ಕೇಸರಿ ಜೆರ್ಸಿ ಬಗ್ಗೆ ರಾಜಕೀಯ ನಾಯಕರ ತಗಾದೆ: ಹೇಗಿದೆ ಗೊತ್ತಾ ಟೀಂ ಇಂಡಿಯಾದ ಹೊಸ ಜೆರ್ಸಿ?

ಐಸಿಸಿಯ ಹೊಸ ನಿಯಮದ ಪ್ರಕಾರ ಎರಡು ತಂಡಗಳು ಒಂದೇ ಬಣ್ಣದ ಜೆರ್ಸಿಯಲ್ಲಿ ಮೈದಾನಕ್ಕಿಳಿಯುವಂತಿಲ್ಲ. ಹಾಗಾಗಿ ಫುಟ್ಬಾಲ್‌ ಮಾದರಿಯಲ್ಲಿ ಹೋಮ್‌ ಮತ್ತು ಅವೇ ಉಡುಪಿನ ನಿಯಮವನ್ನು ಕ್ರಿಕೆಟ್‌ಗೆ ಅಳವಡಿಸಲಾಗಿದೆ.

zahir | news18
Updated:June 26, 2019, 6:42 PM IST
ಕೇಸರಿ ಜೆರ್ಸಿ ಬಗ್ಗೆ ರಾಜಕೀಯ ನಾಯಕರ ತಗಾದೆ: ಹೇಗಿದೆ ಗೊತ್ತಾ ಟೀಂ ಇಂಡಿಯಾದ ಹೊಸ ಜೆರ್ಸಿ?
ಸಾಂದರ್ಭಿಕ ಚಿತ್ರ
  • News18
  • Last Updated: June 26, 2019, 6:42 PM IST
  • Share this:
ಟೀಂ ಇಂಡಿಯಾ ಆಟಗಾರರು ಜೂನ್​ 30 ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇಸರಿ-ಕಂದು ನೀಲಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಇಂಟರ್​​ನ್ಯಾಷನಲ್ ಕ್ರಿಕೆಟ್​ ಕೌನ್ಸಿಲ್ (ICC) ನಿಯಮದ ಅನುಸಾರ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೆ ಎರಡು ಬಣ್ಣಗಳ ಜೆರ್ಸಿಯನ್ನು ಬಳಸಿಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಪಡೆ ಬ್ಲೂ ಜೆರ್ಸಿ ಬದಲಿಗೆ ಹೊಸ ಉಡುಪಿನಲ್ಲಿ ಮಿಂಚಲು ರೆಡಿಯಾಗಿದೆ.

ಈ ನಡುವೆ ಭಾರತದ ನೂತನ ಜೆರ್ಸಿ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ತಗಾದೆ ತೆಗೆದಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಚಿವ ನಸೀಮ್ ಖಾನ್ ಮಾತನಾಡಿ, ಮೋದಿ ಸರ್ಕಾರ ಬಂದಾಗಿನಿಂದಲೂ ಕೇಸರಿ ರಾಜಕೀಯ ಪ್ರಾರಂಭವಾಗಿದೆ. ಕೇಂದ್ರ ಸರ್ಕಾರವು ಎಲ್ಲವನ್ನು ಕೇಸರೀಕರಣಗೊಳಿಸುವತ್ತ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕನ ಹೇಳಿಕೆಗೆ ಬೆಂಬಲ ಸೂಚಿಸಿರುವ ಸಮಾಜವಾದಿ ಪಕ್ಷದ ಮುಖಂಡ ಅಬು ಅಜ್ಮಿ, "ಮೋದಿ ಇಡೀ ದೇಶವನ್ನು ಕೇಸರಿಮಯ ಮಾಡಲು ಬಯಸುತ್ತಿದ್ದಾರೆ. ಭಾರತದ ಧ್ವಜದಲ್ಲಿ ಮೂರು ಬಣ್ಣಗಳಿವೆ. ಈ ಮೂರು ಬಣ್ಣಗಳನ್ನೇ ಜೆರ್ಸಿಯಲ್ಲಿ ಬಳಸಿದ್ದರೆ ಚೆನ್ನಾಗಿರುತ್ತಿತ್ತು" ಎಂದು ತಿಳಿಸಿದ್ದಾರೆ.

ಐಸಿಸಿಯ ಹೊಸ ನಿಯಮದ ಪ್ರಕಾರ ಎರಡು ತಂಡಗಳು ಒಂದೇ ಬಣ್ಣದ ಜೆರ್ಸಿಯಲ್ಲಿ ಮೈದಾನಕ್ಕಿಳಿಯುವಂತಿಲ್ಲ. ಹಾಗಾಗಿ ಫುಟ್ಬಾಲ್‌ ಮಾದರಿಯಲ್ಲಿ 'ಹೋಮ್‌' ಮತ್ತು 'ಅವೇ' ಉಡುಪಿನ ನಿಯಮವನ್ನು ಕ್ರಿಕೆಟ್‌ಗೆ ಅಳವಡಿಸಲಾಗಿದೆ. ಇಲ್ಲಿ ಇಂಗ್ಲೆಂಡ್ ತಂಡವು ವಿಶ್ವಕಪ್ ಆತಿಥ್ಯವಹಿಸಿರುವುದರಿಂದ ಆಂಗ್ಲರಿಗೆ ಜೆರ್ಸಿ ಬದಲಿಸಬೇಕೆಂಬ ನಿಯಮ ಅನ್ವಯವಾಗುವುದಿಲ್ಲ.

ಭಾನುವಾರ ಭಾರತ-ಇಂಗ್ಲೆಂಡ್ ಮುಖಾಮುಖಿ ಆಗುತ್ತಿದ್ದು, ಇಲ್ಲಿ ಉಭಯ ತಂಡಗಳ ಜೆರ್ಸಿಯು ನೀಲಿ ಬಣ್ಣದಿಂದ ಕೂಡಿದೆ. ಹೀಗಾಗಿ ಈ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಜೆರ್ಸಿಯೊಂದಿಗೆ ಕಣಕ್ಕಿಳಿಯಬೇಕಿದೆ. ಸದ್ಯ ಟೀಂ ಇಂಡಿಯಾ ಧರಿಸಲಿರುವ ಹೊಸ ಜೆರ್ಸಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೇ ಉಡುಪಿನಲ್ಲಿ ಕೊಹ್ಲಿ ಪಡೆ ಗೆಲುವಿನ ನಾಗಾಲೋಟ ಮುಂದುವರೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.ಇದನ್ನೂ ಓದಿ: ಮತ್ತೊಂದು ವಿಶ್ವದಾಖಲೆ ಸನಿಹದಲ್ಲಿ ವಿರಾಟ್ ಕೊಹ್ಲಿ: ನಾಳಿನ ಪಂದ್ಯದಲ್ಲಿ ಸಚಿನ್-ಲಾರಾ ದಾಖಲೆ ಉಡೀಸ್..!
First published:June 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ