PAK vs SL: ದಶಕಗಳ ಬಳಿಕ ತನ್ನ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದ ಪಾಕಿಸ್ತಾನ!

ಲಂಕಾನ್ನರನ್ನು 212 ರನ್​ಗೆ ಆಲೌಟ್ ಮಾಡುವ ಮೂಲಕ ಪಾಕಿಸ್ತಾನ 263 ರನ್​ಗಳ ಭರ್ಜರಿ ಜಯ ಸಾಧಿಸಿತು. ಟೂರ್ನಿಯಿದ್ದಕ್ಕೂ ಮಿಂಚಿದ ಅಬಿದ್ ಅಲಿ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಬಾಜಿಕೊಂಡರು.

Vinay Bhat | news18-kannada
Updated:December 23, 2019, 3:38 PM IST
PAK vs SL: ದಶಕಗಳ ಬಳಿಕ ತನ್ನ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದ ಪಾಕಿಸ್ತಾನ!
ಪಾಕಿಸ್ತಾನ ಕ್ರಿಕೆಟ್ ತಂಡ
  • Share this:
ಪಾಕಿಸ್ತಾನ ತಂಡ ದಶಕಗಳ ಬಳಿಕ ತವರಿನಲ್ಲಿ ನಡೆದ ಟೆಸ್ಟ್​ ಸರಣಿಯನ್ನು 1-0 ಅಂತರದಿಂದ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.

ಹತ್ತು ವರ್ಷಗಳ ಬಳಿಕ ಸ್ವದೇಶದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಟೆಸ್ಟ್​ ಪಂದ್ಯವನ್ನಾಡಿತ್ತು. 2009ರಲ್ಲಿ ಶ್ರೀಲಂಕಾ ವಿರುದ್ಧವೇ ಕೊನೆಯ ಬಾರಿ ತನ್ನ ನೆಲದಲ್ಲಿ ಪಾಕ್ ಟೆಸ್ಟ್ ಪಂದ್ಯವಾಡಿತ್ತು. ಲಾಹೋರ್‌ನಲ್ಲಿ 2009ರಲ್ಲಿ ಲಂಕಾ ಆಟಗಾರರ ಮೇಲೆ ಉಗ್ರರ ದಾಳಿ ನಡೆದ ಬಳಿಕ ಪಾಕ್ ತನ್ನ ನೆಲದಲ್ಲಿ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಲ್ಲ.

ಹೀಗೆ ದಶಕಗಳ ಬಳಿಕ ನಡೆದ ಮೊದಲ ಟೆಸ್ಟ್​ ಡ್ರಾ ಆಗಿತ್ತು. ಇಂದಿಗೆ ಅಂತ್ಯಕಂಡ ಎರಡನೇ ಟೆಸ್ಟ್​ನಲ್ಲಿ 263 ರನ್​ಗಳ ಬೃಹತ್ ಅಂತರದ ಜಯ ಸಾಧಿಸಿ 1-0 ಅಂತರದ ಪಾಕಿಸ್ತಾನ ಸರಣಿ ವಶಪಡಿಸಿಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ 80 ಅಂಕದೊಂದಿಗೆ ಮೂರನೇ ಸ್ಥಾನಕ್ಕೇರಿದೆ.

 


ಇಂದು ಭಾರತ ತಂಡ ಪ್ರಕಟ: ವಿಂಡೀಸ್ ವಿರುದ್ಧ ಅಬ್ಬರಿಸಿದ ಆಟಗಾರ ಲಂಕಾ ಸರಣಿಯಿಂದ ಹೊರಕ್ಕೆ?

ಪಾಕಿಸ್ತಾನ ನೀಡಿದ್ದ 476 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ 4ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 212 ರನ್ ಕಲೆಹಾಕಿತ್ತು. ಲಂಕಾ ಗೆಲುವಿಗೆ ಒಂದು ದಿನದಲ್ಲಿ 264 ರನ್​ಗಳ ಅವಶ್ಯತೆಯಿತ್ತು. ಇತ್ತ ಪಾಕ್ ಗೆಲುವಿಗೆ ಲಂಕಾದ 3 ವಿಕೆಟ್​ಗಳು ಬೇಕಾಗಿತ್ತು.

ಶತಕ ಬಾರಿಸಿ ಕ್ರೀಸ್​ನಲ್ಲಿದ್ದ ಓಶಾಡ ಫೆರ್ನಾಂಡೊ ಇಂದು ಅಂತಿಮ ದಿನದ ಆರಂಭದಲ್ಲೆ 102 ರನ್​ಗೆ ಔಟ್ ಆದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳೆಲ್ಲ ಸೊನ್ನೆ ಸುತ್ತಿದರು. ಅಂತಿಮವಾಗಿ ಶ್ರೀಲಂಕಾ 62.5 ಓವರ್​ನಲ್ಲಿ 212 ರನ್​ಗೆ ಆಲೌಟ್ ಆಗಿ ಸೋಲುಂಡಿತು.

ಕರಾಚಿಯಲ್ಲಿ ನಡೆದ ಈ ಎರಡನೇ ಟೆಸ್ಟ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಕೇವಲ 191 ರನ್​ಗೆ ಆಲೌಟ್ ಆಯಿತು. ಅಸದ್ ಶಫೀಕ್ 63 ಹಾಗೂ ಬಾಬರ್ ಅಜಮ್ 60 ರನ್ ಗಳಿಸಿದರಷ್ಟೆ. ಬಳಿಕ ಲಂಕಾ ತನ್ನ ಮೊದಲ ಇನ್ನಿಂಗ್ಸ್​​ನಲ್ಲಿ ದಿನೇಶ್ ಚಂಡಿಮಾಲ್ ಅವರ 74 ರನ್​ಗಳ ನೆರವಿನಿಂದ 271 ರನ್​ಗೆ ಆಲೌಟ್ ಆಯಿತು.

 



ಆಸೀಸ್- ಲಂಕಾ ಸರಣಿಗೆ ಇಂದು ಭಾರತ ತಂಡ ಪ್ರಕಟ; ಈ ಒಬ್ಬ ಆಟಗಾರನ ಮೇಲೆ ಎಲ್ಲರ ಕಣ್ಣು!

80 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಪಾಕ್ ಭರ್ಜರಿ ಆಟ ಪ್ರದರ್ಶಿಸಿತು. 4 ಬ್ಯಾಟ್ಸ್​ಮನ್​ಗಳ ಶತಕ ಸಿಡಿಸಿ ಮಿಂಚಿದರು. ಮೊದಲ ವಿಕೆಟ್​ಗೆನೇ ಶಾನ್ ಮಸೂದ್ ಹಾಗೂ ಅಬಿದ್ ಅಲಿ 278 ರನ್​ಗಳ ಜೊತೆಯಾಟ ಆಡಿದರು. ಮಸೂದ್ 135 ರನ್ ಗಳಿಸಿದರೆ, ಅಲಿ 174 ರನ್ ಬಾರಿಸಿದರು.

ನಂತರ ಬಂದ ನಾಯಕ ಅಜರ್ ಅಲಿ 118 ರನ್ ಗಳಿಸಿದರೆ, ಬಾಬರ್ ಅಜಮ್ ಅಜೇಯ 100 ರನ್ ಸಿಡಿಸಿದರು. ಪಾಕಿಸ್ತಾನ 131 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 555 ರನ್​ ಕಲೆಹಾಕಿ ಡಿಕ್ಲೇರ್ ಘೋಷಿಸಿತು.

476 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ತಂಡ ಪಾಕ್ ಬೌಲರ್​ಗಳ ಸಂಘಟಿತ ದಾಳಿಗೆ ನಲುಗಿ ಹೋಯಿತು. ಓಶಾಡ ಫೆರ್ನಾಂಡೊ ಹಾಗೂ ನಿರೋಶನ್ ಡಿಕ್​ವೆಲ್ ಶತಕದ ಜೊತೆಯಾಟ ಆಡಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು.

 



Virat Kohli: ಈ ವರ್ಷದ ಆ 30 ನಿಮಿಷ ಬಿಟ್ಟು ಉಳಿದ ಘಳಿಗೆ ಅದ್ಭುತವಾಗಿತ್ತು; ವಿರಾಟ್ ಕೊಹ್ಲಿ

ಅಂತಿಮವಾಗಿ ಲಂಕಾನ್ನರನ್ನು 212 ರನ್​ಗೆ ಆಲೌಟ್ ಮಾಡುವ ಮೂಲಕ ಪಾಕಿಸ್ತಾನ 263 ರನ್​ಗಳ ಭರ್ಜರಿ ಜಯ ಸಾಧಿಸಿತು. ಟೂರ್ನಿಯಿದ್ದಕ್ಕೂ ಮಿಂಚಿದ ಅಬಿದ್ ಅಲಿ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಬಾಜಿಕೊಂಡರು.

ನಸೀಮ್​ ಶಾ ವಿಶ್ವದಾಖಲೆ:

 



ಇನ್ನು ಪಾಕ್ ಯುವ ಬೌಲರ್​ ನಸೀಮ್​ ಶಾ ಕೇವಲ 16 ವರ್ಷಕ್ಕೆ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಪಾಕಿಸ್ತಾನದ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಇದೀಗ 5 ವಿಕೆಟ್​ ಪಡೆದ ವಿಶ್ವದ ಅತ್ಯಂತ ಕಿರಿಯ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ನಸೀಮ್ ಅವರು 31 ರನ್​ ನೀಡಿ 5 ವಿಕೆಟ್​ ಪಡೆದು ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಐದು ವಿಕೆಟ್​ ಗೊಂಚಲು ಪಡೆದ ಅತ್ಯಂತ ಕಿರಿಯ ವೇಗದ ಬೌಲರ್​ ಎನಿಸಿಕೊಂಡರು.

First published:December 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ