PAK vs SL: ತವರಿನಲ್ಲಿ ಪಾಕ್​ಗೆ ಭಾರೀ ಮುಖಭಂಗ ; ಟಿ-20 ಸರಣಿ ವಶ ಪಡಿಸಿಕೊಂಡ ಸಿಂಹಳೀಯರು

35 ರನ್​ಗಳ ಭರ್ಜರಿ ಗೆಲುವುನೊಂದಿಗೆ ಶ್ರೀಲಂಕಾ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಮೂಲಕ ನಂಬರ್ ಓನ್ ಟಿ-20 ತಂಡಕ್ಕೆ ಸಿಂಹಳೀಯರು ಆಘಾತ ನೀಡಿದ್ದಾರೆ.

Vinay Bhat | news18-kannada
Updated:October 8, 2019, 8:48 AM IST
PAK vs SL: ತವರಿನಲ್ಲಿ ಪಾಕ್​ಗೆ ಭಾರೀ ಮುಖಭಂಗ ; ಟಿ-20 ಸರಣಿ ವಶ ಪಡಿಸಿಕೊಂಡ ಸಿಂಹಳೀಯರು
ಪಾಕಿಸ್ತಾನ ನಾಯಕ ಸರ್ಫರಾಜ್ ಅಹ್ಮದ್ ಬೌಲ್ಡ್ ಆದ ಕ್ಷಣ
  • Share this:
ಬೆಂಗಳೂರು (ಅ. 08): ಪಾಕಿಸ್ತಾನ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡ ಏಕದಿನ ಸರಣಿ ಸೋತ ಸೇಡನ್ನು ಟಿ-20 ಸರಣಿಯಲ್ಲಿ ತೀರಿಸಿಕೊಂಡಿದೆ. ನಿನ್ನೆ ಲಾಹೋರ್​ನಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಲಂಕಾನ್ನರು 35 ರನ್​ಗಳ ಭರ್ಜರಿ ಜಯ ಸಾಧಿಸಿ ಇನ್ನೊಂದು ಪಂದ್ಯ ಬಾಕಿಯಿರುವಂತೆ 2-0 ಯಿಂದ ಸರಣಿ ವಶ ಪಡಿಸಿಕೊಂಡಿದೆ.

ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿತು. ಉತ್ತಮ ಆರಂಭ ಪಡೆದುಕೊಂಡಿಲ್ಲವಾದರು 3ನೇ ವಿಕೆಟ್​ಗೆ ಭಾನುಕ ರಾಜಪಕ್ಷ ಹಾಗೂ ಶೇಶನ್ ಜಯಸೂರ್ಯ ಅಮೋಘ ಜೊತೆಯಾಟ ಪ್ರದರ್ಶಿಸಿದರು.

ರಾಜಪಕ್ಷ ಸ್ಫೋಟಕ ಆಟದ ಮೊರೆ ಹೋದರೆ, ಇವರಿಗೆ ಜಯಸೂರ್ಯ ಉತ್ತಮ ಸಾತ್ ನೀಡಿದರು. ತಂಡದ ರನ್ ಗತಿಯನ್ನು ಏರಿಸಿದ ಈ ಜೋಡಿ 94 ರನ್​ಗಳ ಜೊತೆಯಾಟ ಆಡಿತು. ರಾಜಪಕ್ಷ ಕೇವಲ 48 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ ಚಚ್ಚಿ 77 ರನ್ ಬಾರಿಸಿದರು.

IPL: ಐಪಿಎಲ್ ಹರಾಜಿನಲ್ಲಿ ನಡೆದಿತ್ತು ಊಹಿಸಲಾಗದ ಘಟನೆ; ಏನದು ಗೊತ್ತಾ..?

ಜಯಸೂರ್ಯ 34 ರನ್ ಗಳಿಸಿದರೆ, ಕೊನೆಯಲ್ಲಿ ನಾಯಕ ದಸನ್ ಭಾನುಕ ಅಜೇಯ 27 ರನ್ ಸಿಡಿಸಿದ ಪರಿಣಾಮ ಶ್ರೀಲಂಕಾ 20 ಓವರ್​​ಗೆ 6 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು. ಪಾಕ್ ಪರ ಇಮಾದ್ ವಾಸೀಮ್, ವಹಾಬ್ ಹಾಗೂ ಶಬಾದ್ ತಲಾ 1 ವಿಕೆಟ್ ಪಡೆದರು.

183 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಪಾಕ್ ಆರಂಭದಲ್ಲೇ ಬಾಬರ್ ಅಜಾಮ್(3) ಹಾಗೂ ಫಕರ್ ಜಮಾನ್(6) ವಿಕೆಟ್ ಕಳೆದುಕೊಂಡಿತು. ನಾಯಕ ಸರ್ಫರಾಜ್ ಅಹ್ಮದ್ ಆಟ 26 ರನ್​ಗೆ ಅಂತ್ಯವಾದರೆ, ಅನಿಫ್ ಅಲಿ 29 ಹಾಗೂ ಇಮಾದ್ ವಾಸಿಮ್ 47 ರನ್ ಬಾರಿಸಿದರಷ್ಟೆ. ಉಳಿದ ಬ್ಯಾಟ್ಸ್​ಮನ್​​ಗಳು ಸಂಪೂರ್ಣ ವಿಫಲರಾದರು.

ನುವಾನ್ ಪ್ರದೀಪ್ ದಾಳಿಗೆ ದಂಗಾದ ಪಾಕ್ ಪಡೆ 19 ಓವರ್​ನಲ್ಲೇ 147 ರನ್​ಗಳಿಗೆ ಆಲೌಟ್ ಆಯಿತು. ಶ್ರೀಲಂಕಾ ಪರ ಪ್ರದೀಪ್ 4 ವಿಕೆಟ್ ಕಿತ್ತರೆ, ವಾನಿನುದ್ ಹಸರಂಗ 3, ಇಸುರು ಉದಾನ 2 ಹಾಗೂ ಕಸನ್ ರಜಿತಾ 1 ವಿಕೆಟ್ ಪಡೆದರು.ಪಾಕಿಸ್ತಾನದಲ್ಲಿ ಕ್ರಿಕೆಟ್ ನಡೆಯುತ್ತಿರುವಾಗ ಮೈದಾನದಲ್ಲೇ ಅಂಪೈರ್ ಸಾವು!

35 ರನ್​ಗಳ ಭರ್ಜರಿ ಗೆಲುವುನೊಂದಿಗೆ ಶ್ರೀಲಂಕಾ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಮೂಲಕ ನಂಬರ್ ಓನ್ ಟಿ-20 ತಂಡಕ್ಕೆ ಸಿಂಹಳೀಯರು ಆಘಾತ ನೀಡಿದ್ದಾರೆ.

First published:October 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading