England vs Ireland: ವಿಶ್ವ ಚಾಂಪಿಯನ್ ತಂಡಕ್ಕೆ ಸೋಲಿನ ರುಚಿ ತೋರಿಸಿದ ಐರ್ಲೆಂಡ್..!

ನಾಲ್ಕನೇ ವಿಕೆಟ್‌ಗೆ 146 ರನ್‌ಗಳ ಜೊತೆಯಾಟವಾಡಿದ ಈ ಜೋಡಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. ಇದರ ನಡುವೆ ಮೊರ್ಗನ್ 84 ಎಸೆತಗಳಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 106 ರನ್ ಗಳಿಸಿದರು.

Ireland's

Ireland's

  • Share this:
    ಸೌತಾಂಪ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಐರ್ಲೆಂಡ್ 7 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಇಂಗ್ಲೆಂಡ್ ನೀಡಿದ 328 ರನ್​ಗಳ ಕಠಿಣ ಗುರಿಯನ್ನು 49.5 ಓವರ್‌ಗಳಲ್ಲಿ ಬೆನ್ನತ್ತುವ ಮೂಲಕ ಐರ್ಲೆಂಡ್ ವಿಜಯ ಕೇಕೆ ಹಾಕಿತು. ಈ ಮೂಲಕ ಮತ್ತೊಮ್ಮೆ 2011ರ ವಿಶ್ವಕಪ್​ನ 329 ರನ್‌ಗಳ ಗುರಿಯನ್ನು ಬೆನ್ನಟ್ಟಿದ ​ ನೆನಪನ್ನು ಐರ್ಲೆಂಡ್ ಕ್ರಿಕೆಟ್​ ಪ್ರಿಯರ ಮುಂದಿಟ್ಟರು.

    ಇದಕ್ಕೂ ಮೊದಲು ಟಾಸ್ ಗೆದ್ದ ಐರ್ಲೆಂಡ್ ಬೌಲಿಂಗ್ ಆರಿಸಿತು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಐರಿಷ್ ಬೌಲರ್​ಗಳು ಇಂಗ್ಲೆಂಡ್​ಗೆ ಆರಂಭಿಕ ಆಘಾತ ನೀಡಿದರು. ಓಪನರ್ ಜೇಸನ್ ರಾಯ್ ಕೇವಲ 1 ರನ್‌ಗೆ ಔಟಾದರೆ, ಜಾನಿ ಬೈರ್‌ಸ್ಟೋವ್ ಕೂಡ 4 ರನ್ ಗಳಿಸಲು ಮಾತ್ರ ಶಕ್ತರಾದರು. 44 ರನ್‌ಗಳಾಗುವಷ್ಟರಲ್ಲಿ ಆತಿಥೇಯರು 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದರು. ಆದರೆ ಯುವ ಆಟಗಾರ ಟಾಮ್ ಬ್ಯಾಂಟನ್ ಮತ್ತು ನಾಯಕ ಇಯಾನ್ ಮೊರ್ಗನ್ ಈ ಹಂತದಲ್ಲಿ ತಂಡಕ್ಕೆ ಆಸರೆಯಾದರು.

    ನಾಲ್ಕನೇ ವಿಕೆಟ್‌ಗೆ 146 ರನ್‌ಗಳ ಜೊತೆಯಾಟವಾಡಿದ ಈ ಜೋಡಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. ಇದರ ನಡುವೆ ಮೊರ್ಗನ್ 84 ಎಸೆತಗಳಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 106 ರನ್ ಗಳಿಸಿದರು. ಹಾಗೆಯೇ ಟಾಮ್ ಬ್ಯಾಂಟನ್ 58 ರನ್ ಗಳಿಸಿ ಮಿಂಚಿದರು. ಕೊನೆಯಲ್ಲಿ ಡೇವಿಡ್ ವಿಲೇ 42 ಎಸೆತಗಳಲ್ಲಿ 51 ಮತ್ತು ಟಾಮ್ ಕುರ್ರನ್ ಬಿರುಸಿನ 38 ರನ್ ಸಿಡಿಸುವ ಮೂಲಕ ಇಂಗ್ಲೆಂಡ್ ಮೊತ್ತವನ್ನು 328ಕ್ಕೆ ತಂದು ನಿಲ್ಲಿಸಿದರು.

    ಐರ್ಲೆಂಡ್‌ನ ಭರ್ಜರಿ ಬ್ಯಾಟಿಂಗ್:
    ಬೃಹತ್ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್, 50 ರನ್ ಗಳಿಸಿದಾಗ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಇದರ ನಂತರ ಬಂದ ಪಾಲ್ ಸ್ಟರ್ಲಿಂಗ್ ಮತ್ತು ನಾಯಕ ಆಂಡಿ ಬಾಲ್ಬರ್ನಿ ಎರಡನೇ ವಿಕೆಟ್‌ಗೆ 214 ರನ್‌ಗಳ ಅದ್ಭುತ ಜೊತೆಯಾಟ ಆಡಿದರು. ಪಾಲ್ ಸ್ಟರ್ಲಿಂಗ್ ಮತ್ತು ಬಾಲ್ಬರ್ನಿ ಶತಕಗಳನ್ನು ಸಿಡಿಸಿ ತಂಡವನ್ನು ಗುರಿಯತ್ತ ತಲುಪಿಸಿದರು. ಕೊನೆಯಲ್ಲಿ, ಹ್ಯಾರಿ ಟೆಕ್ಟರ್ ಅಜೇಯ 29 ಮತ್ತು ಕೆವಿನ್ ಒ’ಬ್ರೇನ್ ಅಜೇಯ 21 ರನ್ ಗಳಿಸಿ ತಂಡಕ್ಕೆ ಕೊನೆಯ ಓವರ್​ನಲ್ಲಿ ರೋಚಕ ಗೆಲುವು ತಂದುಕೊಟ್ಟರು.

    ಆದಾಗ್ಯೂ, ಈ ಗೆಲುವಿನ ಹೊರತಾಗಿಯೂ, ಐರ್ಲೆಂಡ್ ಸರಣಿಯಲ್ಲಿ 2–1ರಿಂದ ಸೋಲನುಭವಿಸಿತು. ಇಂಗ್ಲೆಂಡ್ ಮೊದಲ ಎರಡು ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ತನ್ನದಾಗಿಸಿಕೊಂಡಿತು. ಅದ್ಭುತ ಆಟ ಪ್ರದರ್ಶಿಸಿದ ಪಾಲ್ ಸ್ಟರ್ಲಿಂಗ್ ಮತ್ತು ಬಾಲ್ಬರ್ನಿ ಜಂಟಿಯಾಗಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.



    2011ರ ವಿಶ್ವಕಪ್​ನಲ್ಲೂ ಇಂಗ್ಲೆಂಡ್ ನೀಡಿದ 329 ರನ್​ಗಳ ಗುರಿಯನ್ನು ಐರ್ಲೆಂಡ್ ಬೆನ್ನಟ್ಟಿ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೊಮ್ಮೆ ಹಿಸ್ಟರಿ ರಿಪೀಟ್ ಎಂಬಂತೆ ಐರಿಷ್ ಆಟಗಾರರು ಆಂಗ್ಲರ ವಿರುದ್ಧ ಅಬ್ಬರಿಸಿದ್ದಾರೆ.
    Published by:zahir
    First published: