BBL 10: ಆಟಗಾರನ ಅದೃಷ್ಟವೊ, ದುರಾದೃಷ್ಟವೊ...ಹೀಗೊಂದು ಅಚ್ಚರಿಯ ರನೌಟ್..!

ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಕೇವಲ 48 ಎಸೆತಗಳಲ್ಲಿ 83 ರನ್ ಸಿಡಿಸಿ ಅಬ್ಬರಿಸಿದ್ದರು. ಒಂದು ಹಂತದಲ್ಲಿ ಸಿಡ್ನಿ ಪರ ವಾಲಿದ್ದ ಪಂದ್ಯವನ್ನು ಕೊನೆಯ ಹಂತದಲ್ಲಿ ಪರ್ತ್ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಅದರಲ್ಲೂ ಸ್ಯಾಮ್ ಬಿಲ್ಲಿಂಗ್ಸ್ ಜೊತೆ ಕ್ರೀಸ್​ನಲ್ಲಿದ್ದ ಅಪಾಯಕಾರಿ ಬ್ಯಾಟ್ಸ್​ಮನ್ ಅಲೆಕ್ಸ್ ರೋಸ್ ರನೌಟ್ ಸಿಡ್ನಿ ತಂಡಕ್ಕೆ ಮುಳುವಾಯಿತು.

BBL 10

BBL 10

 • Share this:
  ಆಸ್ಟ್ರೇಲಿಯಾದ ಒಪ್ಟಸ್ ಕ್ರೀಡಾಂಗಣದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್​ನ 34ನೇ ಪಂದ್ಯವು ವಿಭಿನ್ನ ರನೌಟ್​ಗೆ ಸಾಕ್ಷಿಯಾಯಿತು. ಸಿಡ್ನಿ ಥಂಡರ್ ಹಾಗೂ ಪರ್ತ್ ಸ್ಕಾಚರ್ಸ್​ ನಡುವಣ ಪಂದ್ಯದಲ್ಲಿ ಟಾಸ್ ಗೆದ್ದ ಸಿಡ್ನಿ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾಚರ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು.

  ಕಾಲಿನ್ ಮನ್ರೊ ಅವರ ಅರ್ಧಶತಕ ಹಾಗೂ ನಾಯಕ ಟರ್ನರ್ ಅವರ ಸಿಡಿಲಬ್ಬರದ 31 ರನ್​ಗಳ ನೆರವಿನಿಂದ ಪರ್ತ್ ಸ್ಕಾಚರ್ಸ್​ ತಂಡವು 6 ವಿಕೆಟ್ ನಷ್ಟಕ್ಕೆ 185 ರನ್​ ಪೇರಿಸಿತು. ಈ ಬೃಹತ್ ಟಾರ್ಗೆಟ್ ಬೆನ್ನತ್ತಿದ ಸಿಡ್ನಿ ಥಂಡರ್​ಗೆ ಒಪನಿಂಗ್ ಬ್ಯಾಟ್ಸ್​ಮನ್ ಉಸ್ಮಾನ್ ಖ್ವಾಜಾ ಬಿರುಸಿನ ಆರಂಭ ಒದಗಿಸಿದ್ದರು.

  ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಕೇವಲ 48 ಎಸೆತಗಳಲ್ಲಿ 83 ರನ್ ಸಿಡಿಸಿ ಅಬ್ಬರಿಸಿದ್ದರು. ಒಂದು ಹಂತದಲ್ಲಿ ಸಿಡ್ನಿ ಪರ ವಾಲಿದ್ದ ಪಂದ್ಯವನ್ನು ಕೊನೆಯ ಹಂತದಲ್ಲಿ ಪರ್ತ್ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಅದರಲ್ಲೂ ಸ್ಯಾಮ್ ಬಿಲ್ಲಿಂಗ್ಸ್ ಜೊತೆ ಕ್ರೀಸ್​ನಲ್ಲಿದ್ದ ಅಪಾಯಕಾರಿ ಬ್ಯಾಟ್ಸ್​ಮನ್ ಅಲೆಕ್ಸ್ ರೋಸ್ ರನೌಟ್ ಸಿಡ್ನಿ ತಂಡಕ್ಕೆ ಮುಳುವಾಯಿತು.

  ಸ್ಯಾಮ್ ಬಿಲ್ಲಿಂಗ್ಸ್ ಚೆಂಡನ್ನು ಶಾರ್ಟ್​ ಸ್ಕ್ವೇರ್ ಲೆಗ್​ನತ್ತ ಬಾರಿಸಿ 2 ರನ್ ಕದಿಯುವ ಪ್ರಯತ್ನ ಮಾಡಿದ್ದರು. 2ನೇ ರನ್​ಗಾಗಿ ಓಡಿದ ಅಲೆಕ್ಸ್ ರೋಸ್ ಅವರನ್ನು ಸ್ಯಾಮ್ ತಡೆದರು. ಹೀಗಾಗಿ ಮತ್ತೆ ಅಲೆಕ್ಸ್ ರೋಸ್ ವಾಪಾಸ್ ಓಡಿದರು. ಇದೇ ವೇಳೆ ಬೌಲರ್ ಓಡಿ ಹೋಗಿ ಚೆಂಡನ್ನು ಕೀಪರ್​ಗೆ ಎಸೆದರು. ಆದರೆ ಚೆಂಡು ನಿಖರ ಥ್ರೋ ಆಗಿರಲಿಲ್ಲ. ಅದಾಗ್ಯೂ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ ಬಾಲನ್ನು ಹಿಡಿಯುವ ಪ್ರಯತ್ನದಲ್ಲಿರುವಾಗ ಚೆಂಡು​ ಬೌನ್ಸ್​ ಆಯಿತು.

  ಚೆಂಡು ಕೀಪರ್ ಕೈಯಿಂದ ಚಿಮ್ಮಿದ್ದರಿಂದ ಬ್ಯಾಟ್ಸ್​ಮನ್ ಸೇಫ್ ಅನ್ನುವಷ್ಟರಲ್ಲಿ ಇಂಗ್ಲಿಸ್ ಬಾಲ್​ನ್ನು ವಿಕೆಟ್​ನತ್ತ ತಳ್ಳಿದರು. ವಿಕೆಟ್ ಕೀಪರ್ ಅದೃಷ್ಟವೊ, ಅಲೆಕ್ಸ್ ರೋಸ್ ದುರಾದೃಷ್ಟವೋ, ಚೆಂಡು ಸ್ವಿಂಗ್ ಆಗಿ ವಿಕೆಟ್​​ಗೆ ಬಡಿಯಿತು. ಇತ್ತ ವಿಭಿನ್ನ ರೀತಿಯ ರನೌಟ್ ನೋಡಿ ಪರ್ತ್ ಸ್ಕಾಚರ್ಸ್ ಆಟಗಾರರಿಗೆ ನಗು ತಡೆಯಲಾಗಲಿಲ್ಲ.  ಇನ್ನು ಸ್ಯಾಮ್ ಬಿಲ್ಲಿಂಗ್ ಅವರ 83 ರನ್​ಗಳ ಕಾಣಿಕೆಯ ಹೊರತಾಗಿಯೂ ಸಿಡ್ನಿ ಥಂಡರ್​ಗೆ ಗೆಲುವು ದಕ್ಕಲಿಲ್ಲ. ಅಂತಿಮ ಓವರ್​ಗಳಲ್ಲಿ ಉತ್ತಮ ದಾಳಿ ಸಂಘಟಿಸಿದ ಪರ್ತ್​ ಸ್ಕಾಚರ್ಸ್ ತಂಡವು 17 ರನ್​ಗಳಿಂದ ಜಯ ದಾಖಲಿಸಿತು.
  Published by:zahir
  First published: