HOME » NEWS » Sports » CRICKET PAKISTANI FAN PUTS MS DHONIS NAME ON WORLD CUP 2019 JERSEY SENDS TWITTERATI INTO FRENZY

ICC World Cup 2019: ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿ ಮೇಲೆ ಧೋನಿ ಹೆಸರು!

MS Dhoni: ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬ ಪಾಕ್ ಜೆರ್ಸಿ ಮೇಲೆ ಎಂ ಎಸ್ ಧೋನಿಯ ಹೆಸರು ಮತ್ತು ನಂಬರ್ ಬರೆಸಿ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಯ ಈ ಟ್ವೀಟ್ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Vinay Bhat | news18
Updated:May 25, 2019, 3:50 PM IST
ICC World Cup 2019: ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿ ಮೇಲೆ ಧೋನಿ ಹೆಸರು!
ಪಾಕಿಸ್ತಾನ ಜೆರ್ಸಿ ಮೇಲೆ ಎಂಎಸ್ ಧೋನಿ ಹೆಸರು
  • News18
  • Last Updated: May 25, 2019, 3:50 PM IST
  • Share this:
ಬೆಂಗಳೂರು (ಮೇ. 25): ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​​ಗೆ ಎಲ್ಲ ತಂಡಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಈಗಾಗಲೇ ಅಭ್ಯಾಸ ಪಂದ್ಯಗಳು ಆರಂಭವಾಗಿದೆ. ಮೇ 30 ರಂದು ಈ ಕ್ರಿಕೆಟ್ ಹಬ್ಬಕ್ಕೆ ವಿದ್ಯುಕ್ತ ಚಾಲನೆ ಸಿಗಲಿದ್ದು, ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಇಂದು ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಆಡುತ್ತಿದೆ.

ಕ್ರೀಡಾಭಿಮಾನಿಗಳು ಈಗಾಗಲೇ ಈ ಕ್ರೀಡಾ ಹಬ್ಬಕ್ಕೆ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದು, ತಮ್ಮ ನೆಚ್ಚಿನ ಆಟಗಾರನ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಕಿಚ್ಚು ಹಚ್ಚಿಸುತ್ತಿದ್ದಾರೆ. ಈ ಮಧ್ಯೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬ ಪಾಕ್ ಜೆರ್ಸಿ ಮೇಲೆ ಎಂ ಎಸ್ ಧೋನಿಯ ಹೆಸರು ಮತ್ತು ನಂಬರ್ ಬರೆಸಿ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಯ ಈ ಟ್ವೀಟ್ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಧೋನಿಯ ಕಟ್ಟಾ ಅಭಿಮಾನಿಯಾಗಿರುವ ಪಾಕಿಸ್ತಾನ ಮೂಲದ ಶೆಹಜಾದ್ಉಲ್ ಹಸನ್ ಅವರು ಧೋನಿಯ ಹೆಸರು ಹಾಗೂ ಲಕ್ಕಿ ನಂಬರ್ 7 ಅನ್ನು ಪಾಕ್ ಜೆರ್ಸಿ ಮೇಲೆ ಬರೆದು ಧೋನಿಗೂ ಟ್ಯಾಗ್​ ಮಾಡಿದ್ದಾರೆ. ಆಂಗ್ಲರ ನಾಡಲ್ಲಿ ಮೇ 30 ರಿಂದ ವಿಶ್ವಕಪ್ ಮಹಾ ಸಮರ ಆರಂಭವಾಗುತ್ತಿದ್ದು, ಭಾರತ ತಂಡ ಜೂನ್ 5 ರಂದು ದ. ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಜೂನ್ 16 ರಂದು ಭಾರತ ತಂಡ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮುಖಾಮುಖಿ ಆಗಲಿದ್ದು, ಈಗಾಗಲೇ ಈ ಪಂದ್ಯಕ್ಕಾಗಿ ವಿಶ್ವ ಕ್ರಿಕೆಟ್​ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: 2011ರಲ್ಲಿ ವಿಶ್ವಕಪ್​ ಗೆದ್ದಾಗ ಅಭಿಮಾನಿಯಾಗಿ ಮೈದಾನದಲ್ಲಿ ಸಂಭ್ರಮಿಸಿದ್ದ ಈ ವ್ಯಕ್ತಿ ಇಂದು ಭಾರತ ತಂಡದ ಪ್ರಮುಖ ಆಟಗಾರ!

 ಭಾರತ-ಪಾಕ್ ಪಂದ್ಯದ ಬಗ್ಗೆ ಮಾತನಾಡಿರುವ ವಿರಾಟ್​ ಕೊಹ್ಲಿ, 2019ರ ವಿಶ್ವಕಪ್ ಅತ್ಯಂತ ಸವಾಲಿನಿಂದ ಕೂಡಿರಲಿದೆ. ಇನ್ನು ಪಾಕ್ ವಿರುದ್ಧದ ಪಂದ್ಯವನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ ಕೊಹ್ಲಿ, ಈ ವಿಶ್ವಕಪ್​ನಲ್ಲಿ ಭಾರತ ತಂಡವು ಎಲ್ಲಾ ತಂಡವನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರತಿ ತಂಡಗಳ ವಿರುದ್ಧದ ತಂತ್ರಗಾರಿಕೆ ವಿಭಿನ್ನವಾಗಿರುವುದಿಲ್ಲ. ಪ್ರತಿಯೊಂದು ಪಂದ್ಯವನ್ನು ಸಮಾನ ಬಲದೊಂದಿಗೆ ಎದುರಿಸಲು ನಾವು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಹೀಗಾಗಿ ಪಾಕ್ ವಿರುದ್ಧ ವಿಶೇಷ ಯೋಜನೆಗಳೊಂದಿಗೆ ಕಣಕ್ಕಿಳಿಯುತ್ತೇವೆ ಎನ್ನಲಾಗುವುದಿಲ್ಲ ಎಂದು ಕೊಹ್ಲಿ ತಿಳಿಸಿದ್ದಾರೆ.

First published: May 25, 2019, 3:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories