PAK vs BAN:ಬಾಂಗ್ಲಾ ವಿರುದ್ಧ 500 ರನ್​ ಬಾರಿಸುತ್ತೇವೆ; ಟ್ರೋಲ್​ ಆದ ಪಾಕ್​ ನಾಯಕ ಸರ್ಫರಾಜ್​ ಹೇಳಿಕೆ

ICC World Cup 2019: ರನ್​ರೇಟ್​ ಲೆಕ್ಕಾಚಾರದ ಮೂಲಕ ಸೆಮಿ ಫೈನಲ್​ಗೆ ಪ್ರವೇಶಿಸುವ ಅವಕಾಶವೊಂದು ಪಾಕ್ ಬಳಗಕ್ಕೆ ದೊರೆಯಲಿದೆ. ಆದರೆ ಪ್ರಸ್ತುತ ನ್ಯೂಜಿಲೆಂಡ್ ರನ್​ರೇಟ್ +0.175 ಇದ್ದು, ಪಾಕಿಸ್ತಾನದ ರನ್​ರೇಟ್ -0.792 ಇದೆ. ಇದುವೇ ಪಾಕ್ ತಂಡಕ್ಕೆ ಮುಳುವಾಗಲಿದೆ. ಇದಕ್ಕೆ ದೊಡ್ಡ ಮೊತ್ತದ ಅಂತರದಿಂದ ಗೆಲ್ಲಬೇಕು.

Rajesh Duggumane | news18
Updated:July 5, 2019, 3:38 PM IST
PAK vs BAN:ಬಾಂಗ್ಲಾ ವಿರುದ್ಧ 500 ರನ್​ ಬಾರಿಸುತ್ತೇವೆ; ಟ್ರೋಲ್​ ಆದ ಪಾಕ್​ ನಾಯಕ ಸರ್ಫರಾಜ್​ ಹೇಳಿಕೆ
ಪಾಕ್​ ನಾಯಕ ಸರ್ಫರಾಜ್​ ಅಹ್ಮದ್​
  • News18
  • Last Updated: July 5, 2019, 3:38 PM IST
  • Share this:
ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪಾಕ್​ ಬ್ಯಾಟಿಂಗ್​ ಆಯ್ದುಕೊಂಡಿದ್ದು, ನಿಧಾನಗತಿಯಲ್ಲಿ ರನ್​ ಕಲೆ ಹಾಕುತ್ತಿದೆ. ಈ ಪಂದ್ಯದಲ್ಲಿ ಬೃಹತ್​ ಅಂತರದಿಂದ ಗೆದ್ದರೆ ಮಾತ್ರ ಪಾಕ್​ ಸೆಮಿ ಫೈನಲ್​ ಪ್ರವೇಶಿಸಲಿದೆ. ಈ ರೀತಿ ಮಾಡಿ ತೋರಿಸುತ್ತೇವೆ ಎಂದು ಪಾಕ್​ ಕ್ರಿಕೆಟ್​ ತಂಡದ ನಾಯಕ ಸರ್ಫರಾಜ್​ ಅಹ್ಮದ್​ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಈಗ ಟ್ರೋಲ್​ ಆಗಿದೆ.

9 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿರುವ ಪಾಕಿಸ್ತಾನಕ್ಕೆ ಬಾಂಗ್ಲಾ ವಿರುದ್ಧದ ಪಂದ್ಯ ಕೊನೆಯ ಅವಕಾಶ. ಈ ಪಂದ್ಯದಲ್ಲಿ ಸರ್ಫರಾಜ್ ಪಡೆ ಜಯಗಳಿಸಿದರೆ ಪಾಕ್​ 11 ಅಂಕ ಗಳಿಸಲಿದೆ. ಅತ್ತ ಇಷ್ಟೇ ಅಂಕಗಳೊಂದಿಗೆ ನ್ಯೂಜಿಲೆಂಡ್ ತಂಡವು ನಾಲ್ಕನೇ ಸ್ಥಾನವನ್ನು ಅಲಕಂರಿಸಿದೆ.

ಈ ವೇಳೆ ರನ್​ರೇಟ್​ ಲೆಕ್ಕಾಚಾರದ ಮೂಲಕ ಸೆಮಿ ಫೈನಲ್​ಗೆ ಪ್ರವೇಶಿಸುವ ಅವಕಾಶವೊಂದು ಪಾಕ್ ಬಳಗಕ್ಕೆ ದೊರೆಯಲಿದೆ. ಆದರೆ ಪ್ರಸ್ತುತ ನ್ಯೂಜಿಲೆಂಡ್ ರನ್​ರೇಟ್ +0.175 ಇದ್ದು, ಪಾಕಿಸ್ತಾನದ ರನ್​ರೇಟ್ -0.792 ಇದೆ. ಇದುವೇ ಪಾಕ್ ತಂಡಕ್ಕೆ ಮುಳುವಾಗಲಿದೆ.

* ಪಾಕಿಸ್ತಾನ 350 ರನ್​ ಸಿಡಿಸಿ, ಬಾಂಗ್ಲಾವನ್ನು 39 ರನ್​ಗಳಿಗೆ ಆಲೌಟ್ ಮಾಡಬೇಕು. ಅಂದರೆ 311 ರನ್​ಗಳಿಂದ ಜಯಗಳಿಸಿದರೆ ಸೆಮಿ ಫೈನಲ್​ಗೆ ಏರಬಹುದು.

* ಇನ್ನು 400 ರನ್ ಬಾರಿಸಿ, ಬಾಂಗ್ಲಾದೇಶವನ್ನು 84 ರನ್​ಗಳಿಗೆ ಕಟ್ಟಿ ಹಾಕಬೇಕು. ಈ ಮೂಲಕ 316 ರನ್‌ ಅಂತರ ಗೆಲುವು ಸಾಧಿಸಿ ರನ್​ರೇಟ್ ಏರಿಸಿಕೊಳ್ಳಬಹುದು.

*  ಹಾಗೆಯೇ 450 ರನ್​ ಗಳಿಸಿ ಬಾಂಗ್ಲಾದೇಶವನ್ನು 129 ರನ್​ಗಳಿಗೆ ನಿಯಂತ್ರಿಸಿದರೂ ಸಹ ಸೆಮಿ ಫೈನಲ್​ಗೇರಬಹುದು. ಅಂದರೆ 321 ರನ್​ಗಳ ಭರ್ಜರಿ ಜಯ ಸಾಧಿಸಬೇಕು.

ಈ ಅಂತರದಿಂದ ಗೆಲ್ಲಲು ಪಾಕ್​ ಕ್ರಿಕೆಟ್​ ತಂಡದ ನಾಯಕ 500 ರನ್​ ಬಾರಿಸುತ್ತೇವೆ ಎಂದಿದ್ದಾರೆ. “500-400ರನ್​ ಬಾರಿಸಿ ಎದುರಾಳಿ ತಂಡವನ್ನು ಕಡಿಮೆ ಅಂತರಕ್ಕೆ ಆಲ್​ಔಟ್​ ಮಾಡಿದರೆ ನಾವು ಸೆಮಿಫೈನಲ್​ ಪ್ರವೇಶಿಸಬಹುದು. 300ಕ್ಕೂ ಅಧಿಕ ರನ್​ಗಳ ಅಂತರದಿಂದ ನಾವು ಗೆಲ್ಲಲು ಪ್ರಯತ್ನಿಸುತ್ತೇವೆ. ನಮ್ಮ ಕೈಲಾದಷ್ಟು ಪ್ರಯತ್ನವನ್ನು ನಾವು ಮಾಡುತ್ತೇವೆ. 500 ರನ್​ ಬಾರಿಸುತ್ವೆತೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಸದ್ಯ ಈ ವಿಚಾರ ಸಾಕಷ್ಟು ಟ್ರೋಲ್​ ಆಗಿದೆ.














First published:July 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ