ಧೋನಿಯನ್ನು ಮೀರಿಸುವಂತೆ ರನೌಟ್ ಮಾಡಿ ಗಮನ ಸೆಳೆದ ವಿಕೆಟ್ ಕೀಪರ್: ವಿಡಿಯೋ ವೈರಲ್

ಪೀಟರ್ ಮೆಕ್‌ಗ್ಲಾಶನ್ 2006 ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ  ಪದಾರ್ಪಣೆ ಮಾಡಿದ್ದರು. ನ್ಯೂಜಿಲೆಂಡ್ ಪರ 11 ಟಿ20 ಮತ್ತು 4 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

zahir | news18-kannada
Updated:January 12, 2020, 8:31 PM IST
ಧೋನಿಯನ್ನು ಮೀರಿಸುವಂತೆ ರನೌಟ್ ಮಾಡಿ ಗಮನ ಸೆಳೆದ ವಿಕೆಟ್ ಕೀಪರ್: ವಿಡಿಯೋ ವೈರಲ್
peter mcglashan
  • Share this:
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶರವೇಗದಲ್ಲಿ ಸ್ಟಂಪ್​ ಮಾಡುವುದರಲ್ಲಿ ಎತ್ತಿದ ಕೈ. ಅವರು ಕೀಪರ್​ ಆಗಿ ನಿಂತರೆ ಸಾಕು ಎದುರಾಳಿ ರನ್​ ಕದಿಯಲು ಹೆದರುತ್ತಾರೆ. ಅಷ್ಟು ಚಾಕಚಕ್ಯತೆಯಿಂದ ವಿಕೆಟ್ ಹಿಂದೆ ಎಂಎಸ್​ಡಿ ಆಕ್ಟೀವ್ ಆಗಿರುತ್ತಾರೆ.​ ಹೀಗಾಗಿಯೇ ಧೋನಿಯನ್ನು ಬೆಸ್ಟ್ ವಿಕೆಟ್ ಕೀಪರ್ ಎಂದು ಕೊಂಡಾಡಲಾಗುತ್ತಿದೆ.

ಆದರೆ ಧೋನಿ ವಿಕೆಟ್ ಕೀಪಿಂಗ್​ನಲ್ಲಿ ಹಲವು ರೀತಿಯಲ್ಲಿ ರನೌಟ್ ಮಾಡಿ  ನಿಬ್ಬೆರಗಾಗಿಸಿದ್ದರೂ, ನ್ಯೂಜಿಲೆಂಡ್ ತಂಡದ ಮಾಜಿ ವಿಕೆಟ್ ಕೀಪರ್ ​ ಪೀಟರ್ ಮೆಕ್‌ಗ್ಲಾಶನ್ ಮಾಡಿರುವ ವಿಭಿನ್ನ ವಿಕೆಟ್ ಕೀಪಿಂಗ್​ವೊಂದು ಇದೀಗ ವಿಶ್ವದ ಗಮನ ಸೆಳೆಯುತ್ತಿದೆ.

ನ್ಯೂಜಿಲೆಂಡ್ ಲೀಗ್ ಸೂಪರ್ ಸ್ಮ್ಯಾಶ್ ಟೂರ್ನಿಯಲ್ಲಿ ಆಡುತ್ತಿರುವ ಪೀಟರ್ ಮೆಕ್‌ಗ್ಲಾಶನ್ ಬ್ಯಾಟ್ಸ್​ಮನ್​ನೊಂದಿಗೆ ಓಡುತ್ತಾ ಮತ್ತೊಂದು ತುದಿಯಲ್ಲಿ ರನೌಟ್ ಮಾಡಿ ಮಿಂಚಿದ್ದಾರೆ. ಸಿವೈ ತಂಡದ ಆಟಗಾರ ಬಾರಿಸಿ ಚೆಂಡು ಮಿಡ್ ಆಫ್​ನತ್ತ ಸಾಗಿತ್ತು. ಅತ್ತ ಎರಡು ರನ್ ಕದಿಯಲು ಬ್ಯಾಟ್ಸ್​ಮನ್​ ಕರೆ ಕೊಟ್ಟಿದ್ದ.

ಅದರಂತೆ ಮೊದಲ ರನ್​ ಪೂರೈಸುವಾಗಲೇ ಕೀಪರ್ ಪೀಟರ್ ಮೆಕ್‌ಗ್ಲಾಶನ್ ಕೂಡ ನಾನ್ ಸ್ಟ್ರೈಕ್​​ನತ್ತ ಓಡಿದ್ದಾರೆ. ಅಲ್ಲದೆ ಎರಡನೇ ರನ್​ ಕದಿಯಲು ಮುಂದಾಗಿದ್ದ ಬ್ಯಾಟ್ಸ್​ಮನ್​ರನ್ನು ನಾನ್​ ಸ್ಟ್ರೈಕ್​ನಲ್ಲಿ ರನೌಟ್ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

''ಲಾಂಗ್ ಆಫ್ ಅಥವಾ ಲಾಂಗ್ ಆನ್ ನಿಂದ ಬರುವ ಥ್ರೋ ಮೂಲಕ ನಾನ್​ ಸ್ಟ್ರೈಕ್​ನಲ್ಲಿ ರನೌಟ್​ ಮಾಡಲು ಹೆಚ್ಚಿನ ಅವಕಾಶಗಳಿರುತ್ತದೆ. ಇಂತಹ ವೇಳೆ ಬೌಲರುಗಳಿಗಿಂತ ವಿಕೆಟ್ ಕೀಪರ್​ ಚೆಂಡನ್ನು ಹಿಡಿಯುವುದು ಸುಲಭ. ವೇಗದ ಥ್ರೋಗಳನ್ನು ಸುಲಭವಾಗಿ ಗ್ಲೌಸ್ ಮೂಲಕ ಬಂಧಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಬೌಲರ್​ ತುದಿಗೆ ಓಡಿ ರನೌಟ್ ಮಾಡಬಹುದು ಎಂದು ಯೋಚಿಸಿದೆ. ಅದರಂತೆ ಯಶಸ್ವಿಯಾದೆ" ಎಂದು ವಿಕೆಟ್ ಕೀಪರ್ ಪೀಟರ್ ಮೆಕ್‌ಗ್ಲಾಶನ್ ಹೇಳಿದ್ದಾರೆ.

ಈ ರನೌಟ್ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಈ ತಂತ್ರವನ್ನೂ ಇತರೆ ವಿಕೆಟ್ ಕೀಪರ್​ಗಳು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಎಂದು ಅನೇಕರು ಸಲಹೆ ನೀಡುತ್ತಿದ್ದಾರೆ.ಪೀಟರ್ ಮೆಕ್‌ಗ್ಲಾಶನ್ 2006 ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ  ಪದಾರ್ಪಣೆ ಮಾಡಿದ್ದರು. ನ್ಯೂಜಿಲೆಂಡ್ ಪರ 11 ಟಿ20 ಮತ್ತು 4 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2009 ರಲ್ಲಿ ಭಾರತ ವಿರುದ್ಧದ ಮೂಲಕ ಏಕದಿನ ಕ್ರಿಕೆಟ್​ಗೂ ಕಾಲಿಟ್ಟಿದ್ದರು. ಆದರೆ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬ್ಯಾಟಿಂಗ್ ಮೂಲಕ ಮಿಂಚಿದ್ದು ಕಡಿಮೆಯೇ. ಆದರೆ ಆಡಿದ ಒಂದಷ್ಟು ಏಕದಿನ ಪಂದ್ಯಗಳಿಂದ  7 ಕ್ಯಾಚ್‌ಗಳನ್ನು ಟಿ 20 ಕ್ರಿಕೆಟ್​ನಿಂದ 9 ಕ್ಯಾಚ್‌ಗಳನ್ನು ಹಿಡಿದು ಮಿಂಚಿದ್ದರು. ಇದೀಗ ಮತ್ತೊಂದು ರನೌಟ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.


ಇದನ್ನೂ ಓದಿ: Bigg Boss: ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಗ್ ಟ್ವಿಸ್ಟ್​..!
First published: January 12, 2020, 8:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading