• Home
  • »
  • News
  • »
  • sports
  • »
  • Sanjay Manjrekar: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾರತ ಸೋಲಲು ಈತನ ಆಯ್ಕೆಯೇ ಕಾರಣ..!

Sanjay Manjrekar: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾರತ ಸೋಲಲು ಈತನ ಆಯ್ಕೆಯೇ ಕಾರಣ..!

Sanjay Manjrekar

Sanjay Manjrekar

ಭಾರತೀಯ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದಾಗಿ ದ್ವಿತೀಯ ಇನಿಂಗ್ಸ್​ನಲ್ಲಿ ನ್ಯೂಜಿಲೆಂಡ್​ಗೆ ಕೇವಲ 139 ರನ್​ಗಳ ಟಾರ್ಗೆಟ್ ನೀಡುವಲ್ಲಿ ಶಕ್ತರಾಗಿದ್ದರು. ಈ ಸಾಧಾರಣ ಗುರಿಯನ್ನು 2 ವಿಕೆಟ್ ನಷ್ಟದೊಂದಿಗೆ ಮುಟ್ಟುವ ಮೂಲಕ ನ್ಯೂಜಿಲೆಂಡ್ ಚೊಚ್ಚಲ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು.

ಮುಂದೆ ಓದಿ ...
  • Share this:

    ಚೊಚ್ಚಲ ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ದ 8 ವಿಕೆಟ್​ಗಳಿಂದ ಪರಾಜಯಗೊಂಡಿದೆ. ಈ ಸೋಲಿನೊಂದಿಗೆ ಕೊಹ್ಲಿ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಗೆಲ್ಲುವ ಟೀಮ್ ಇಂಡಿಯಾ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಇದೀಗ ಫೈನಲ್​ಗಾಗಿ ಟೀಮ್ ಇಂಡಿಯಾ ಆಯ್ಕೆ ಮಾಡಿದ ಪ್ಲೇಯಿಂಗ್ ಇಲೆವೆನ್ ಬಗ್ಗೆ ಚರ್ಚೆಗಳು ಶುರುವಾಗಿವೆ.


    ಈ ಸೋಲಿನ ಬಗ್ಗೆ ಮಾತನಾಡಿರುವ ಭಾರತದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್, ಟೀಮ್ ಇಂಡಿಯಾ ಸೋಲಿಗೆ ತಂಡದಲ್ಲಿ ಆಲ್​ರೌಂಡರ್ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿದ್ದು ಪ್ರಮುಖ ಕಾರಣ ಎಂದಿದ್ದಾರೆ. ಜಡೇಜಾ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದ್ದು ಹಿನ್ನಡೆಗೆ ಕಾರಣವಾಯಿತು. ಅವರ ಸ್ಥಾನದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಹನುಮ ವಿಹಾರಿಯನ್ನು ಆಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.


    ಬ್ಯಾಟ್ಸ್​ಮನ್ ಎಂಬ ಕಾರಣದಿಂದ ಜಡೇಜಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಈ ಯೋಜನೆ ಫಲ ನೀಡದೇ ಹಿನ್ನಡೆಯಾಯಿತು. ಒಂದು ವೇಳೆ ಟೆಸ್ಟ್​ನಲ್ಲಿ ಉತ್ತಮವಾಗಿ ಆಡುವ ಹನುಮ ವಿಹಾರಿಗೆ ಅವಕಾಶ ನೀಡಿದ್ರೆ ಭಾರತ ಮತ್ತಷ್ಟು ರನ್​ಗಳಿಸಲು ಸಾಧ್ಯವಾಗುತ್ತಿತ್ತು ಎಂದು ಸಂಜಯ್ ಮಂಜ್ರೇಕರ್ ತಿಳಿಸಿದ್ದಾರೆ.


    ಜಡೇಜಾ ಸ್ಥಾನದಲ್ಲಿ ತಂಡದಲ್ಲಿ ಹನುಮ ವಿಹಾರಿ ಇದ್ದಿದ್ದರೆ, ಆತ ರಕ್ಷಣಾತ್ಮಕವಾಗಿ ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿದ್ದ. ಇದು ಅಂತಿಮ ದಿನದಾಟದಲ್ಲಿ ತಂಡಕ್ಕೆ ನೆರವಾಗುತ್ತಿತ್ತು. ರಕ್ಷಣಾತ್ಮಕವಾಗಿ ಆಡುವ ಆಟಗಾರ ತಂಡದಲ್ಲಿದಿದ್ದರೆ 170 ಕ್ಕೆ ಆಲೌಟ್​ ಆಗಿದ್ದ ಭಾರತ ಬಹುಶಃ 220, 225 ಅಥವಾ 230 ರನ್‌ಗಳಿಸಲು ಸಾಧ್ಯವಾಗುತ್ತಿತ್ತು ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟರು.


    ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ರವೀಂದ್ರ ಜಡೇಜಾ ಮೊದಲ ಇನ್ನಿಂಗ್ಸ್‌ನಲ್ಲಿ 15 ರನ್, 2ನೇ ಇನ್ನಿಂಗ್ಸ್‌ನಲ್ಲಿ 16 ರನ್ ಮಾತ್ರಗಳಿಸಿದ್ದರು. ಅಲ್ಲದೆ ಭಾರತೀಯ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದಾಗಿ ದ್ವಿತೀಯ ಇನಿಂಗ್ಸ್​ನಲ್ಲಿ ನ್ಯೂಜಿಲೆಂಡ್​ಗೆ ಕೇವಲ 139 ರನ್​ಗಳ ಟಾರ್ಗೆಟ್ ನೀಡುವಲ್ಲಿ ಶಕ್ತರಾಗಿದ್ದರು. ಈ ಸಾಧಾರಣ ಗುರಿಯನ್ನು 2 ವಿಕೆಟ್ ನಷ್ಟದೊಂದಿಗೆ ಮುಟ್ಟುವ ಮೂಲಕ ನ್ಯೂಜಿಲೆಂಡ್ ಚೊಚ್ಚಲ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು.

    Published by:zahir
    First published: