ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್; ಬೆಳಗಾವಿ ತಂಡದ ಮಾಲೀಕ ಪೊಲೀಸರ ವಶಕ್ಕೆ..!

ಕಳೆದ ವರ್ಷ ಕೂಡ ಕೆಪಿಎಲ್​ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಬಿಸಿಸಿಐ ಈಗಾಗಲೇ ಎರಡು ಕೆಪಿಎಲ್​ ತಂಡಗಳ ಮೇಲೆ ತನಿಖೆ ನಡೆಸುತ್ತಿದೆ.

zahir | news18-kannada
Updated:September 20, 2019, 2:33 PM IST
ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್; ಬೆಳಗಾವಿ ತಂಡದ ಮಾಲೀಕ ಪೊಲೀಸರ ವಶಕ್ಕೆ..!
Belagavi team logo
  • Share this:
ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಬೆನ್ನು ಹತ್ತಿರುವ ರಾಜ್ಯ ಸಿಸಿಬಿ ಪೊಲೀಸರು ಬೆಳಗಾವಿ ಪ್ಯಾಂಥರ್ಸ್​ ತಂಡ ಮಾಲೀಕ ಅಲಿ ಅಸ್ಫಾಕ್​ ಅವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್ ಫಿಕ್ಸ್ ಮಾಡುತ್ತಿದ್ದ ಮಾಹಿತಿ ಮೇರೆಗೆ ಅಲಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಮುಂಬೈ ಬುಕ್ಕಿಗಳ ಮಾಹಿತಿಯ ಜಾಡು ಹಿಡಿದ ಸಿಸಿಬಿ ತಂಡ ಉದ್ಯಮಿ ಅಲಿ ಅಸ್ಫಾಕ್ ಅವರನ್ನು​ ವಿಚಾರಣೆಗೆ ಒಳಪಡಿಸಿದ್ದು, ಇವರು ಇತರೆ ಬುಕ್ಕಿಂಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇನ್ನು ಆಟಗಾರರನ್ನು ಮತ್ತು ಉಳಿದವರನ್ನು ಬುಕ್ ಮಾಡಿರುವ ಶಂಕೆ ಕೂಡ ಇದ್ದು, ವಿಚಾರಣೆಯಿಂದ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

ಕೆಪಿಎಲ್ ಅಲ್ಲದೆ ಐಪಿಎಲ್ ಹಾಗೂ ಇಂಟರ್ನ್ಯಾಷನಲ್ ಮ್ಯಾಚ್​ಗಳನ್ನು ಫಿಕ್ಸ್ ಮಾಡಿರುವ ಸಾಧ್ಯತೆ ಕೂಡ ಇದ್ದು, ಸಂಪೂರ್ಣ ತನಿಖೆಯಿಂದ ಕೆಲ ಆಟಗಾರರ ಹೆಸರುಗಳು ಹೊರಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಹೇಳಲಾಗಿದೆ.

ತಮಿಳು ನಾಡು ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅಪರಿಚಿತರು ಪ್ರಮುಖ ಆಟಗಾರರ ಮೊಬೈಲ್​ಗೆ ವಾಟ್ಸಾಪ್ ಸಂದೇಶ ರವಾನಿಸಿದ ಬಗ್ಗೆ ಬಿಸಿಸಿಐ ಕೆಲ ದಿನಗಳ ಹಿಂದೆ ತನಿಖೆ ಆರಂಭಿಸಿತ್ತು. ಇದರ ಬೆನ್ನಲ್ಲೆ ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಮ್ಯಾಚ್ ಫಿಕ್ಸಿಂಗ್​​ನಲ್ಲಿ ಸಿಕ್ಕಿ ಬಿದ್ದ ಘಟನೆಯೂ ನಡೆದಿದೆ ಎಂದು ವರದಿಯಾಗಿತ್ತು. ಈ ಸಂಬಂಧ ಬಿಸಿಸಿಐ ಭ್ರಷ್ಟಾಚಾರ ನಿಯಂತ್ರಣ ಘಟಕ ಇಬ್ಬರ ವಿರುದ್ಧ ಎಫ್​ಐಆರ್ ಕೂಡ ದಾಖಲು ಮಾಡಿದೆ.

ಇದನ್ನೂ ಓದಿ: ನಿಮ್ಮ ಮೊಬೈಲ್ ಕಳುವಾದರೆ ಏನು ಮಾಡಬೇಕು: ಈಗ ಫೋನ್​ಗಳನ್ನು ಪತ್ತೆ ಹಚ್ಚುವುದು ಮತ್ತಷ್ಟು ಸುಲಭ

ಈ ಮಧ್ಯೆ ಕರ್ನಾಟಕ ಪ್ರೀಮಿಯರ್ ಲೀಗ್​(ಕೆಪಿಎಲ್​)ನಲ್ಲಿ ಫಿಕ್ಸಿಂಗ್ ನಡೆದಿರುವ ಬಗ್ಗೆ ಬಿಸಿಸಿಐ ಶಂಕೆ ವ್ಯಕ್ತ ಪಡಿಸಿತ್ತು. ಕೆಲ ಆಟಗಾರರನ್ನು ಅಪರಿಚಿತ ವ್ಯಕ್ತಿ ವಾಟ್ಸಾಪ್​ ಮೂಲಕ ಸಂಪರ್ಕಿಸಿದ್ದಾರೆ.​ ಆಘಾತಕಾರಿ ವಿಚಾರ ಎಂದರೆ ಇದರಲ್ಲಿ ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಟೀಂ ಇಂಡಿಯಾ ಆಟಗಾರರನ್ನು ತನಿಖೆ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಜಿಯೋ  ಡಿಟಿಹೆಚ್​ ಎಫೆಕ್ಟ್: ಗ್ರಾಹಕರಿಗೆ ಉಚಿತ ಸೇವೆ, ಕ್ಯಾಶ್​ಬ್ಯಾಕ್ ಆಫರ್ ​ನೀಡಿದ ಡಿಶ್ ಟಿವಿ ಕಂಪೆನಿಗಳುಆದರೆ, ಯಾವ ಆಟಗಾರ ಎಂಬ ಬಗ್ಗೆ ತಿಳಿದುಬಂದಿಲ್ಲ. ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್​(ಐಪಿಎಲ್​)ನಲ್ಲಿ ಈ ಆಟಗಾರರ ಖಾಯಂ ಸದಸ್ಯ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ಕಳೆದ ವರ್ಷ ಕೂಡ ಕೆಪಿಎಲ್​ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಬಿಸಿಸಿಐ ಈಗಾಗಲೇ ಎರಡು ಕೆಪಿಎಲ್​ ತಂಡಗಳ ಮೇಲೆ ತನಿಖೆ ನಡೆಸುತ್ತಿದೆ. ಇದೀಗ ತನಿಖೆಯ ಪ್ರಗತಿಯಲ್ಲಿ ಬೆಳಗಾವಿ ಪ್ಯಾಂಥರ್ಸ್​ ತಂಡ ಮಾಲೀಕ ಅಲಿ ಅಸ್ಫಾಕ್ ಹೆಸರು ಕೇಳಿ ಬಂದಿರುವುದು ಎಲ್ಲರನ್ನು ಅಚ್ಚರಿ ಪಡಿಸಿದೆ.

ಇದನ್ನೂ ಓದಿ: ನನ್ನ ಮಗಳು ನನ್ನ ಬಳಿ ಬರೋದಿಲ್ಲ..: ಅಷ್ಟಕ್ಕೂ ರಾಧಿಕಾ ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ? 
First published: September 20, 2019, 2:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading