ಟೀಂ ಇಂಡಿಯಾದ ವಿಶ್ವಕಪ್ ಕನಸು ನುಚ್ಚುನೂರು: ಸೋಲಿನ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ICC Cricket World Cup: ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಬ್ಯಾಟಿಂಗ್​, ಬೌಲಿಂಗ್​ ಹಾಗೂ ಫೀಲ್ಡಿಂಗ್​ ವಿಭಾಗದಲ್ಲಿ ತೋರಿದ ನಿರ್ವಹಣೆ ಬಗ್ಗೆ ಹೆಮ್ಮೆಯಿದ್ದು, ಸೋಲು-ಗೆಲುವು ಜೀವನದ ಒಂದು ಭಾಗ.

zahir | news18
Updated:July 11, 2019, 11:45 PM IST
ಟೀಂ ಇಂಡಿಯಾದ ವಿಶ್ವಕಪ್ ಕನಸು ನುಚ್ಚುನೂರು: ಸೋಲಿನ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
Team India
  • News18
  • Last Updated: July 11, 2019, 11:45 PM IST
  • Share this:
ಐಸಿಸಿ ವಿಶ್ವಕಪ್ ಟೂರ್ನಿಯಿಂದ ಭಾರತ ಹೊರ ಬಿದ್ದಿದೆ. ನ್ಯೂಜಿಲೆಂಡ್​ ವಿರುದ್ಧ 18 ರನ್​ಗಳಿಂದ ಪರಾಭವಗೊಳ್ಳುವ ಮೂಲಕ ಟೀಂ ಇಂಡಿಯಾ ವರ್ಲ್ಡ್​ಕಪ್​ ಅಭಿಯಾನವನ್ನು ಮುಗಿಸಿದೆ. ಇನ್ನು ಈ ಸೋಲಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬೇಸರ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ.

'ನಿಜವಾಗಿಯೂ ಇದು ನಿರಾಶಾದಾಯಕ ಫಲಿತಾಂಶ. ಆದರೂ ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋದ ಟೀಂ ಇಂಡಿಯಾದ ಹೋರಾಟದ ಮನೋಭಾವವನ್ನು ಮೆಚ್ಚಲೇಬೇಕು. ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಬ್ಯಾಟಿಂಗ್​, ಬೌಲಿಂಗ್​ ಹಾಗೂ ಫೀಲ್ಡಿಂಗ್​ ವಿಭಾಗದಲ್ಲಿ ತೋರಿದ ನಿರ್ವಹಣೆ ಬಗ್ಗೆ ಹೆಮ್ಮೆಯಿದ್ದು, ಸೋಲು-ಗೆಲುವು ಜೀವನದ ಒಂದು ಭಾಗ. ಟೀಂ ಇಂಡಿಯಾದ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ' ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಟ್ವೀಟ್ ಮಾಡಿದ್ದು, ಇಂದು ಕೋಟ್ಯಾಂತರ ಹೃದಯಗಳು ಒಡೆದು ಹೋದವು. ಆದರೂ ನೀವು ಕೊನೆವರೆಗೂ ಹೋರಾಡುವ ಮೂಲಕ ನಮ್ಮ ಪ್ರೀತಿ ಮತ್ತು ಗೌರವಕ್ಕೆ  ಅರ್ಹರಾಗಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ. ಹಾಗೆಯೇ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್​ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ನೊಂದಿಗೆ ವಿಶ್ವದಾಖಲೆ ಕೈ ತಪ್ಪಿಸಿಕೊಂಡ ರೋಹಿತ್ ಶರ್ಮಾ..!
First published:July 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...