ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದಿಂದ ‘ಡೋಂಟ್​ ರಶ್​​ ಚಾಲೆಂಜ್‘​; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

DontRushChallenge: ಪಾಕಿಸ್ತಾನಿ ಮಹಿಳಾ ಕ್ರಿಕೆಟರ್​ ಕೈನಾಥ್​​ ಇಮ್ತಿಯಾಜ್​​ ಡೋಂಟ್​ ರಶ್​ ಚಾಲೆಂಜ್​ ವಿಡಿಯೋವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹರಿ ಬಿಟ್ಟಿದ್ದಾರೆ. ಜೊತೆಗೆ ಒಮೈಮಾ ಸೊಹೈಲ್, ಮಹಮ್ ತಾರಿಕ್, ಸೈಯದಾ ನೈನ್ ಅಬಿದಿ ಅವರಿಗೆ ಟ್ಯಾಗ್​ ಮಾಡಿದ್ದಾರೆ. ಮಾತ್ರವಲ್ಲದೆ, ವಿಕೆಟ್​ ಕೀಪರ್​ ಸಿದ್ರಾ ನವಾಜ್, ಆಯೆಷಾ ಜಾಫರ್, ಮುನೀಬಾ ಅಲಿ, ಐಮನ್ ಸೇರಿದಂತೆ ಆಲ್​ರೌಂಡರ್​ ಇರಾಮ್ ಜಾವೇದ್ ಮತ್ತು ಆರಂಭಿಕ ಆಟಗಾರ್ತಿ ಸಿದ್ರಾ ಅಮೀನ್ ಟ್ಯಾಗ್​ ಮಾಡಿದ್ದಾರೆ.

news18-kannada
Updated:April 29, 2020, 1:16 AM IST
ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದಿಂದ ‘ಡೋಂಟ್​ ರಶ್​​ ಚಾಲೆಂಜ್‘​; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಪಾಕಿಸ್ತಾನಿ ಮಹಿಳಾ ಕ್ರಿಕೆಟರ್ಸ್​​​​
  • Share this:
ಕೊರೋನಾ ಲಾಕ್​ಡೌನ್​ ಅವಧಿಯಲ್ಲಿ ಹೊಸ ಹೊಸ ಚಾಲೆಂಜ್​ಗಳು ಹುಟ್ಟುಕೊಂಡಿವೆ. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗುತ್ತಿವೆ. ಇತ್ತೀಚೆಗೆ ಕ್ವಾರಂಟೈನ್​ ಪಿಲ್ಲೋ ಚಾಲೆಂಜ್​, ಟೀ ಶರ್ಟ್​ ಚಾಲೆಂಜ್​, ಕುಕ್ಕಿಂಗ್​ ಚಾಲೆಂಜ್​ಗಳು ಹುಟ್ಟಿಕೊಂಡಿವೆ. ಅನೇಕ ಸ್ಟಾರ್​ ನಟ-ನಟಿಯರು ಈ ಚಾಲೆಂಜ್​ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಹರಿ ಬಿಡುತ್ತಿದ್ದಾರೆ. ಅದರಂತೆ ಇದೀಗ ಪಾಕಿಸ್ತಾನಿ ಮಹಿಳಾ ಕ್ರಿಕೆಟರ್ಸ್​ ‘ಡೋಂಟ್​ ರಶ್​​ ಚಾಲೆಂಜ್‘​ ಮಾಡುವ ಮೂಲಕ ಸುದ್ದಿ ಯಾಗಿದೆ. 

ಪಾಕಿಸ್ತಾನಿ ಮಹಿಳಾ ಕ್ರಿಕೆಟರ್​ ಕೈನಾಥ್​​ ಇಮ್ತಿಯಾಜ್​​ ಡೋಂಟ್​ ರಶ್​ ಚಾಲೆಂಜ್​ ವಿಡಿಯೋವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹರಿ ಬಿಟ್ಟಿದ್ದಾರೆ. ಜೊತೆಗೆ ಒಮೈಮಾ ಸೊಹೈಲ್, ಮಹಮ್ ತಾರಿಕ್, ಸೈಯದಾ ನೈನ್ ಅಬಿದಿ ಅವರಿಗೆ ಟ್ಯಾಗ್​ ಮಾಡಿದ್ದಾರೆ. ಮಾತ್ರವಲ್ಲದೆ, ವಿಕೆಟ್​ ಕೀಪರ್​ ಸಿದ್ರಾ ನವಾಜ್, ಆಯೆಷಾ ಜಾಫರ್, ಮುನೀಬಾ ಅಲಿ, ಐಮನ್ ಸೇರಿದಂತೆ ಆಲ್​ರೌಂಡರ್​ ಇರಾಮ್ ಜಾವೇದ್ ಮತ್ತು ಆರಂಭಿಕ ಆಟಗಾರ್ತಿ ಸಿದ್ರಾ ಅಮೀನ್ ಟ್ಯಾಗ್​ ಮಾಡಿದ್ದಾರೆ.

 ವಿಡಿಯೋದಲ್ಲಿ ಪಾಕಿಸ್ತಾನಿ ಮಹಿಳಾ ಕ್ರಿಕೆಟರ್​ಗಳ ಕ್ರಿಕೆಟ್​ ಪ್ರೇಮವನ್ನು ತೋರಿಸಲಾಗಿದೆ. ಪ್ರತಿಯೊಬ್ಬರು ಕ್ರಿಕೆಟ್​ ಜೆರ್ಸಿ ಧರಿಸುವುದರ ಜೊತೆಗೆ ತಮ್ಮ ತಂಡದ ಸದ್ಯರಿಗೆ ಜೆರ್ಸಿ ನೀಡುವ ದೃಶ್ಯ ವಿಡಿಯೋದಲ್ಲಿದೆ.

 

Irrfan Khan: ತಾಯಿಯನ್ನು ಕಳೆದುಕೊಂಡ ಬೆನ್ನಲ್ಲೇ ಆಸ್ಪತ್ರೆ ಸೇರಿದ ನಟ ಇರ್ಫಾನ್ ಖಾನ್​!

 
First published: April 28, 2020, 5:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading