ಭಾರತದ ವಿಶ್ವ ಟೆಸ್ಟ್​ ಕ್ರಿಕೆಟ್​ನಲ್ಲಿ ಗೆದ್ದರೆ ಬೆತ್ತಲಾಗುವೆ; ನಟಿಯ ಹೇಳಿಕೆ ವೈರಲ್!​

Poonam Pandey: ಸಂದರ್ಶನವೊಂದರಲ್ಲಿ ಪೂನಂ ಪಾಂಡೆ ಈ ಮಾತನ್ನಾಡಿದ್ದಾರೆ. ಕ್ರಿಕೆಟ್​ ಚಾಲು ಹೈ? ಲೋಗ್​ ಕ್ರಿಕೆಟ್​ ಖೇಲ್​ ರಹೇ ಹೈ? ನಾನು ಈ ಸಲವು ಭಾರತ ಗೆದ್ದರೆ ಬೆತ್ತಲಾಗುತ್ತೇನೆ. ಈ ರೀತಿಯ ವಿವಾದವನ್ನು ಮತ್ತೊಮ್ಮೆ ಎದುರಿಸಲು ನಾನು ಸಿದ್ಧ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಪೂನಂ ಪಾಂಡೆ

ಪೂನಂ ಪಾಂಡೆ

 • Share this:
  ಬಾಲಿವುಡ್​ ನಟಿ ಪೂನಂ ಪಾಂಡೆ ಮತ್ತೆ ಸುದ್ದಿಯಾಗಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್​ ವಿರುದ್ಧ ಟೆಸ್ಟ್​​ ವಿಶ್ವಕಪ್​ ಖ್ಯಾತಿಯ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಫ್​ನಲ್ಲಿ ಗೆದ್ದರೆ ಬೆತ್ತಲಾಗುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಪೂನಂ ಪಾಂಡೆ ಅವರ ಈ ಹೇಳಿಕೆ ಭಾರಿ ವೈರಲ್​ ಆಗುತ್ತಿದೆ.

  2011ರಲ್ಲಿ ಧೋನಿ ನಾಯಕತ್ವದಲ್ಲಿರುವಾಗ ಭಾರತ ತಂಡ ವಿಶ್ವಕಪ್​ನಲ್ಲಿ ಗೆದ್ದರೆ ಬೆತ್ತಲಾಗುವುದಾಗಿ ಹೇಳಿಕೊಂಡಿದ್ದರು. ಪೂನಂ ಮಾತು ಅಂದು ಭಾರೀ ಸುದ್ದಿ ಆಗಿತ್ತು. ಇದೀಗ ವಿರಾಟ್​ ಕೊಹ್ಲಿ ನಾಯಕತ್ವದಲ್ಲಿರುವಾಗ ಅದೇ ಮಾತನ್ನು ಹೇಳಿದ್ದಾರೆ. ನ್ಯೂಜಿಲೆಂಡ್​​ ವಿರುದ್ಧ ಚಾಂಪಿಯನ್​ ಟೆಸ್ಟ್​ನಲ್ಲಿ ಗೆದ್ದರೆ ಮತ್ತೆ ಬೆತ್ತಲಾಗುತ್ತೇನೆ ಎಂದಿದ್ದಾರೆ.

  ಸಂದರ್ಶನವೊಂದರಲ್ಲಿ ಪೂನಂ ಪಾಂಡೆ ಈ ಮಾತನ್ನಾಡಿದ್ದಾರೆ. ಕ್ರಿಕೆಟ್​ ಚಾಲು ಹೈ? ಲೋಗ್​ ಕ್ರಿಕೆಟ್​ ಖೇಲ್​ ರಹೇ ಹೈ? ನಾನು ಈ ಸಲವು ಭಾರತ ಗೆದ್ದರೆ ಬೆತ್ತಲಾಗುತ್ತೇನೆ. ಈ ರೀತಿಯ ವಿವಾದವನ್ನು ಮತ್ತೊಮ್ಮೆ ಎದುರಿಸಲು ನಾನು ಸಿದ್ಧ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

  ಪೂನಂ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ ನಗ್ನ ಫೋಸುಗಳ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಯುವಕರ ನಿದ್ದೆಗೆಡಿಸುವ ಕೆಲಸ ಮಾಡುತ್ತಿರುತ್ತಾರೆ. ಅಷ್ಟು ಮಾತ್ರವಲ್ಲದೆ, ತಮ್ಮದೇ ಆದ ಆ್ಯಪ್​ ಹೊಂದಿದ್ದಾರೆ. ಅದರ ಮೂಲಕ ಹಸಿ ಬಿಸಿ ಫೋಟೋ, ವಿಡಿಯೋ ಹಂಚಿಕೊಳ್ಳುತ್ತಾರೆ.

  ಪೂನಂ ಪಾಂಡೆ ಓನ್ಲಿಫ್ಯಾನ್ಸ್ ಎಂಬ ಜಾಲತಾಣಕ್ಕೆ ಎಂಟ್ರಿ ನೀಡಿದ್ದು, ಅದರ ಮೂಲಕ ಮತ್ತೆ ಹಣ ಗಳಿಸಲು ಶುರು ಮಾಡಿದ್ದಾರೆ. ಇಂಗ್ಲೆಂಡ್ ಮೂಲದ ಜಾಲತಾಣ ಇದಾಗಿದ್ದು, ಅನೇಕರು ಬಳಕೆದಾರರನ್ನು ಹೊಂದಿದೆ.

  ಕಳೆದ ತಿಂಗಳು ಪೂನಂ ಪಾಂಡೆ  ಓನ್ಲಿಫ್ಯಾನ್ಸ್​ಗೆ ಭೇಟಿ ನೀಡಿದ್ದಾರೆ. ಇದರ ಮೂಲಕ ಹಣ ಮಾಡುತ್ತಿದ್ದಾರೆ. ವೀಕ್ಷಣೆಗಾರರು ಓನ್ಲಿ ಫ್ಯಾನ್ಸ್​​ನಲ್ಲಿ ಹಸಿಬಿಸಿ ಫೋಟೋ ವೀಕ್ಷಿಸಬೇಕಾದರೆ ಹಣ ನೀಡಬೇಕು. ಸದ್ಯ ಈ ದಾರಿಯನ್ನು ಹಿಡಿದುಕೊಂಡು ನಟಿ ಹಣ ಮಾಡುತ್ತಿದ್ದಾರೆ.

  ಕಳೆದ ವರ್ಷ ಪೂನಂ ಪಾಂಡೆ ವಿವಾಹವಾಗಿದ್ದರು. ಸ್ಯಾಮ್ ಬಾಂಬೆ ಎಂಬವರ ಕೈ ಹಿಡಿದಿದ್ದರು. ಆದರೆ ಕೆಲವೇ ದಿನಗಳಲ್ಲಿ ಆ ಮದುವೆ ಮುರಿದುಬಿತ್ತು.
  First published: