಡಿಯಾದಲ್ಲಿ ಡಯೆಟ್‌ ಮತ್ತು ಫಿಟ್ನೆಸ್‌ ವಿಚಾರದಲ್ಲಿ ಗುಣಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.ವಿದೇಶಿ ಆಟಗಾರರನ್ನೂ ಮೀರಿಸುವಂತಹ ಫಿಟ್ನೆಸ್‌ ವಿರಾಟ್‌ ಕೊಹ್ಲಿ ಅವರದ್ದು. ಇದಕ್ಕಾಗಿ ಅವರು ಹಲವು ಕಠಿಣ ಫಿಟ್ನೆಸ್‌ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  ಆದರೆ ಒಂದು ಕಾಲದಲ್ಲಿ ಬಿರಿಯಾನಿ ಎಂದರೆ ಬಾಯ್‌ ಚಪ್ಪರಿಸಿ ತಟ್ಟೆ ತುಂಬಾ ವಿರಾಟ್ ಕೊಹ್ಲಿ ಬಾರಿಸುತ್ತಿದ್ದರು.. ನೆಚ್ಚಿನ ತಿಂಡಿ ಹುಡುಕಿಕೊಂಡು ಗಂಟೆಗಟ್ಟಲೆ ಅಲದು ಮನಸ್ಸಿಗೆ ಇಚ್ಛೆ ಬಂದಷ್ಟು ತಿಂಡಿಯನ್ನು ತಿಂದು ವಿರಾಟ್ ಕೊಹ್ಲಿ ಸಂತಸಪಡುತ್ತಿದ್ದರು.

  ಅಷ್ಟೇ ಅಲ್ಲದೆ ಮೈದಾನದಲ್ಲಿ ಯಾವುದಕ್ಕೂ ಕೇರ್ ಮಾಡದೇ ಇರುತ್ತಿದ್ದ ವಿರಾಟ್ ಕೊಹ್ಲಿ ಇಂದು ಸಾಕಷ್ಟು ಬದಲಾಗಿದ್ದಾರೆ. ವಿರಾಟ್ ಕೊಹ್ಲಿ ಎಷ್ಟು ಬದಲಾಗಿದ್ದಾರೆ ಎಂಬುದನ್ನು ಅವರ ಬಾಲ್ಯದ ಒಡನಾಡಿಗಳೇ ನೆನೆಸಿಕೊಂಡು ಅಚ್ಚರಿಪಡುತ್ತಾರೆ.

  ಇದನ್ನೂ ಓದಿ: ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯಕ್ಕೆ ಶುಭ ಹಾರೈಸಿದ ಕ್ರಿಕೆಟ್ ದಿಗ್ಗಜರು

  ವಿರಾಟ್ ಕೊಹ್ಲಿ ಸರಿಯಿಲ್ಲ ಎನ್ನುತ್ತಿದ್ದ ಕ್ರಿಕೆಟಿಗರು

  2007-08ರ 19 ವಯೋಮಿತಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತನ್ಮಯ್ ಶ್ರೀವತ್ಸವ ಅಂದು ವಿರಾಟ್ ಕೊಹ್ಲಿ ವರ್ತನೆ ಹೇಗಿತ್ತು ಎನ್ನುವುದನ್ನು ಬಿಟ್ಟಿದ್ದಾರೆ.. ವಿರಾಟ್ ಕೊಹ್ಲಿ ಕ್ರಿಕೆಟ್ ವೃತ್ತಿ ಜೀವನದ ಆರಂಭದಲ್ಲಿ ಆತನ ವರ್ತನೆಯೇ ಸರಿ ಇಲ್ಲ ಅಂತ ಅನೇಕರು ಹೇಳುತ್ತಿದ್ದರು.

  ಆದ್ರೆ ವಿರಾಟ್ ಸ್ವಭಾವವೇ ಹಾಗಿತ್ತು. ಮುಂದೇ ಅದುವೇ ಆಕ್ರಮಣಕಾರಿಯಾಗಿ ಆಡಲು ಸಹಾಯ ಮಾಡಿತ್ತು. ಹಾಗೇ ಕೆಲವು ಮಾಜಿ ಆಟಗಾರರು ಬಡಾ ಖಲೀಫಾ ಬನ್ ಗಯಾ ಹೈ ಅಂದ್ರು. ಆದ್ರೆ ಸ್ಥಿರ ಪ್ರದರ್ಶನ ನೀಡಿ ಅದಕ್ಕು ಉತ್ತರ ನೀಡಿದ್ರು.

  ಕೊನೆಗೆ ವಿರಾಟ್ ವರ್ತನೆ ಬಗ್ಗೆ ಮಾತನಾಡಿದವರು ಇಂದು ಮೆಚ್ಚುಗೆಯ ವ್ಯಕ್ತಪಡಿಸುತ್ತಿದ್ದಾರೆ. ವಿರಾಟ್ ಕೊಹ್ಲಿಯವರನ್ನು ಆತ್ಮವಿಶ್ವಾಸದ ವ್ಯಕ್ತಿ ಅಂತ ಬಣ್ಣಿಸುತ್ತಿದ್ದಾರೆ.

  ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದರಂತೆ ವಿರಾಟ್ ಕೊಹ್ಲಿ

  ಇನ್ನು ಇಂದು ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ ಅಂದರೆ ಒಂದು ರೀತಿಯ ಕಾರಣ ವಿರಾಟ್ ಕೊಹ್ಲಿ ಜೊತೆ ಆಡಿದ್ದ ಪ್ರದೀಪ್ ಸಂಗ್ವಾನ್.

  ಪ್ರದೀಪ್ ಸಂಗ್ವಾನ್ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ಖರೀದಿ ಮಾಡಿದ್ದರಿಂದ ವಿರಾಟ್ ಕೊಹ್ಲಿ ಇಂದು RCB ಪರ ಆಡುತ್ತಿದ್ದಾರೆ. ಅಲ್ಲದೆ ವಿರಾಟ ಹಾಗೂ ಪ್ರದೀಪ್ U-19 ವಿಶ್ವಕಪ್ ನಲ್ಲಿ ಒಂದೇ ತಂಡದಲ್ಲಿ ಆಡಿದ್ದರು.. ಹೀಗಾಗಿ ವಿರಾಟ್ ಅವರ ಜೊತೆಗೆ ಮಾಡಿದ್ದಾಗ ವಿರಾಟ್ ಹೇಗೆ ತಿನ್ನುತ್ತಿದ್ದರು ಹೇಗೆ ಇದ್ದರು ಎನ್ನುವುದನ್ನು ಪ್ರದೀಪ್ ಸಂಗ್ವಾನ್ ಬಿಚ್ಚಿಟ್ಟಿದ್ದಾರೆ

  ವಿರಾಟ್ ಬಾಲ್ಯದಲ್ಲಿ ಸಿಕ್ಕಾಪಟ್ಟೆ ತಿನ್ನುತ್ತಿದ್ದರು. ಮಟನ್ ರೈಸ್,ಹೀಗೆ ಸಿಕ್ಕಿದ್ದನ್ನೆಲ್ಲಾ ತಿನ್ನುವುದು ಕೊಹ್ಲಿಯ ಅಭ್ಯಾಸ. ತಿನ್ನಲು ಕಿಲೋ ಮೀಟರ್ ಗಟ್ಟಲೇ ಸುತ್ತಾಡುತ್ತಿದ್ದರು. ಆದ್ರೆ 2010ರಲ್ಲಿ ನನಗೆ ಆಶ್ಚರ್ಯವಾಗಿತ್ತು. ದೆಹಲಿ ರಣಜಿ ಟೂರ್ನಿಯ ವೇಳೆಯಲ್ಲಿ ವಿರಾಟ್ ನನ್ನು ನೋಡಿದಾಗ ಇಷ್ಟೊಂದು ಬದಲಾವಣೆಯಾಗಿದ್ದಾರ ಅಂತ ಅನ್ನಿಸಿತ್ತು.

  ಭೋಜನ ವಿರಾಮದ ವೇಳೆ ವಿರಾಟ್ ಊಟ ತಟ್ಟೆಯಲ್ಲಿ ಮಟನ್ ರೈಸ್ ಇರಲಿಲ್ಲ. ಬದಲಾಗಿ ಅಲ್ಲಿ ಡಯಡ್ ಫುಡ್ ಗಳಿದ್ದವು ಎಂದು ಪ್ರದೀಪ್ ಸಂಗ್ವಾನ್ ವಿರಾಟ್ ಕೊಹ್ಲಿಯ ಆಹಾರ ಪದ್ದತಿ ಬದಲಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ.

  ಇದನ್ನೂ ಓದಿ: 100ನೇ ಟೆಸ್ಟ್ ಬಗ್ಗೆ 101 ನೆನಪು ಹಂಚಿಕೊಂಡ ಕಿಂಗ್ ಕೊಹ್ಲಿ

  ಇನ್ನು ಹಿಂದೆ ವಿರಾಟ್ ಕೊಹ್ಲಿ ಸಹ ಆಹಾರದ ಮೇಲೆ ಎಷ್ಟು ಪ್ರೀತಿ ಇತ್ತು ಆಗು ಅದೇ ಕ್ರಿಕೆಟ್ ಜೀವನಕ್ಕೆ ಮುಳುವಾಗುತ್ತದೆ ಎಂಬುದನ್ನು ಅರಿತ ಸಮಯದ ಬಗ್ಗೆ ಹೇಳಿಕೊಂಡಿದ್ದರು. ತನ್ನ ಆಹಾರ ಪದ್ಧತಿ ತನ್ನ ಕ್ರಿಕೆಟ್ ಜೀವನಕ್ಕೆ ಮುಳುವಾಗುತ್ತದೆ ಎಂಬುದನ್ನು ಅರಿತಾಗ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡು ಡಯಟ್ ಮಾಡಲು ಪ್ರಾರಂಭ ಮಾಡಿದ್ದಾರೆ ಈ ಹಿಂದಿನ ಸಂದರ್ಶನವೊಂದರಲ್ಲಿ ವಿರಾಟ್ ಹೇಳಿಕೊಂಡಿದ್ದರು.
  Published by:ranjumbkgowda1 ranjumbkgowda1
  First published: