Jasprit Bumrah: ಪರ್ಫಾರ್ಮ್ಯಾಕ್ಸ್ ಬ್ರ್ಯಾಂಡ್‌ಗೆ ಜಸ್‌ಪ್ರೀತ್‌ ಬುಮ್ರಾ ಬ್ರ್ಯಾಂಡ್‌ ಅಂಬಾಸಿಡರ್‌!

ಪರ್ಫಾರ್ಮ್ಯಾಕ್ಸ್‌ ಭಾರತೀಯ ಬ್ರ್ಯಾಂಡ್ ಆಗಿದ್ದು, ದೇಶದ ನಂ.1 ಕ್ರೀಡಾ ಉಡುಪು ಬ್ರ್ಯಾಂಡ್ ಆಗಿ ಹೊರಹೊಮ್ಮುವ ಗುರಿಯನ್ನು ಹೊಂದಿದೆ. ಬುಮ್ರಾ ಮತ್ತು ಪರ್ಫಾರ್ಮ್ಯಾಕ್ಸ್‌ ಬದ್ಥತೆ ಮತ್ತು ಪರಿಣಿತಿಗೆ ಹೆಸರಾಗಿದ್ದಾರೆ.

ಜಸ್‌ಪ್ರೀತ್ ಬುಮ್ರಾ

ಜಸ್‌ಪ್ರೀತ್ ಬುಮ್ರಾ

 • Share this:
  ಮುಂಬೈ, ಸೆಪ್ಟೆಂಬರ್ 3: ರಿಲಯನ್ಸ್‌ ರಿಟೇಲ್‌ನ (Reliance retail) ಅಧಿಕ ಕಾರ್ಯಕ್ಷಮತೆಯ ಮತ್ತು ತಾಂತ್ರಿಕವಾಗಿ ಸುಧಾರಿತ ಕ್ರೀಡಾ ಉಡುಪು (Sport Wear) ಬ್ರ್ಯಾಂಡ್‌ ಪರ್ಫಾರ್ಮ್ಯಾಕ್ಸ್‌ (Performax) ಕ್ರಿಕೆಟ್ ಸ್ಟಾರ್ (Cricket Star) ಹಾಗೂ ಭಾರತದ ಪ್ರಮುಖ ಬೌಲರ್ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರನ್ನು ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಿಸಿದೆ. ಪರ್ಫಾರ್ಮ್ಯಾಕ್ಸ್‌ ಭಾರತೀಯ ಬ್ರ್ಯಾಂಡ್ ಆಗಿದ್ದು, ದೇಶದ ನಂ.1 ಕ್ರೀಡಾ ಉಡುಪು ಬ್ರ್ಯಾಂಡ್ ಆಗಿ ಹೊರಹೊಮ್ಮುವ ಗುರಿಯನ್ನು ಹೊಂದಿದೆ. ಬುಮ್ರಾ ಮತ್ತು ಪರ್ಫಾರ್ಮ್ಯಾಕ್ಸ್‌ ಬದ್ಥತೆ ಮತ್ತು ಪರಿಣಿತಿಗೆ ಹೆಸರಾಗಿದ್ದಾರೆ. ಹೀಗಾಗಿ, ಬ್ರ್ಯಾಂಡ್‌ಗೆ ಬುಮ್ರಾ ಅತ್ಯಂತ ಸೂಕ್ತವಾಗಿ ಹೊಂದುತ್ತಾರೆ.

  ಈ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್‌ ರಿಟೇಲ್‌ನ ಫ್ಯಾಷನ್‌ ಮತ್ತು ಲೈಫ್‌ಸ್ಟೈಲ್‌ನ ಸಿಇಒ ಅಖಿಲೇಶ್‌ ಪ್ರಸಾದ್ "ಜಸ್‌ಪ್ರೀತ್ ಬುಮ್ರಾ ಜೊತೆಗೆ ನಮ್ಮ ಸಹಭಾಗಿತ್ವವನ್ನು ಘೋಷಿಸುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಜಸ್‌ಪ್ರೀತ್ ಹಲವು ವರ್ಷಗಳಿಂದಲೂ ಭಾರತ ತಂಡದ ಪ್ರಮುಖ ಪೇಸರ್ ಆಗಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ, ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿರುವ ಭಾರತದ ನಂ.1 ಕ್ರೀಡಾ ಬ್ರ್ಯಾಂಡ್ ಆಗಿ ಪರ್ಫಾರ್ಮ್ಯಾಕ್ಸ್ ಅನ್ನು ರೂಪಿಸುವ ಧ್ಯೇಯವನ್ನು ನಾವು ಹೊಂದಿದ್ದೇವೆ. ಪರ್ಫಾರ್ಮ್ಯಾಕ್ಸ್‌ ಅನ್ನು ನಮ್ಮ ಗ್ರಾಹಕರಿಗೆ ಒಂದು ಉತ್ತಮ ಮತ್ತು ಆದ್ಯತೆಯ ಬ್ರ್ಯಾಂಡ್ ಆಗಿಸುವ ನಿಟ್ಟಿನಲ್ಲಿ ನಾವು ಇಡುತ್ತಿರುವ ಹೆಜ್ಜೆಗಳಲ್ಲಿ ಇದು ಮೊದಲನೆಯಾಗಿದೆ" ಎಂದು ಹೇಳಿದ್ದಾರೆ.

  ಜಸ್‌ಪ್ರೀತ್‌ ಬುಮ್ರಾ ಈ ಬಗ್ಗೆ ಮಾತನಾಡಿ "ಕ್ರೀಡಾಳುವಾಗಿ ನಾನು ಧರಿಸುವ ಉಡುಪಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇನೆ. ಸರಿಯಾಗಿ ಫಿಟ್ ಆಗಿರುವ ಉಡುಪು ಉತ್ತಮ ಆಟ ಆಡಲು ನೆರವಾಗುತ್ತದೆ. ಪರ್ಫಾರ್ಮ್ಯಾಕ್ಸ್‌ನಲ್ಲಿ ತಾಂತ್ರಿಕವಾಗಿ ಸುಧಾರಿತ ಆಕ್ಟಿವ್ ವೇರ್‌ನ ಹಲವು ವಿಧಗಳಿವೆ. ಇವು ಭಾರತದ ಮುಂದಿನ ತಲೆಮಾರಿನ ಅಥ್ಲೀಟ್‌ಗಳಿಗೆ ಉತ್ತಮ ಸಂಗಾತಿಯಾಗಬಲ್ಲವು. ಉತ್ತಮ ಸಾಧನೆ ಮಾಡಬೇಕು ಎಂಬ ನನ್ನ ಧ್ಯೇಯಕ್ಕೂ ಈ ಬ್ರ್ಯಾಂಡ್‌ನ ಧ್ಯೇಯಕ್ಕೂ ಹೊಂದಿಕೆ ಆಗುವುದರಿಂದ ಇದರ ಜೊತೆಗೆ ನಾನು ಗುರುತಿಸಿಕೊಳ್ಳುತ್ತಿರುವುದು ಖುಷಿಯ ಸಂಗತಿ" ಎಂದಿದ್ದಾರೆ.

  ಇದನ್ನೂ ಓದಿ: Asia Cup 2022: ಪಾಕ್​ ಪಂದ್ಯಕ್ಕೂ ಮುನ್ನ ಜಾಲಿ ಮೂಡ್​ನಲ್ಲಿ ರೋಹಿತ್​ ಪಡೆ, ವಿಡಿಯೋ ವೈರಲ್

  ಜಸ್‌ಪ್ರೀತ್ ಬುಮ್ರಾ ಅವರ ಮೂಲಕ ಗ್ರಾಹಕರನ್ನು ತಲುಪುವುದರ ಜೊತೆಗೆ, ರಿಲಾಯನ್ಸ್‌ ರಿಟೇಲ್‌ನ ಫ್ಯಾಷನ್ ಮತ್ತು ಲೈಫ್‌ಸ್ಟೈಲ್‌ ಸ್ಟೋರ್‌ಗಳಲ್ಲಿ ಎಕ್ಸ್‌ಕ್ಲೂಸಿವ್ ಬ್ರ್ಯಾಂಡ್‌ ಔಟ್‌ಲೆಟ್‌ಗಳನ್ನು ಸ್ಥಾಪಿಸಲಾಗುತ್ತದೆ ಮತ್ತು ಮಲ್ಟಿ ಬ್ರ್ಯಾಂಡ್ ಔಟ್‌ಲೆಟ್‌ಗಳಲ್ಲೂ ಕಾಣಿಸಿಕೊಳ್ಳಲಿದೆ. ಅಷ್ಟೇ ಅಲ್ಲ, ಡಿಜಿಟಲ್‌ ಪ್ಲಾಟ್‌ಫಾರಂಗಳಲ್ಲೂ ಇದು ಲಭ್ಯವಿರುತ್ತದೆ. ಪರ್ಫಾರ್ಮ್ಯಾಕ್ಸ್‌ ರಿಲಯನ್ಸ್‌ ರಿಟೇಲ್‌ನ ಸ್ವಂತ ಬ್ರ್ಯಾಂಡ್ ಆಗಿದ್ದು, ಆಕ್ಟಿವ್‌ ವೇರ್ ಸಾಮಗ್ರಿಗಳಲ್ಲಿ ವಿಶೇಷ ಪರಿಣಿತಿ ಹೊಂದಿದೆ ಮತ್ತು ಪಾದರಕ್ಷೆ, ಉಡುಪು ಮತ್ತು ಅಕ್ಸೆಸರಿಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಒದಗಿಸುತ್ತದೆ. ಪ್ರಸ್ತುತ 330 ಕ್ಕೂ ಹೆಚ್ಚು ನಗರಗಳಲ್ಲಿ 1000 ಕ್ಕೂ ಹೆಚ್ಚು ಸ್ಟೋರ್‌ಗಳಲ್ಲಿ ಬ್ರ್ಯಾಂಡ್‌ ಅಸ್ತಿತ್ವ ಹೊಂದಿದೆ.

  ಇದನ್ನೂ ಓದಿ: IND vs PAK Asia Cup 2022: ಪಾಕ್​ ಪಂದ್ಯಕ್ಕಾಗಿ ಟೀಂ ಇಂಡಿಯಾ ಪ್ಲೇಯಿಂಗ್​ 11ನಲ್ಲಿ ಮಹತ್ವದ ಬದಲಾವಣೆ?

  ರಿಲಯನ್ಸ್​ ಜಿಯೋ 5ಜಿ ಸೇವೆ

  ಜಿಯೋ 5ಜಿ ಸೇವೆಗಾಗಿ ಬಹುತೇಕರು ಕಾಯುತ್ತಿದ್ದಾರೆ. ಅದರಂತೆಯೇ ಏರ್​ಟೆಲ್​, ವೊಡಾಫೋನ್​ ಐಡಿಯಾ ಕೂಡ 5ಜಿ ಸೇವೆಯ ಬಗ್ಗೆ ಅಪ್ಡೇಡ್​ ಕೊಡುತ್ತಿದ್ದಾರೆ. ಒಟ್ಟಾರೆ ಹೇಳಬೇಕಾದರೆ ಟೆಲಿಕಾಂ ಕಂಪನಿಗಳು ಮುಂದಿನ 5ಜಿ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಅದರಂತೆ ಜಿಯೋ ದೀಪಾವಳಿ ಉಡುಗೊರೆ ಎಂಬಂತೆ ಮೆಟ್ರೋ ನಗರಗಳಲ್ಲಿ 5ಜಿ ಸೇವೆ ಪ್ರಾರಂಭಿಸುವುದಾಗಿ ತಿಳಿಸಿದೆ. ಡಿಸೆಂಬರ್ 2023 ರ ವೇಳೆಗೆ 18 ತಿಂಗಳುಗಳಲ್ಲಿ ಇಡೀ ಭಾರತವನ್ನು ಆವರಿಸಲು ಇತರ ನಗರಗಳು ಮತ್ತು ಪಟ್ಟಣಗಳಿಗೆ ಹಂತ ಹಂತವಾಗಿ ವಿಸ್ತರಿಸಲಿದೆ. ವೇಗದ ಇಂಟರ್​ನೆಟ್​ ಸೇವೆಯನ್ನು ನೀಡುವುದಾಗಿ ಜಿಯೋ ಹೇಳಿಕೊಂಡಿದೆ.

  ಜಿಯೋದ 5G ನೆಟ್‌ವರ್ಕ್ 4G ನೆಟ್‌ವರ್ಕ್‌ಗಿಂತ ವೇಗವಾಗಿರುತ್ತದೆ. ಸ್ಟ್ಯಾಂಡ್-ಅಲೋನ್ 5G ಆರ್ಕಿಟೆಕ್ಚರ್‌ನ ಮೂರು ಪಟ್ಟು ಪ್ರಯೋಜನ, ಸ್ಪೆಕ್ಟ್ರಮ್ ಮತ್ತು ಕ್ಯಾರಿಯರ್ ಒಟ್ಟುಗೂಡಿಸುವಿಕೆಯ ತಂತ್ರಜ್ಞಾನವನ್ನು ಹೊಂದಿರಲಿದೆ. ಜಿಯೋ 5G ಸೇವೆಯ ವ್ಯಾಪ್ತಿಯನ್ನು ಎಲ್ಲೆಡೆ ಪಸರಿಸಲಿದೆ.

  ಜಿಯೋ ಸ್ಟ್ಯಾಂಡ್-ಅಲೋನ್ 5G ಸೇವೆಯೊಂದಿಗೆ, 5G ಧ್ವನಿ, ಎಡ್ಜ್ ಕಂಪ್ಯೂಟಿಂಗ್ ಮತ್ತು ನೆಟ್‌ವರ್ಕ್ ಸ್ಲೈಸಿಂಗ್ ಮತ್ತು ಮೆಟಾವರ್ಸ್‌ನಂತಹ ಹೊಸ ಮತ್ತು ಶಕ್ತಿಯುತ ಸೇವೆಗಳನ್ನು ನೀಡಲಿದೆ. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಹಲವಾರು ಸಂಗತಿಗಳನ್ನ ತೆರೆದಿಟ್ಟಿದೆ.
  Published by:Harshith AS
  First published: