ವಿಶ್ವಕಪ್​ನಲ್ಲಿ ಭಾರತ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿರುವ ಪಾಕಿಸ್ತಾನ; ಕಾರಣವೇನು ಗೊತ್ತಾ?

ಬುಧವಾರ ನ್ಯೂಜಿಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್​ ಗೆದ್ದು ಬೀಗಿದೆ. ಈ ಮೂಲಕ ಸೆಮಿಫೈನಲ್​ ಕನಸನ್ನು ಉಳಿಸಿಕೊಂಡಿದೆ. ಒಂದೊಮ್ಮೆ ಮುಂದಿನ ಪಂದ್ಯಗಳಲ್ಲಿ ಇಂಗ್ಲೆಂಡ್​ ಸೋತರೆ ಸೆಮಿಫೈನಲ್​ಗೆ ಏರಲು ಪಾಕ್​ ಹಾದಿ ಸುಗಮವಾಗಲಿದೆ.

Rajesh Duggumane | news18
Updated:June 27, 2019, 1:12 PM IST
ವಿಶ್ವಕಪ್​ನಲ್ಲಿ ಭಾರತ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿರುವ ಪಾಕಿಸ್ತಾನ; ಕಾರಣವೇನು ಗೊತ್ತಾ?
ಸಾಂದರ್ಭಿಕ ಚಿತ್ತ
  • News18
  • Last Updated: June 27, 2019, 1:12 PM IST
  • Share this:
ವಿಶ್ವಕಪನ್​ಲ್ಲಿ ತೀವ್ರ ಕುತೂಹಲ ಮೂಡಿಸಿದ್ದು ಭಾರತ-ಪಾಕಿಸ್ತಾನ ಪಂದ್ಯ. ಇದರಲ್ಲಿ ಭಾರತ ಗೆದ್ದು ಬೀಗಿತ್ತು. ಇದು ಪಾಕಿಸ್ತಾನ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಈ ಮಧ್ಯೆ ಪಾಕ್​ ಬೌಲರ್​ ಹಸನ್​ ಅಲಿ ಭಾರತ ಕ್ರಿಕೆಟ್​ ತಂಡದ ಬೆಂಬಲಕ್ಕೆ ನಿಂತಿದ್ದು ಈ ಅಸಮಾಧಾನವನ್ನು ಹೆಚ್ಚಿಸಿತ್ತು. ಆದರೆ, ಈಗ ಸ್ವತಃ ಪಾಕಿಸ್ತಾನದವರು ವಿಶ್ವಕಪ್​ನಲ್ಲಿ ಭಾರತದ ಬೆಂಬಲಕ್ಕೆ ನಿಂತಿದ್ದಾರೆ!

ಇದು ಅಚ್ಚರಿ ಎನಿಸಿದರೂ ಸತ್ಯ. ಆದರೆ, ಪಾಕ್​ ಈ ರೀತಿ ಮಾಡಲು ಒಂದು ಕಾರಣವಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಭಾರತ ಹಾಗೂ ಇಂಗ್ಲೆಂಡ್ ತಂಡ ಮೊದಲ 4 ಸ್ಥಾನದಲ್ಲಿ ನಿಂತಿವೆ. ಮೊದಲ ಮೂರು ತಂಡಗಳು ಸೆಮಿಫೈನಲ್​ಗೆ ಏರುವುದು ಬಹುತೇಕ ಖಚಿತವಾಗಿದೆ. ಆದರೆ, ನಾಲ್ಕನೇ ಸ್ಥಾನಕ್ಕೆ ಇಂಗ್ಲೆಂಡ್​, ಬಾಂಗ್ಲಾ, ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

ಇಂಗ್ಲೆಂಡ್​ 7ರಲ್ಲಿ 4 ಪಂದ್ಯ ಗೆದ್ದಿದ್ದು, ಮೂರು ಪಂದ್ಯಗಳನ್ನು ಸೋತಿದೆ. ಉಳಿದ ಎರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್​ ಹಾಗೂ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಭಾರತ ತಂಡವನ್ನು ಎದುರಿಸಬೇಕಿದೆ. ಈ ವೇಳೆ ಒಂದು ಪಂದ್ಯ ಸೋತರೂ ಇಂಗ್ಲೆಂಡ್​ನ ಸೆಮಿಫೈನಲ್​ ಏರುವ ಕನಸು ನುಚ್ಚು ನೂರಾಗುವ ಸಾಧ್ಯತೆ ಇದೆ. ಹಾಗಾದಲ್ಲಿ ಬಾಂಗ್ಲಾ, ಪಾಕ್​ ಅಥವಾ ಶ್ರೀಲಂಕಾ ಸೆಮಿ ಫೈನಲ್​ಗೆ ಏರುವ ಸಾಧ್ಯತೆ ಇದೆ.

ಇದನ್ನೂ ಓದಿ: ಇಂಗ್ಲೆಂಡ್ ಸೋಲನ್ನು ಒಂದಾಗಿ ಸಂಭ್ರಮಿಸಿದ ಪಾಕ್, ಶ್ರೀಲಂಕಾ, ಬಾಂಗ್ಲಾ ಅಭಿಮಾನಿಗಳು; ಏಕೆ ಗೊತ್ತಾ?

ಬುಧವಾರ ನ್ಯೂಜಿಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್​ ಗೆದ್ದಿದೆ. ಈ ಮೂಲಕ ಸೆಮಿಫೈನಲ್​ ಕನಸನ್ನು ಉಳಿಸಿಕೊಂಡಿದೆ. ಒಂದೊಮ್ಮೆ ಮುಂದಿನ ಪಂದ್ಯಗಳಲ್ಲಿ ಇಂಗ್ಲೆಂಡ್​ ಸೋತರೆ ಸೆಮಿಫೈನಲ್​ಗೆ ಏರಲು ಪಾಕ್​ ಹಾದಿ ಸುಗಮವಾಗಲಿದೆ. ಹಾಗಾಗಿ ಭಾರತ-ಇಂಗ್ಲೆಂಡ್​ ಪಂದ್ಯದಲ್ಲಿ ಕೊಹ್ಲಿ ಪಡೆಯ ಪರವಾಗಿ ಪಾಕಿಸ್ತಾನದವರು ಇರಲಿದ್ದಾರೆ.

First published:June 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ