ಭಾರತದ ಸ್ಫೋಟಕ ಆಟಗಾರ ಚಂದ್ರಶೇಖರ್ ಸತ್ತಿದ್ದು ಹೃದಯಾಘಾತದಿಂದಲ್ಲ; ಬಯಲಾಯಿತು ಅಸಲಿ ಕಾರಣ

ಚಂದ್ರಶೇಖರ್ ಅವರು ನಿನ್ನೆ ಸಂಜೆ ಸುಮಾರು 5.30ರ ಒಳಗೆ ಟೀ ಕುಡಿದು ತಮ್ಮ ರೂಂ ಗೆ ತೆರಳಿದ್ದಂತೆ. ಸುಮಾರು 2 ಗಂಟೆಗಳಾದರು ಅವರು ಹೊರಗೆ ಬಾರದಿದ್ದಾಗ ಪತ್ನಿ ರೂಂ ಬಾಗಿಲು ತಟ್ಟಿದ್ದಾರೆ.

Vinay Bhat | news18
Updated:August 16, 2019, 12:55 PM IST
ಭಾರತದ ಸ್ಫೋಟಕ ಆಟಗಾರ ಚಂದ್ರಶೇಖರ್ ಸತ್ತಿದ್ದು ಹೃದಯಾಘಾತದಿಂದಲ್ಲ; ಬಯಲಾಯಿತು ಅಸಲಿ ಕಾರಣ
ವಿಬಿ ಚಂದ್ರಶೇಖರ್
  • News18
  • Last Updated: August 16, 2019, 12:55 PM IST
  • Share this:
ಬೆಂಗಳೂರು (ಆ. 16): ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪೋಟಕ ಆಟಗಾರ ವಿಬಿ ಚಂದ್ರಶೇಖರ್ ಅವರು ನಿನ್ನೆ ರಾತ್ರಿ ಚೆನ್ನೈನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇದೀಗ ಅಸಲಿ ಮಾಹಿತಿ ಹೊರಬಿದ್ದಿದ್ದು, 57 ವರ್ಷ ಪ್ರಾಯದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಚೆನ್ನೈ ಪೊಲೀಸರು ಸ್ಪಷ್ಟ ಪಡಿಸಿದ್ದು, ಅವರು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ. ಚಂದ್ರಶೇಖರ್ ಅವರ  58ನೇ ಹುಟ್ಟುಹಬ್ಬಕ್ಕೆ ಕೇವಲ ಐದು ದಿನಗಳಷ್ಟೆ ಬಾಕಿ ಇರುವಾಗ ಈ  ಘಟನೆ ನಡೆದಿದೆ.

ತನ್ನದೇ ಆದ ವಿಶಿಷ್ಟ ರೀತಿಯ ಬ್ಯಾಟಿಂಗ್​ ಸ್ಟೈಲ್​ನಿಂದಲೇ ಮಿಂಚಿದ್ದ ಇವರು 1988 ರಲ್ಲಿ ನಡೆದ ಇರಾನಿ ಟ್ರೋಫಿಯ ಪಂದ್ಯವೊಂದರಲ್ಲಿ ಕೇವಲ 56 ಎಸೆತಗಳಲ್ಲಿ ಶತಕ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಇವರ ಈ ಆಟ ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ಅತಿ ವೇಗದ ಶತಕವಾಗಿತ್ತು.

ಗರ್ಲ್ ಫ್ರೆಂಡ್ ಜೊತೆ ಸದ್ದಿಲ್ಲದೆ ಡೇಟಿಂಗ್ ನಡೆಸುತ್ತಿದ್ದಾರೆ ಭಾರತದ ಈ 5 ಆಟಗಾರರು!

ಚಂದ್ರಶೇಖರ್ ಅವರು ನಿನ್ನೆ ಸಂಜೆ ಸುಮಾರು 5.30ರ ಒಳಗೆ ಟೀ ಕುಡಿದು ತಮ್ಮ ರೂಂ ಗೆ ತೆರಳಿದ್ದಂತೆ. ಸುಮಾರು 2 ಗಂಟೆಗಳಾದರು ಅವರು ಹೊರಗೆ ಬಾರದಿದ್ದಾಗ ಪತ್ನಿ ರೂಂ ಬಾಗಿಲು ತಟ್ಟಿದ್ದಾರೆ. ಆಗಲು ಬಾಗಿಲು ತೆಗೆಯದ ಇವರು, ಬಳಿಕ ನೆರೆಹೊರೆಯವರ ಸಹಾಯದಿಂದ ಬಾಗಿಲು ಒಡೆದಾಗ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ತಕ್ಷಣವೆ ಚಂದ್ರಶೇಖರ್ ಅವರನ್ನು ಪತ್ನಿ ಆಸ್ಪತ್ರೆಗೆ ಕೊಂಡೊಯ್ಯಲು ಯತ್ನಿಸಿದರಾದರು ಅದಾಗಲೆ ಪ್ರಾಣಪಕ್ಷಿ ಹಾರಿಹೋಗಿತ್ತು. ಆದರೆ, ಇವರು ಆತ್ಮಹತ್ಯೆ ಮಾಡಲು ಏನು ಕಾರಣ ಎಂಬುದು ತಿಳಿದುಬಂದಿಲ್ಲ.

ಚಂದ್ರಶೇಖರ್ ಅವರು ಕೋಚಿಂಗ್ ಹಾಗೂ ವೀಕ್ಷಕ ವಿವರಣೆಯಲ್ಲೂ ಕೆಲಸ ಮಾಡಿದ್ದಾರೆ. ಅಲ್ಲದೆ ಕೆಲವು ಸಮಯ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು. ಇದೀಗ ಅವರ ಆತ್ಮಹತ್ಯೆಗೆ ಕ್ರಿಕೆಟ್ ಬಳಗವೇ ಕಂಬನಿ ಮಿಡಿದಿದೆ.

ಇಂದು ಸಂಜೆ ಟೀಂ ಇಂಡಿಯಾ ನೂತನ ಕೋಚ್ ಹೆಸರು ಪ್ರಕಟ: ಇವರೇ ಆಗಲಿದ್ದಾರಂತೆ ಕೋಚ್! 

 

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್​ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ
First published:August 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading