ಇಂಗ್ಲೆಂಡ್ (England) ತಂಡದ ಮಾಜಿ ನಾಯಕ, ಕ್ರಿಕೆಟ್ (Cricket) ವಿಶ್ಲೇಷಕ ಕೆವಿನ್ ಪೀಟರ್ಸನ್ (Kevin Pietersen) ಕ್ರಿಕೆಟಿನಿಂದ ನಿವೃತ್ತಿ ಪಡೆದಿದ್ದರೂ ಇಂದಿಗೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳನ್ನು(Fans) ಹೊಂದಿದ್ದಾರೆ.. ಪೀಟರ್ಸನ್ ಅವರ ಆಟದ ಶೈಲಿ ಇಂದಿಗೂ ಎಷ್ಟೋ ಜನ ಯುವ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಿದೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (Indian Premier League) ವಿಶ್ಲೇಷಕ ವಿವರಣೆಗಾರನಾಗಿ ಕೆಲಸ ಮಾಡುತ್ತಿರುವ ಕೆವಿನ್ ಪೀಟರ್ಸನ್ ಅವರು ನಿನ್ನೆ ಭಾರತಕ್ಕೆ ಬರಬೇಕಾಗಿತ್ತು..ಆದರೆ ಇದಕ್ಕೂ ಮೊದಲು ವಿಶೇಷ ಮನವಿಯೊಂದನ್ನ ಭಾರತೀಯರ ಮುಂದೆ ಪೀಟರ್ಸನ್ ಮಾಡಿಕೊಂಡಿದ್ದಾರೆ
ಕಳೆದುಕೊಂಡ ಪ್ಯಾನ್ ಕಾರ್ಡ್ ಗಾಗಿ ಪೀಟರ್ಸನ್ ಮನವಿ
ಕೆವಿನ್ ಪೀಟರ್ಸನ್ ಅವರು ಭಾರತಕ್ಕೆ ಭೇಟಿ ನೀಡುವ ಮೊದಲು ಸಹಾಯಹಸ್ತ ನೀಡುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದಾರೆ.. ಹೌದು ಕೆವಿನ್ ಪೀಟರ್ಸನ್ ಅವರು ತಮ್ಮ ಪ್ಯಾನ್ ಕಾರ್ಡ್ ಕಳೆದುಕೊಂಡಿರುವುದರಿಂದ ಅದನ್ನು ಮರಳಿ ಪಡೆಯಲು ಸಹಾಯ ಮಾಡಿ, ನಾನು ಭಾರತಕ್ಕೆ ಕೆಲಸದ ನಿಮಿತ ಮರಳುತ್ತಿದ್ದೇನೆ. ಕಳೆದುಕೊಂಡಿರುವ ಪ್ಯಾನ್ ಕಾರ್ಡ್ ಮರಳಿ ಪಡೆಯಲು ಯಾರನ್ನ ಸಂಪರ್ಕ ಮಾಡಬೇಕು..? ಯಾರಾದರೂ ಇದರ ಬಗ್ಗೆ ನನಗೆ ತುರ್ತು ಸಲಹೆ ನೀಡಿ ಎಂದು ಟ್ವಿಟ್ಟರ್ನಲ್ಲಿ ಭಾರತಕ್ಕೆ ಮನವಿ ಮಾಡಿಕೊಂಡಿದ್ದರು.. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಟ್ವೀಟ್ ಗೆ ಕೆವಿನ್ ಪೀಟರ್ಸನ್ ಟ್ಯಾಗ್ ಮಾಡಿದ್ದರು.
ಇದನ್ನೂ ಓದಿ: ಭಾರತ-ಶ್ರೀಲಂಕಾ ನಡುವಿನ ಪಂದ್ಯದ ಪರಿಷ್ಕೃತ ವೇಳಾಪಟ್ಟಿ ಪ್ರಕಟ; ಬೆಂಗಳೂರಿನಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯ
ಪೀಟರ್ಸನ್ ಮನವಿಗೆ ಸ್ಪಂದಿಸಿದ ಐಟಿ ಇಲಾಖೆ
ಇನ್ನು ಕೆವಿನ್ ಪೀಟರ್ಸನ್ ಪ್ಯಾನ್ ಕಾರ್ಡ್ ಕಳೆದುಕೊಂಡಿರುವುದಾಗಿ ಮಾಡಿದ ಮನವಿಗೆ ಭಾರತೀಯ ಆದಾಯ ತೆರಿಗೆ ಇಲಾಖೆ ಕೂಡ ಸ್ಪಂದಿಸಿದೆ.. ಪೀಟರ್ಸನ್ ಟ್ವಿಟ್ ಗೆ ಉತ್ತರ ನೀಡಿರುವ ಐಟಿ ಇಲಾಖೆ, ಆತ್ಮೀಯ ಕೆವಿನ್ ಪೀಟರ್ಸನ್, ನಾವು ನಿಮಗೆ ಸಹಾಯ ಮಾಡಲು ಸಿದ್ಧರಿದ್ದೇವೆ. ನಿಮ್ಮ ಬಳಿ ಪ್ಯಾನ್ ಕಾರ್ಡ್ ಮಾಹಿತಿ ಇದ್ದರೆ ಈ ಲಿಂಕ್ ಕ್ಲಿಕ್ ಮಾಡಿ. ಭೌತಿಕ ಪಾನ್ ಕಾರ್ಡ್ ರೀಪ್ರಿಂಟ್ಗಾಗಿ ನಿಯಮಗಳನ್ನು ಅನುಸರಿಸಿ ಎಂದು .
https://tin-nsdl.com/services/pan/pan-index.html.
https://pan.utiitsl.com/PAN/mainform.html"
ಒಂದೊಮ್ಮೆ ನಿಮ್ಮ ಪ್ಯಾನ್ ಕಾರ್ಡ್ ಮಾಹಿತಿ ನಿಮ್ಮ ಬಳಿ ಇಲ್ಲವಾದರೆ adg1.systems@incometax.gov.in & jd.systems1.1@incometax.gov.inಗೆ ಮೇಲ್ ಮಾಡಿ ಹೊಸ ಭೌತಿಕ ಪ್ಯಾನ್ ಕಾರ್ಡ್ಗೆ ಮನವಿ ಸಲ್ಲಿಸಿ ಎಂದು ತಿಳಿಸಲಾಗಿದೆ.
ಆದಾಯ ತೆರಿಗೆ ಇಲಾಖೆಗೆ ಪೀಟರ್ಸನ್ ಧನ್ಯವಾದ
ಇನ್ನು ಕೆವಿನ್ ಪೀಟರ್ಸನ್ ಅವರ ಟ್ವೀಟ್ ಗೆ ಉತ್ತರ ನೀಡಿದ ಆದಾಯ ತೆರಿಗೆ ಇಲಾಖೆಗೆ ಪೀಟರ್ಸನ್ ಮರಳಿ ಧನ್ಯವಾದ ತಿಳಿಸಿದ್ದಾರೆ. , 'ಅದ್ಬುತ, ನಿಮಗೆ ಧನ್ಯವಾದ, ನಾನು ನಿಮಗೆ ಇಮೇಲ್ ಮಾಡಿದ್ದೇನೆ. ನಿಮ್ಮ ಸಂಪರ್ಕ ಸಂಖ್ಯೆಯನ್ನು ನನಗೆ ಡಿಎಂ ಮಾಡಿದರೆ ನಾನು ನಿಮ್ಮೊಂದಿಗೆ ಮಾತನಾಡಬಹುದು'ಎಂದು ಮನವಿ ಮಾಡಿದ್ದಾರೆ.
ಇನ್ನು ಟ್ವಿಟ್ಟರ್ ನಲ್ಲಿ 3.8 ಮಿಲಿಯನ್ ಫಾಲೋವರ್ಸ್ ಹೊಂದಿರುವ ಪೀಟರ್ಸನ್ ಅವರ ಟ್ವೀಟ್ 17 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು ನೂರಾರು ಜನರು ಹೇಗೆ ಕಳೆದುಕೊಂಡಿರುವ ಪ್ಯಾನ್ ಕಾರ್ಡ್ ಮರಳಿ ಪಡೆಯಬೇಕು ಎಂದು ಪೀಟರ್ಸನ್ ಅವರಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಪಾಟ್ನಾ ವಿರುದ್ಧ ಸೋತು ಸುಣ್ಣವಾದ ಬೆಂಗಳೂರು ಬುಲ್ಸ್
ಇನ್ನು ಕಳೆದ ಕೆಲವು ಆವೃತ್ತಿಗಳಿಂದ ಪೀಟರ್ಸನ್ ಐಪಿಎಲ್ನ ವೀಕ್ಷಕ ವಿವರಣೆಗಾರರಾಗಿ ತೊಡಗಿಸಿಕೊಂಡಿದ್ದಾರೆ.ಇದಕ್ಕೂ ಮುನ್ನ ಇಂಗ್ಲೆಂಡ್ ತಂಡದ ನಾಯಕನಾಗಿ ಸಾಧನೆ ಮಾಡಿದ್ದ ಕೆವಿನ್ ಪೀಟರ್ಸನ್, ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ
ಡೆಲ್ಲಿ ಡೇರ್ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ರೈಸರ್ಸ್ ಹೈದರಾಬಾದ್, ಡೆಕ್ಕನ್ ಚಾರ್ಜರ್ಸ್ ಮತ್ತು ಪುಣೆ ಸೂಪರ್ಜೈಂಟ್ಸ್ ತಂಡಗಳಲ್ಲಿ ಆಡುವ ಮೂಲಕ ಭಾರತೀಯರ ಮನ ಗೆದ್ದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ