ಪಾಕಿಸ್ತಾನಕ್ಕೆ ದೊಡ್ಡ ಆಘಾತ; ದಶಕಗಳ ಬಳಿಕ ಆಯೋಜಿಸಿದ ಪಾಕ್-ಲಂಕಾ ಮೊದಲ ಏಕದಿನ ರದ್ದು!

10 ವರ್ಷಗಳ ನಂತರ ಪಾಕಿಸ್ತಾನ ಏಕದಿನ ಸರಣಿಗೆ ಸಜ್ಜಾಗಿತ್ತು. ಆದರೆ, ನಿನ್ನೆ (ಸೆ. 27) ಆಯೋಜಿಸಿದ್ದ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದಾಗಿದೆ.

ಪಾಕಿಸ್ತಾನ vs ಶ್ರೀಲಂಕಾ

ಪಾಕಿಸ್ತಾನ vs ಶ್ರೀಲಂಕಾ

  • Share this:
ಬೆಂಗಳೂರು (ಸೆ. 28): ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಣ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ಕರಾಚಿ ನಗರ ಬರೋಬ್ಬರಿ 10 ವರ್ಷಗಳ ಬಳಿಕ ಮೊದಲ ಬಾರಿ ಅಂತರಾಷ್ಟ್ರೀಯ ಪಂದ್ಯದ ಆತಿಥ್ಯ ವಹಿಸಿಕೊಂಡಿತ್ತು. ಈ ಮೂಲಕ ಪಾಕಿಸ್ತಾನದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮತ್ತೆ ಆರಂಭವಾಗುವ ಸಂತಸ ಮೂಡಿತ್ತು. ಆದರೆ, ವರುಣ ಇದ್ಯಾವುದಕ್ಕು ಅವಕಾಶ ಕೊಡದೆ ಪಾಕ್​ಗೆ ಆಘಾತ ನೀಡಿದ್ದಾನೆ.

2009, ಮಾರ್ಚ್ 3 ರಂದು ಲಾಹೋರ್ನ ಗಡ್ಡಾ ಕ್ರಿಕೆಟ್ ಮೈದಾನಕ್ಕೆ ಪಾಕ್ ವಿರುದ್ಧದ ಎರಡನೇ ಟೆಸ್ಟ್​ನ ಮೂರನೇ ದಿನದ ಪಂದ್ಯಕ್ಕೆ ಬಸ್​ನಲ್ಲಿ ತೆರಳುತ್ತಿರುವಾಗ ಭಯೋತ್ಪಾದಕರು ಶ್ರೀಲಂಕಾ ಆಟಗಾರರು ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದಾದ ಬಳಿಕ ಇತರೆ ದೇಶದ ತಂಡಗಳು ಪಾಕ್​ನಲ್ಲಿ ಕ್ರಿಕೆಟ್ ಪಂದ್ಯವನ್ನಾಡಲು ನಿರಾಕರಿಸಿದ್ದರು.

ಅಭ್ಯಾಸ ಪಂದ್ಯದಲ್ಲೇ ರೋಹಿತ್ ಫೇಲ್; ಶೂನ್ಯಕ್ಕೆ ಔಟ್ ಆದ ಹಿಟ್​ಮ್ಯಾನ್​​

ಆ ಬಳಿಕ 2015 ರಲ್ಲಿ ಜಿಂಬಾಬ್ವೆ ಹಾಗೂ 2017 ರಲ್ಲಿ ಶ್ರೀಲಂಕಾ ತಂಡ ಪಾಕ್​ಗೆ ತೆರಳಿ ಟಿ-20 ಪಂದ್ಯವನ್ನಾಡಿತ್ತು. ಆದರೆ, ಈವರೆಗೆ ಏಕದಿನ ಪಂದ್ಯ ಆಡಿರಲಿಲ್ಲ. ಇದೀಗ 10 ವರ್ಷಗಳ ನಂತರ ಪಾಕಿಸ್ತಾನ ಏಕದಿನ ಸರಣಿಗೆ ಸಜ್ಜಾಗಿತ್ತು. ಆದರೆ, ನಿನ್ನೆ (ಸೆ. 27) ಆಯೋಜಿಸಿದ್ದ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದಾಗಿದೆ.

 ಇನ್ನು ಮಳೆಯಿಂದ ಮೈದಾನ ಸಂಪೂರ್ಣ ಒದ್ದೆಯಾಗಿರುವ ಹಿನ್ನಲೆಯಲ್ಲಿ ಉಳಿದಿರುವ ಎರಡು ಪಂದ್ಯದ ದಿನಾಂಕ ಬದಲಾಯಿಸಲಾಗಿದೆ. ಸೆ.29ರಂದು ನಡೆಯಬೇಕಿದ್ದ 2ನೇ ಏಕದಿನ ಸೆ. 30ಕ್ಕೆ ಹಾಗೂ 3ನೇ ಹಾಗೂ ಅಂತಿಮ ಪಂದ್ಯವನ್ನು ಅಕ್ಟೋಬರ್ 2ಕ್ಕೆ  ಮುಂದೂಡಲಾಗಿದೆ.

ಎಲ್ಲಾ ಏಕದಿನ ಪಂದ್ಯ ಕರಾಚಿಯಲ್ಲಿ ಆಯೋಜಿಸಲಾಗಿದೆ. ಇನ್ನು ಮೊದಲ ಟಿ-20 ಅ. 05, 2ನೇ ಪಂದ್ಯ ಅ. 07 ಹಾಗೂ ಕೊನೆಯ ಟಿ-20 ಅ. 09 ಕ್ಕೆ ನಡೆಯಲಿದೆ. ಎಲ್ಲಾ ಟಿ-20 ಪಂದ್ಯಗಳು ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

First published: