Video Viral: ಝಾನ್ಸಿಯಾದ ಜೀವಾ; ಅಪ್ಪನಂತೆ ದೇಶ ಪ್ರೇಮ ಮೆರೆದ ಮಾಹಿ ಮಗಳು

ಮಾಹಿಯಂತೆ ಜೀವಾಳು ಕೂಡ ತನ್ನ ಇನ್​​ಸ್ಟಾಗ್ರಾಂ ಪೇಜ್​ನಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾಳೆ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರಂತೆ ವೇಷಭೂಷಣ ಧರಿಸಿಕೊಂಡು ಇತರ ಮಕ್ಕಳೊಂದಿಗೆ ನೃತ್ಯ ಮಾಡಿದ್ದಾಳೆ. ಈ ವಿಡಿಯೋವನ್ನು ಇನ್​​ಸ್ಟಾಗ್ರಾಂ ಪೇಜ್​​​ನಲ್ಲಿ ಹರಿಯ ಬಿಟ್ಟಿದ್ದು, ಸದ್ಯ ವೈರಲ್​ ಆಗಿದೆ.

news18
Updated:August 15, 2019, 5:15 PM IST
Video Viral: ಝಾನ್ಸಿಯಾದ ಜೀವಾ; ಅಪ್ಪನಂತೆ ದೇಶ ಪ್ರೇಮ ಮೆರೆದ ಮಾಹಿ ಮಗಳು
ಧೋನಿ ಹಾಗೂ ಮಗಳು ಜೀವಾ
  • News18
  • Last Updated: August 15, 2019, 5:15 PM IST
  • Share this:
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಕ್ರಿಕೆಟ್​ನಿಂದ ಕೊಂಚ ರಜೆ ಪಡೆದು ಭಾರತೀಯ ಸೈನೆಯೊಂದಿಗೆ ಸೇವೆ ಸಲ್ಲಿಸುವ ಮೂಲಕ ದೇಶ ಪ್ರೇಮ ಮೆರೆದಿದ್ದರು. ಇದೀಗ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಡಾಖ್​ನಲ್ಲಿರುವ ಸೈನಿಕರ ಆಸ್ಪತ್ರೆಗೆ ಭೇಟಿ ನೀಡಿ ಅವರೊಂದಿಗೆ ಸೇವೆ ಮಾಡುತ್ತಿದ್ದಾರೆ. ಇತ್ತ ಧೋನಿಯ ಮುದ್ದಿನ ಮಗಳು ಜೀವಾ, ಝಾನ್ಸಿ ರಾಣಿ ಲಕ್ಷ್ಮಿಬಾಯಿ ವೇಚಭೂಷಣ ಧರಿಸಿಕೊಂಡು ತಾನೂ ಅಪ್ಪನಂತೆ ದೇಶ ಪ್ರೇಮಿಯೆಂದು ಸಾಬೀತು ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.

ಮಾಹಿಯಂತೆ ಜೀವಾಳು ಕೂಡ ತನ್ನ ಇನ್​​ಸ್ಟಾಗ್ರಾಂ ಪೇಜ್​ನಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾಳೆ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರಂತೆ ವೇಷಭೂಷಣ ಧರಿಸಿಕೊಂಡು ಇತರ ಮಕ್ಕಳೊಂದಿಗೆ ನೃತ್ಯ ಮಾಡಿದ್ದಾಳೆ. ಈ ವಿಡಿಯೋವನ್ನು ಇನ್​​ಸ್ಟಾಗ್ರಾಂ ಪೇಜ್​​​ನಲ್ಲಿ ಹರಿಯ ಬಿಟ್ಟಿದ್ದು, ಸದ್ಯ ವೈರಲ್​ ಆಗಿದೆ.

Loading...
View this post on Instagram
 
Reposted from @finding_a_way_to_meet_dhoni_ - Cutest Video On Internet Today!💙 Ziva & her friends paying tribute to our brave hearts on the occasion of #IndependenceDay!👏🇮🇳 - #regrann . . #dhoni #cricket #viratkohli #msdhoni #ipl #mahi #rohitsharma #india #msd #csk #kohli #virat #cricketer #love #indiancricketteam#teamindia #whistlepodu #indiancricket #hardikpandya #virushka #msdians #bollywood #rcb #bleedblue #rohit #dhonism #sachintendulkar #viratians

A post shared by ZIVA SINGH DHONI (@zivasinghdhoni006) on

4ವರ್ಷದ ಜೀವಾ ಝಾನ್ಸಿರಾಣಿ ರಾಣಿ ಲಕ್ಷ್ಮಿಬಾಯಿಯಂತೆ ಕತ್ತಿ, ಗುರಾಣಿ ಹಿಡಿಕೊಂಡಿರುವ ಫೋಟೋ ಕೂಡ ಇಂಟರ್​ನೆಟ್​ನಲ್ಲಿ ಸದ್ದು ಮಾಡುತ್ತಿದೆ. ಇನ್ನಿತರ ಮಕ್ಕಳು ಗಾಂಧಿ, ನೆಹರು, ಸುಭಾಷ್​ಚಂದ್ರಭೋಸ್​, ಭಗತ್​ ಸಿಂಗ್​, ಚಂದ್ರಶೇಖರ್​ ಆಜಾದ್​ರಂತೆ ವೇಷಭೂಷಣ ಧರಿಸಿಕೊಂಡು ನನ್ಹಾ ಮುನ್ನ ರಾಹಿಹೂನ್​, ದೇಶ್​ ಕ ಸಿಪಾಯಿ ಹೂನ್​ ಎಂಬ ಹಾಡಿಗೆ ನೃತ್ಯ ಮಾಡಿದ್ದಾರೆ.
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...