Cricket World Cup 2019: ಪಾಕ್-ಶ್ರೀಲಂಕಾ ಪಂದ್ಯ ಮಳೆಯಿಂದ ರದ್ದು; ಉಭಯ ತಂಡಗಳಿಗೆ ಒಂದು ಅಂಕ

ICC Cricket World Cup 2019: ಪಂದ್ಯ ಆರಂಭಕ್ಕೂ ಮುನ್ನವೇ ವರುಣನ ಆಟ ಪ್ರಾರಂಭವಾಗಿದ್ದು, ಟಾಸ್ ಪ್ರಕ್ರಿಯೆ ಕೂಡ ನಡೆದಿಲ್ಲ. 3 ಗಂಟೆಗೆ ವಾತಾವರಣದ ಬಗ್ಗೆ ಅಂಪೈರ್ ಮಾಹಿತಿ ನೀಡಲಿದ್ದಾರೆ.

Vinay Bhat | news18
Updated:June 7, 2019, 8:31 PM IST
Cricket World Cup 2019: ಪಾಕ್-ಶ್ರೀಲಂಕಾ ಪಂದ್ಯ ಮಳೆಯಿಂದ ರದ್ದು; ಉಭಯ ತಂಡಗಳಿಗೆ ಒಂದು ಅಂಕ
ಸಾಂದರ್ಭಿಕ ಚಿತ್ರ
  • News18
  • Last Updated: June 7, 2019, 8:31 PM IST
  • Share this:
ಬೆಂಗಳೂರು (ಜೂ. 07): ವಿಶ್ವಕಪ್​​ನಲ್ಲಿ ಇಂದು ನಡೆಯಬೇಕಿದ್ದ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವಣ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ಟಾಸ್ ಪ್ರಕ್ರಿಯೆಗೂ ಅವಕಾಶ ನೀಡದ ವರುಣ ಬೆಂಬಿಡದೆ ಕಾಡಿದ್ದರಿಂದ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಿ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಸತತವಾಗಿ ಮಳೆ ಸುರಿದ ಪರಿಣಾಮ ಬ್ರಿಸ್ಟಾಲ್​ನಲ್ಲಿ ಮಳೆಯದ್ದೇ ಆಟ ನಡೆಯಿತು. ಒಂದು ಹಂತದಲ್ಲಿ ಮಳೆ ನಿಂತು 20 ಓವರ್​​ಗಳ ಪಂದ್ಯ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಮತ್ತೆ ವರುಣನ ಕಾಟ ಆರಂಭವಾಗಿದ್ದರಿಂದ ಸಂಪೂರ್ಣವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ಮೂಲಕ ಇತ್ತಂಡಗಳು ಮೂರು ಪಂದ್ಯಗಳಲ್ಲಿ ತಲಾ ಮೂರು ಅಂಕಗಳನ್ನು ಸಂಪಾದಿಸಿದೆ.

 


ಸೇನೆಯ ಬಲಿದಾನ ನೆನೆದ ಧೋನಿಗೆ ಗ್ಲೌಸ್​ ಬದಲಿಸುವಂತೆ ಐಸಿಸಿ ತಾಕೀತು; ವಿಶ್ವಕಪ್​ನಿಂದ ಹಿಂದೆ ಸರಿಯಲಿದೆಯಾ ಭಾರತ?

ಮೊದಲ ಪಂದ್ಯದಲ್ಲಿ ಕೆರಿಬಿಯನ್ನರ ವಿರುದ್ಧ ಹೀನಾಯ ಸೋಲು ಕಂಡು ಭರ್ಜರಿ ಕಮ್​ಬ್ಯಾಕ್ ಮಾಡಿರುವ ಸರ್ಫರಾಜ್ ಪಡೆ ಆತಿಥೇಯ ಇಂಗ್ಲೆಂಡ್ ವಿರುದ್ಧ 21 ರನ್​ಗಳ ಗೆಲುವು ಸಾಧಿಸಿತ್ತು.

ಇತ್ತ ಡಕ್ವರ್ತ್​​ ನಿಯಮದ ಅನ್ವಯ ಅಫ್ಘಾನಿಸ್ತಾನ ವಿರುದ್ಧ ಗೆದ್ದ ಲಂಕ ತಂಡ ಕೊನೆಗೂ ಗೆಲುವಿನ ಲಯಕ್ಕೆ ಮರಳಿತ್ತು.
First published:June 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ