PAK vs SL: ನಂಬರ್ 1 ಟಿ-20 ತಂಡ ಪಾಕ್​ಗೆ ಮಣ್ಣು ಮುಕ್ಕಿಸಿದ ಸಿಂಹಳೀಯರು; ಚುಟುಕ ಸಮರದಲ್ಲಿ ಭರ್ಜರಿ ಆರಂಭ

167 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಪಾಕ್ ನುವಾನ್ ಪ್ರದೀಪ್ ಹಾಗೂ ಇಸ್ರೂ ಉದನಾ ಬೌಲಿಂಗ್​ಗೆ ನಲುಗಿ ಹೋಯಿತು. 20 ರನ್ ಆಗುವ ಹೊತ್ತಿಗೆನೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.

Vinay Bhat | news18-kannada
Updated:October 6, 2019, 8:16 AM IST
PAK vs SL: ನಂಬರ್ 1 ಟಿ-20 ತಂಡ ಪಾಕ್​ಗೆ ಮಣ್ಣು ಮುಕ್ಕಿಸಿದ ಸಿಂಹಳೀಯರು; ಚುಟುಕ ಸಮರದಲ್ಲಿ ಭರ್ಜರಿ ಆರಂಭ
ಸಂಭ್ರಮಿಸುತ್ತಿರುವ ಶ್ರೀಲಂಕಾ ಆಟಗಾರರು
Vinay Bhat | news18-kannada
Updated: October 6, 2019, 8:16 AM IST
ಬೆಂಗಳೂರು (ಅ. 06): ಪಾಕಿಸ್ತಾನ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡ ಏಕದಿನ ಸರಣಿ ಕೈಚೆಲ್ಲಿತ್ತು. ಸದ್ಯ ಟಿ-20 ಸರಣಿಯನ್ನಾದರು ಬಾಜಿಕೊಳ್ಳುವ ಎಂಬ ತೀರ್ಮಾನಕ್ಕೆ ಬಂದಿದೆ. ಅದರಂತೆ ಲಾಹೋರ್​​ನಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಸಿಂಹಳೀಯರು ಭರ್ಜರಿ ಪ್ರದರ್ಶನ ತೋರಿದ್ದಾರೆ.

ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಲಂಕಾನ್ನರು ನಂಬರ್ ಓನ್ ಟಿ-20 ತಂಡಕ್ಕೆ ಸೋಲಿನ ರುಚಿ ತೋರಿಸಿದ್ದಾರೆ. 64 ರನ್​ಗಳ ಅಮೋಘ ಜಯ ಸಾಧಿಸಿ 3 ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಶ್ರೀಲಂಕಾ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ದನುಷ್ಕಾ ಗುಣತಿಲಕ ಹಾಗೂ ಆವಿಷ್ಕಾ ಫೆರ್ನಾಂಡೊ ಪವರ್ ಪ್ಲೇ ಓವರ್ ಅನ್ನು ಉತ್ತಮವಾಗಿ ಉಪಯೋಗಿಸಿಕೊಂಡರು. ಬೌಂಡರಿಗಳ ಮಳೆ ಸುರಿಸಿದ ದನುಷ್ಕಾ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.

ಮೊದಲ ವಿಕೆಟ್​ಗೆ ಈ ಜೋಡಿ 84 ರನ್​ಗಳ ಜೊತೆಯಾಟ ನೀಡಿತು. ದನುಷ್ಕಾ 38 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಬಾರಿಸಿ 57 ರನ್​ಗೆ ಔಟ್ ಆದರು. ಬಳಿಕ ಭನುಕಾ ರಾಜಪಕ್ಷ ಜೊತೆಯಾದ ಆವಿಷ್ಕಾ ತಂಡದ ರನ್ ಗತಿಯನ್ನು ಏರಿಸಿದರು. ಭನುಕಾ 22 ಎಸೆತಗಳಲ್ಲಿ 32 ರನ್ ಬಾರಿಸಿದರೆ, ಆವಿಷ್ಕಾ 34 ಎಸೆತಗಳಲ್ಲಿ 33 ರನ್ ಗಳಿಸಿದರು.

Rohit Sharma: ವೈಜಾಗ್​ನಲ್ಲಿ ಇತಿಹಾಸ ಸೃಷ್ಟಿಸಿದ ಹಿಟ್​ಮ್ಯಾನ್; 1994ರ ದಾಖಲೆ 2019ರಲ್ಲಿ ಉಡೀಸ್

 



ಅಂತಿಮವಾಗಿ ಶ್ರೀಲಂಕಾ 20 ಓವರ್​ನಲ್ಲಿ 5 ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿತು. ಪಾಕಿಸ್ತಾನ ಪರ ಮೊಹಮ್ಮದ್ ಹಸ್ನೈನ್ 3 ವಿಕೆಟ್ ಕಿತ್ತರೆ, ಶದಾಬ್ ಖಾನ್ 1 ವಿಕೆಟ್ ಪಡೆದರು.

167 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಪಾಕ್ ನುವಾನ್ ಪ್ರದೀಪ್ ಹಾಗೂ ಇಸ್ರೂ ಉದನಾ ಬೌಲಿಂಗ್​ಗೆ ನಲುಗಿ ಹೋಯಿತು. 20 ರನ್ ಆಗುವ ಹೊತ್ತಿಗೆನೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ನಾಯಕ ಸರ್ಫರಾಜ್ ಅಹ್ಮದ್ 30 ಎಸೆತಗಳಲ್ಲಿ 1 ಬೌಂಡರಿ ಬಾರಿಸಿ 24 ರನ್ ಕಲೆಹಾಕಿದರೆ, ಇಫ್ತಿಖರ್ ಅಹ್ಮದ್ 25 ರನ್ ಗಳಿಸಿದ್ದೇ ಹೆಚ್ಚು.

ಪಾಕಿಸ್ತಾನ 17.4 ಓವರ್​ನಲ್ಲೇ 101 ರನ್​ಗೆ ಸರ್ವಪತನ ಕಂಡಿತು. ಲಂಕಾ ಪರ ಪ್ರದೀಪ್ ಹಾಗೂ ಉದನಾ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ಹಸರಂಗ 2 ಹಾಗೂ ಕಸುನ ರಂಜಿತ್ 1 ವಿಕೆಟ್ ಪಡೆದರು.

64 ರನ್​ಗಳ ಭರ್ಜರಿ ಗೆಲುವಿನೊಂದಿಗೆ ಲಂಕಾ 1-0 ಮುನ್ನಡೆ ಸಾಧಿಸಿದೆ. ಅರ್ಧಶತಕ ಬಾರಿಸಿದ ಗುಣತಿಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಮೊಹಮ್ಮದ್​ ಹಸೈನ್‌​ ಹ್ಯಾಟ್ರಿಕ್ ವಿಕೆಟ್:

ಪಾಕಿಸ್ತಾನ ಪರ ತನ್ನ ಎರಡನೇ ಟಿ-20 ಪಂದ್ಯವನ್ನಾಡಿದ 19 ವರ್ಷ ಪ್ರಾಯದ ಮೊಹಮ್ಮದ್​ ಹಸೈನ್​ ಹ್ಯಾಟ್ರಿಕ್ ವಿಕೆಟ್​ ಪಡೆದುಕೊಂಡು ಮಿಂಚಿದರು. 32ರನ್​ಗಳಿಸಿದ್ದ ರಾಜಪಕ್ಷೆ, 17ರನ್​ಗಳಿಸಿದ್ದ ಶಂಕರ್​ ಹಾಗೂ 2ರನ್​ಗಳಿಸಿದ್ದ ಜಯಸೂರ್ಯ ವಿಕೆಟ್​ ಕಿತ್ತು ಸೂತನ ಸಾಧೆನೆ ಮಾಡಿದರು.

ಸಣ್ಣ ವಯಸ್ಸಿನಲ್ಲಿ ಈ ದಾಖಲೆ ನಿರ್ಮಾಣ ಮಾಡಿರುವ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಸಹ ಪಾತ್ರರಾಗಿದ್ದಾರೆ. 16ನೇ ಓವರ್​ನ ಕೊನೆ ಎಸೆತದಲ್ಲಿ ರಾಜಪಕ್ಷೆ ಹಾಗೂ 19ನೇ ಓವರ್​ನ ಮೊದಲೆರಡು ಎಸೆತಗಳಲ್ಲಿ ಉಳಿದ ವಿಕೆಟ್​ ಪಡೆದುಕೊಂಡು ದಾಖಲೆ ಬರೆದರು.

 

First published:October 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...