Rohit Sharma: ಕ್ರಿಕೆಟ್‌ ಚೆಂಡು ತಿನ್ನುತ್ತಾರಂತೆ ರೋಹಿತ್ ಶರ್ಮಾ! ಇದೇನು ‘ಹಿಟ್‌‘ ಮ್ಯಾನ್ ಅವಾಂತರ?

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಖಾತೆಯಿಂದ ವಿಚಿತ್ರವಾದ ಟ್ವೀಟ್‌ಗಳು ಬರುತ್ತಿವೆ. ಹಿಟ್ ಮ್ಯಾನ್ ಖಾತೆಯಿಂದ ಬರ್ತಿರೋ ಟ್ವೀಟ್ ಓದಿ ಅಭಿಮಾನಿಗಳೇ ಶಾಕ್ ಆಗಿದ್ದಾರೆ. ಬಹುಶಃ ಅವರ ಖಾತೆಯನ್ನು ಹ್ಯಾಕ್ ಮಾಡಿರಬಹುದು ಎನ್ನಲಾಗುತ್ತಿದೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

  • Share this:
ಭಾರತ ಕ್ರಿಕೆಟ್‌ ತಂಡದ (Team India) ನಾಯಕ (Captain) ರೋಹಿತ್‌ ಶರ್ಮಾ (Rohit Sharma) ಅವರ ಟ್ವಿಟರ್‌ ಖಾತೆ (Twitter Account) ಹ್ಯಾಕ್ (Hack) ಆಗಿದೆಯಾ? ಹೀಗೊಂದು ಅನುಮಾನ ಈಗ ಅವರ ಅಭಿಮಾನಿಗಳನ್ನು (Fans) ಕಾಡುತ್ತಿದೆ. ಯಾಕೆಂದರೆ ಅವರ ಟ್ವಿಟ್ಟರ್ ಖಾತೆಯಿಂದ ನಿನ್ನೆಯಿಂದ ಚಿತ್ರ ವಿಚಿತ್ರ ಟ್ವೀಟ್‌ಗಳು (Tweet) ಬರುತ್ತಿವೆ. ಅದನ್ನು ಓದಿ ಅವರ ಅಭಿಮಾನಿಗಳು ಅಷ್ಟೇ ಅಲ್ಲ, ಕ್ರಿಕೆಟ್ (Criket) ಪ್ರೇಮಿಗಳೂ ಕೂಡ ಶಾಕ್ (Shock) ಆಗಿದ್ದಾರೆ. ಈ ಚಿತ್ರ ವಿಚಿತ್ರ ಟ್ವೀಟ್‌ಗಳು ಈಗ ವೈರಲ್ (Viral)‌ ಆಗಿದ್ದು, ಅಭಿಮಾನಿಗಳು ರೋಹಿತ್‌  ಶರ್ಮಾ ಟ್ವಿಟರ್ ಖಾತೆ ಹ್ಯಾಕ್‌ ಆಗಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.

ಚರ್ಚೆಗೆ ಗ್ರಾಸವಾದ ರೋಹಿತ್ ಶರ್ಮಾ ಟ್ವೀಟ್

ಮಾರ್ಚ್‌ 4ರಂದು ಮೊಹಾಲಿಯಲ್ಲಿ ಶ್ರೀಲಂಕಾ ಎದುರು ಭಾರತದ ಮೊದಲ ಟೆಸ್ಟ್‌ ಪಂದ್ಯ ಆರಂಭವಾಗುತ್ತಿದೆ. ಈ ನಡುವೆ ರೋಹಿತ್‌ ಕ್ರಿಕೆಟ್‌ ಚೆಂಡಿನ ಕುರಿತು ಮಾಡಿರುವ ಟ್ವೀಟ್‌ ಭಾರೀ ಚರ್ಚೆಗೆ ಗ್ರಾಸವಾಗಿದೆ.

“ಕ್ರಿಕೆಟ್ ಚೆಂಡು ತಿನ್ನಬಹುದಾ” ಅಂತಿದ್ದಾರೆ ರೋಹಿತ್!

'ಕ್ರಿಕೆಟ್‌ ಚೆಂಡುಗಳು ತಿನ್ನುವಂಥದ್ದು...ಅಲ್ಲವೇ', 'ನನಗೆ ಕಾಯಿನ್‌ ಟಾಸ್‌ ಮಾಡುವುದೆಂದರೆ ಇಷ್ಟ....ಅದರಲ್ಲೂ ಅದು ನನ್ನ ಹೊಟ್ಟೆಯ ಮೇಲೆ ಬೀಳುವುದೆಂದರೆ!' ಹಾಗೂ Bzz….! ನಿನಗೆ ಗೊತ್ತೆ? ಝೇಂಕರಿಸುವ ಜೇನುಗೂಡುಗಳು ಉತ್ತಮ ಬಾಕ್ಸಿಂಗ್ ಚೀಲಗಳನ್ನು ಮಾಡುತ್ತವೆ! ಅಂತ ವಿಚಿತ್ರವಾಗಿ ರೋಹಿತ್ ಶರ್ಮಾ ಖಾತೆಯಲ್ಲಿ ಟ್ವೀಟಿಸಲಾಗಿದೆ. ಈ ಎಲ್ಲ ಟ್ವೀಟ್‌ಗಳೂ ಸ್ವತಃ ರೋಹಿತ್‌ ಪ್ರಕಟಿಸಿದ್ದಾರೆಯೋ ಅಥವಾ ಹ್ಯಾಕರ್‌ಗಳ ಕೆಲಸವೋ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: WWE ರೋಚಕ ಕದನ; ವಿಶ್ವದ ಭಯಾನಕ ಮನುಷ್ಯ ಮಾರ್ಟಿನ್ ಫೋರ್ಡ್ vs The Rock ಮುಖಾಮುಖಿ ಹೋರಾಟ!

ಅಭಿಮಾನಿಗಳಲ್ಲಿ ಗೊಂದಲ

ಈ ಟ್ವೀಟ್‌ಗಳು ರೋಹಿತ್‌ ಅಭಿಮಾನಿಗಳು, ನೆಟ್ಟಿಗರಲ್ಲಿ ಗೊಂದಲ ಮೂಡಿಸಿವೆ. ಇದು ನಿಜಕ್ಕೂ ರೋಹಿತ್‌ ಮಾಡುತ್ತಿರುವ ಟ್ವೀಟ್‌ಗಳೇ ಅಥವಾ ಟ್ವಿಟರ್‌ ಖಾತೆ ಹ್ಯಾಕ್‌ ಆಗಿದೆಯೇ ಎಂದು ಪ್ರಶ್ನಿಸಿದ್ದಾರೆ. ರೋಹಿತ್‌ ಖಾತೆಯಲ್ಲಿ ಬೆಳಿಗ್ಗೆ 11ರಿಂದ ಈವರೆಗೂ ಮೂರು ಟ್ವೀಟ್‌ಗಳು ಪ್ರಕಟಗೊಂಡಿವೆ.

ಟ್ವೀಟ್ ಓದಿ:ರೋಹಿತ್‌ ಟ್ವೀಟ್‌ಗೆ ತರಹೇವಾರಿ ಕಾಮೆಂಟ್

ಇನ್ನು ರೋಹಿತ್ ಶರ್ಮಾ ಖಾತೆಯಿಂದ ಬಂದಿರುವ ಟ್ವೀಟ್‌ಗೆ ಅಭಿಮಾನಿಗಳು, ನೆಟ್ಟಿಗರು ಹಾಗೂ ಕ್ರಿಕೆಟಿಗರು ಕಾಮೆಂಟ್ ಮಾಡಿದ್ದಾರೆ. ಟ್ವೀಟ್‌ ಒಂದಕ್ಕೆ ಕ್ರಿಕೆಟಿಗ ಯಜುವೇಂದ್ರ ಚಾಹಲ್‌ ಪ್ರತಿಕ್ರಿಯಿಸಿದ್ದು, 'ಅಣ್ಣಾ ಏನಾಗಿದೆ? ಎಲ್ಲವೂ ಸರಿಯಾಗಿದೆ ತಾನೇ?' ಎಂದು ಕೇಳಿದ್ದಾರೆ.

ಲಂಕಾ ವಿರುದ್ಧ ಹೋರಾಟಕ್ಕೆ ಹಿಟ್ ಮ್ಯಾನ್ ಸಜ್ಜು

ಈ ನಡುವೆ ರೋಹಿತ್ ಶರ್ಮಾ ಅಂಡ್ ಕೋ ಇದೀಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗಿದ್ದಾರೆ. ಫೆಬ್ರವರಿಯಲ್ಲಿ ನಾಯಕನಾದ ನಂತರ ಶ್ರೀಲಂಕಾ ವಿರುದ್ಧ ರೋಹಿತ್‌ಗೆ ಇದು ಮೊದಲ ಸವಾಲಾಗಿದೆ. ಗಾಯದ ಕಾರಣ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕಳೆದುಕೊಂಡರು ಮತ್ತು ಈಗ ತಮ್ಮ ಪಡೆಗಳನ್ನು ಗೆಲುವಿನತ್ತ ಸೇರಿಸುವ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದಾರೆ.

ರೋಹಿತ್ ಶರ್ಮಾ ಹೊಗಳಿದ ಸಬಾ ಕರೀಮ್

ಈ ಮಧ್ಯೆ ಭಾರತದ ಮಾಜಿ ವಿಕೆಟ್ ಕೀಪರ್  ಸಬಾ ಕರೀಮ್ ಕೂಡ ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಹೊಗಳಿದ್ದಾರೆ. ರೋಹಿತ್ ಶರ್ಮಾ ಸದಾಕಾಲ ಆತ್ಮವಿಶ್ವಾಸದಿಂದ ಕೂಡಿರುತ್ತಾನೆ, ನ್ಯೂಜಿಲೆಂಡ್ (3-0), ವೆಸ್ಟ್ ಇಂಡೀಸ್ (3-0), ಮತ್ತು ಶ್ರೀಲಂಕಾ (3-0) ವಿರುದ್ಧ ಸತತ ಮೂರು ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಲು ಭಾರತವನ್ನು ಮುನ್ನಡೆಸಿದ್ದಾನೆ ಅಂತ ಹೊಗಳಿದ್ದಾರೆ.

ಇದನ್ನೂ ಓದಿ: Santhi Soundarajan: ತಮಿಳುನಾಡಿನ ಅಥ್ಲೀಟ್​ಗೆ ಇದೆಂಥಾ ಅವಮಾನ.. ಹೆಣ್ಣು ಅನ್ನೋದಕ್ಕೆ ಪ್ರೂಫ್​ ಕೊಡು ಎಂದ ಪೊಲೀಸ್​!

“ಆಟಗಾರರನ್ನು ನಡೆಸಿಕೊಳ್ಳುವ ರೀತಿ ಉತ್ತಮ”

"ಅವರು ಆಟಗಾರರನ್ನು ನಡೆಸಿಕೊಳ್ಳುವ ರೀತಿ, ಸಂವಹನ ಮಟ್ಟವು ತುಂಬಾ ಹೆಚ್ಚಾಗಿದೆ, ಪತ್ರಿಕಾಗೋಷ್ಠಿಗಳಲ್ಲಿ ಆಟಗಾರರ ಬಗ್ಗೆ ಅವರು ಹೇಳಿರುವ ವಿಷಯಗಳು, ತಂಡದಲ್ಲಿ ಅವರು ಕಾಪಾಡಿಕೊಳ್ಳಲು ಬಯಸುವ ರೀತಿಯ ವಾತಾವರಣ - ಎಲ್ಲವನ್ನೂ ನೋಡಲು ತುಂಬಾ ಸಂತೋಷವಾಗುತ್ತದೆ" ಅಂತ ಹೊಗಳಿದ್ದಾರೆ.
Published by:Annappa Achari
First published: