ಭಾರತದ ಸೋಲನ್ನು ಸಂಭ್ರಮಿಸುತ್ತಿದ್ದಾರೆ ಈ ಮಂದಿ; ವಿರಾಟ್​ ಕೊಹ್ಲಿ ಬೆಂಬಲಿಗರಿಂದ ಕ್ಲಾಸ್

ಭಾರತ ಸೋತಿರುವುದಕ್ಕೆ ಪಾಕಿಸ್ತಾನದವರು ತುಂಬಾನೇ ಸಂತಸ ವ್ಯಕ್ತಪಡಿಸುತ್ತಿದ್ದಾರೆ! ಈ ಬಗ್ಗೆ ಟ್ವಿಟ್ಟರ್​ನಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇದಕ್ಕೆ ಭಾರತೀಯರು ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ವಿಶ್ವಕಪ್​ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧದ ಸೋಲಿನಿಂದಾಗಿ ಭಾರತಕ್ಕೆ ಫೈನಲ್​ಗೆ ಪ್ರವೇಶಿಸುವ ಅವಕಾಶ ತಪ್ಪಿದೆ. ಇದಕ್ಕೆ ಇಡೀ ದೇಶವೇ ಮರುಕ ವ್ಯಕ್ತಪಡಿಸುತ್ತಿದೆ. ಆದರೆ ಒಂದು ದೇಶ ಮಾತ್ರ ಭಾರತದ ಸೋಲನ್ನು ಸಂಭ್ರಮಿಸುತ್ತಿದೆ! ಅದುವೇ, ಪಾಕಿಸ್ತಾನ.

ಹೌದು, ಭಾರತ ಸೋತಿರುವುದಕ್ಕೆ ಪಾಕಿಸ್ತಾನದವರು ತುಂಬಾನೇ ಸಂತಸ ವ್ಯಕ್ತಪಡಿಸುತ್ತಿದ್ದಾರೆ! ಈ ಬಗ್ಗೆ ಟ್ವಿಟ್ಟರ್​ನಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. “ನಾವು ವಿಶ್ವಕಪ್​ನಿಂದ ಹೊರ ಹೋದೆವು ಎಂದು ಬೇಸರಗಿತ್ತು. ಆದರೆ, ಈಗ ಭಾರತ ವಿಶ್ವಕಪ್​ನಿಂದ ಹೊರ ಬಿದ್ದಿದೆ. ಇದಕ್ಕಿಂತ ಸಂತಸದ ವಿಚಾರ ಮತ್ತೊಂದು ಇದೆಯೇ?,” ಎಂದು ಪಾಕಿಸ್ತಾನದ ಕೆಲವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಭಾರತೀಯರು ಕೆಂಡಾಮಂಡಲವಾಗಿದ್ದಾರೆ. ಈ ರೀತಿ ಟ್ವೀಟ್​ ಮಾಡಿದವರಿಗೆ ಸರಿಯಾಗಿಯೇ ಕ್ಲಾಸ್​ ತೆಗೆದುಕೊಂಡಿದ್ದಾರೆ. “ನಿಮ್ಮ ತಂಡ ಅನ್​ ಫಿಟ್​ ಎಂಬುದು ಜಗತ್ತಿಗೇ ಗೊತ್ತು. ಪಾಕ್​ನ ಆಟಗಾರರಂತೆ ನಮ್ಮ ಆಟಗಾರರು ಬೊಜ್ಜು ತುಂಬಿದ ದೇಹ ಹೊತ್ತು ಓಡಾಡುತ್ತಿಲ್ಲ,” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಏಕದಿನ ಪಂದ್ಯಕ್ಕೆ ಧೋನಿ ಇಂದೇ ಘೋಷಿಸಲಿದ್ದಾರೆ ನಿವೃತ್ತಿ?; ಹೌದೆನ್ನುತ್ತಿವೆ ಮೂಲಗಳುಪಾಕ್​ ಭಾರತದ ಸೋಲನ್ನು ಸಂಭ್ರಮಿಸಲು ಪ್ರಮುಖ ಕಾರಣವೊಂದಿದೆ. ಇಂಗ್ಲೆಂಡ್​ ವಿರುದ್ಧ ಭಾರತ ಸೋತಿತ್ತು. ಈ ಮೂಲಕ ಪಾಕ್​ ಸೆಮಿ ಫೈನಲ್​ಗೆ ಏರುವ ಕನಸಿಗೆ ನೀರೆರಚಿತ್ತು. ಪಾಕಿಸ್ತಾನ ಸೆಮಿ ಫೈನಲ್​ಗೆ ಏರದಂತೆ ಮಾಡಲು ಭಾರತ ಉದ್ದೇಶ ಪೂರ್ವಕವಾಗಿ ಸೋತಿದೆ ಎಂಬುದು ಪಾಕ್​ ಮಂದಿಯ ವಾದ. ಹೀಗಾಗಿ ಭಾರತವೂ ವಿಶ್ವಕಪ್​ನಿಂದ ಹೊರ ಬಿದ್ದಿದ್ದಕ್ಕೆ ಪಾಕ್​ ಸಂಭ್ರಮಿಸುತ್ತಿದೆ.

First published: