PAK vs SL: ದಶಕಗಳ ಬಳಿಕ ಟೆಸ್ಟ್​​ ಗೆಲುವಿನತ್ತ ಪಾಕಿಸ್ತಾನ; ಅಂತಿಮ ದಿನದತ್ತ ಎಲ್ಲರ ಚಿತ್ತ

4ನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 7 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿ ಸೋಲಿನ ಸುಳಿಗೆ ಸಿಲುಕಿದೆ. ಫೆರ್ನಾಂಡೊ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದು ನಾಳೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Vinay Bhat | news18-kannada
Updated:December 22, 2019, 7:48 PM IST
PAK vs SL: ದಶಕಗಳ ಬಳಿಕ ಟೆಸ್ಟ್​​ ಗೆಲುವಿನತ್ತ ಪಾಕಿಸ್ತಾನ; ಅಂತಿಮ ದಿನದತ್ತ ಎಲ್ಲರ ಚಿತ್ತ
ಪಾಕಿಸ್ತಾನ ಕ್ರಿಕೆಟ್ ತಂಡ
  • Share this:
ಹತ್ತು ವರ್ಷಗಳ ಬಳಿಕ ಸ್ವದೇಶದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಟೆಸ್ಟ್​ ಪಂದ್ಯವನ್ನಾಡುತ್ತಿದೆ. 2009ರಲ್ಲಿ ಶ್ರೀಲಂಕಾ ವಿರುದ್ಧವೇ ಕೊನೆಯ ಬಾರಿ ತನ್ನ ನೆಲದಲ್ಲಿ ಪಾಕ್ ಟೆಸ್ಟ್ ಪಂದ್ಯವಾಡಿತ್ತು. ಲಾಹೋರ್‌ನಲ್ಲಿ 2009ರಲ್ಲಿ ಲಂಕಾ ಆಟಗಾರರ ಮೇಲೆ ಉಗ್ರರ ದಾಳಿ ನಡೆದ ಬಳಿಕ ಪಾಕ್ ತನ್ನ ನೆಲದಲ್ಲಿ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಲ್ಲ.

ಸದ್ಯ ದಶಕಗಳ ಬಳಿಕ ನಡೆಯುತ್ತಿರುವ ಟೆಸ್ಟ್​ನಲ್ಲಿ ಪಾಕಿಸ್ತಾನ ಮೊದಲ ಗೆಲುವನ್ನು ಎದುರು ನೋಡುತ್ತಿದೆ. ಮೊದಲ ಟೆಸ್ಟ್​ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿತ್ತು. ಸದ್ಯ ಕರಾಚಿಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​ನಲ್ಲಿ ಅಜರ್ ಅಲಿ ಪಡೆ ಗೆಲುವಿನತ್ತ ದಾಪುಗಾಲಿಡುತ್ತಿದೆ.

 



India vs West Indies Live: 316 ಟಾರ್ಗೆಟ್; ರೋಹಿತ್-ರಾಹುಲ್ ಶತಕದ ಜೊತೆಯಾಟ ಅಂತ್ಯ; ರೋಹಿತ್ ಔಟ್

ಪಾಕಿಸ್ತಾನ ನೀಡಿದ್ದ 476 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿರುವ ಶ್ರೀಲಂಕಾ 4ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 212 ರನ್ ಬಾರಿಸಿದೆ. ಲಂಕಾ ಗೆಲುವಿಗೆ ಒಂದು ದಿನದಲ್ಲಿ ಇನ್ನೂ 264 ರನ್​ಗಳ ಅವಶ್ಯತೆಯಿದ್ದರೆ, ಪಾಕ್ ಗೆಲುವಿಗೆ ಲಂಕಾದ 3 ವಿಕೆಟ್​ಗಳು ಬೇಕಾಗಿದೆ.

ಎರಡನೇ ಟೆಸ್ಟ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಕೇವಲ 191 ರನ್​ಗೆ ಆಲೌಟ್ ಆಯಿತು. ಅಸದ್ ಶಫೀಕ್ 63 ಹಾಗೂ ಬಾಬರ್ ಅಜಮ್ 60 ರನ್ ಗಳಿಸಿದರಷ್ಟೆ. ಬಳಿಕ ಲಂಕಾ ತನ್ನ ಮೊದಲ ಇನ್ನಿಂಗ್ಸ್​​ನಲ್ಲಿ ದಿನೇಶ್ ಚಂಡಿಮಾಲ್ ಅವರ 74 ರನ್​ಗಳ ನೆರವಿನಿಂದ 271 ರನ್​ಗೆ ಆಲೌಟ್ ಆಯಿತು.

80 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಪಾಕ್ ಭರ್ಜರಿ ಆಟ ಪ್ರದರ್ಶಿಸಿತು. 4 ಬ್ಯಾಟ್ಸ್​ಮನ್​ಗಳ ಶತಕ ಸಿಡಿಸಿ ಮಿಂಚಿದರು. ಮೊದಲ ವಿಕೆಟ್​ಗೆನೇ ಶಾನ್ ಮಸೂದ್ ಹಾಗೂ ಅಬಿದ್ ಅಲಿ 278 ರನ್​ಗಳ ಜೊತೆಯಾಟ ಆಡಿದರು. ಮಸೂದ್ 135 ರನ್ ಗಳಿಸಿದರೆ, ಅಲಿ 174 ರನ್ ಬಾರಿಸಿದರು. ನಂತರ ಬಂದ ನಾಯಕ ಅಜರ್ ಅಲಿ 118 ರನ್ ಗಳಿಸಿದರೆ, ಬಾಬರ್ ಅಜಮ್ ಅಜೇಯ 100 ರನ್ ಸಿಡಿಸಿದರು. ಪಾಕಿಸ್ತಾನ 131 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 555 ರನ್​ ಕಲೆಹಾಕಿ ಡಿಕ್ಲೇರ್ ಘೋಷಿಸಿತು.

ಮುಂಬೈ ಇಂಡಿಯನ್ಸ್​ ಬ್ಯಾಟ್ಸ್​ಮನ್​ನ ಸ್ಫೋಟಕ ಆಟ; 94 ರನ್​ಗಳಲ್ಲಿ 11 ಸಿಕ್ಸರ್; ತೆಗೆದುಕೊಂಡ ಬಾಲ್ ಎಷ್ಟು?

476 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ತಂಡ ಪಾಕ್ ಬೌಲರ್​ಗಳ ಸಂಘಟಿತ ದಾಳಿಗೆ ನಲುಗಿ ಹೋಯಿತು. ಓಶಾಡ ಫೆರ್ನಾಂಡೊ ಹಾಗೂ ನಿರೋಶನ್ ಡಿಕ್​ವೆಲ್ ಶತಕದ ಜೊತೆಯಾಟ ಆಡಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು.

ಪರಿಣಾಮ 4ನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 7 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿ ಸೋಲಿನ ಸುಳಿಗೆ ಸಿಲುಕಿದೆ. ಫೆರ್ನಾಂಡೊ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದು ನಾಳೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

First published:December 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ