ಸರ್ಫರಾಜ್​ರನ್ನು ನಾಯಕತ್ವದಿಂದ ಕೆಳಗಿಳಿಸಲು ಪಾಕ್ ಕ್ರಿಕೆಟ್ ಮಂಡಳಿ ನಿರ್ಧಾರ

ಸರ್ಫರಾಜ್ ಟೆಸ್ಟ್​ ಪಂದ್ಯದಲ್ಲಿ ನಾಯಕನಾಗಿ ಪಾಕಿಸ್ತಾನ ತಂಡವನ್ನು 13 ಬಾರಿ ಮುನ್ನಡೆಸಿದ್ದಾರೆ. ಇದರಲ್ಲಿ ಕೇವಲ 4 ಪಂದ್ಯ ಮಾತ್ರ ಜಯ ಸಾಧಿಸಿದೆ.

Vinay Bhat | news18
Updated:July 28, 2019, 6:27 PM IST
ಸರ್ಫರಾಜ್​ರನ್ನು ನಾಯಕತ್ವದಿಂದ ಕೆಳಗಿಳಿಸಲು ಪಾಕ್ ಕ್ರಿಕೆಟ್ ಮಂಡಳಿ ನಿರ್ಧಾರ
ಸರ್ಫರಾಜ್ ಅಹ್ಮದ್
  • News18
  • Last Updated: July 28, 2019, 6:27 PM IST
  • Share this:
ಬೆಂಗಳೂರು (ಜು. 28): ಪಾಕಿಸ್ತಾನ ಕ್ರಿಕೆಟ್ ತಂಡದ ಕ್ಯಾಪ್ಟನ್ ಸರ್ಫರಾಜ್ ಅಹ್ಮದ್​ರನ್ನು ಟೆಸ್ಟ್​ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಮುಂಬರುವ ಐಸಿಸಿ ಟೆಸ್ಟ್​ ಚಾಂಪಿಯನ್ ಶಿಪ್​​ನಲ್ಲಿ ನೂತನ ನಾಯಕನನ್ನು ಆಯ್ಕೆ ಮಾಡುವತ್ತ ಪಿಸಿಬಿ ಗಮನ ಹರಿಸಿದೆ. ಮುಂದಿನ ಶುಕ್ರವಾರ ಲಾಹೋರ್​ನಲ್ಲಿ ಪಿಸಿಬಿ ಸಭೆ ಕರೆದಿದ್ದು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

Presidents Cup: ಚಿನ್ನಕ್ಕೆ ಕೊರಳೊಡ್ಡಿದ ಮೇರಿ ಕೋಮ್

ನೂತನ ನಾಯಕ ಸ್ಥಾನಕ್ಕೆ ಶಾನ್ ಮಸೂದ್ ಹೆಸರು ಕೇಳಿ ಬರುತ್ತಿದೆ. ಆದರೆ, ಮಸೂದ್​ಗೆ ನಾಯಕನ ಪಟ್ಟ ನೀಡಲು ಅನೇಕರಿಂದ ಅಸಮಧಾನ ಕೇಳಿ ಬಂದ ಕಾರಣ ಈ ಬಗ್ಗೆ ಪಾಕ್ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆಯಂತೆ.

ಸರ್ಫರಾಜ್ ಟೆಸ್ಟ್​ ಪಂದ್ಯದಲ್ಲಿ ನಾಯಕನಾಗಿ ಪಾಕಿಸ್ತಾನ ತಂಡವನ್ನು 13 ಬಾರಿ ಮುನ್ನಡೆಸಿದ್ದಾರೆ. ಇದರಲ್ಲಿ ಕೇವಲ 4 ಪಂದ್ಯ ಮಾತ್ರ ಜಯ ಸಾಧಿಸಿದೆ. ಸದ್ಯ ಟೆಸ್ಟ್​ ರ್ಯಾಂಕಿಂಗ್​ನಲ್ಲಿ ಪಾಕ್ 7ನೇ ಸ್ಥಾನದಲ್ಲಿದೆ.

First published: July 28, 2019, 6:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading