PAK vs AFG: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಪಾಕ್; ಸೆಮೀಸ್ ಹಾದಿ ಇನ್ನೂ ಜೀವಂತ

Pakistan vs Afghanistan Live Score: ಪಾಕಿಸ್ತಾನಕ್ಕೆ ಈ ಪಂದ್ಯ ಮುಖ್ಯವಾಗಿದ್ದು, ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಸೆಮಿ ಫೈನಲ್ ಹಾದಿಯನ್ನು ಜೀವಂತವಾಗಿರಿಸಿರುವ ಪಾಕ್​ಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಆಗಿದೆ.

Vinay Bhat | news18
Updated:June 29, 2019, 10:35 PM IST
PAK vs AFG: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಪಾಕ್; ಸೆಮೀಸ್ ಹಾದಿ ಇನ್ನೂ ಜೀವಂತ
ಪಾಕಿಸ್ತಾನ
  • News18
  • Last Updated: June 29, 2019, 10:35 PM IST
  • Share this:
ಬೆಂಗಳೂರು (ಜೂ. 29): ಲೀಡ್ಸ್​ನಲ್ಲಿ ನಡೆದ ವಿಶ್ವಕಪ್​ನ 36ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ 3 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಕೊನೆಯ ಓವರ್​ ವರೆಗೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಗೂ ಪಾಕ್ ಗೆದ್ದು ಬೀಗಿದ್ದು, ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.

ಅಫ್ಘಾನ್ ನೀಡಿದ್ದ 228 ರನ್​ಗಳ ಟಾರ್ಗಟ್ ಬೆನ್ನಟ್ಟಿದ ಪಾಕ್ ಮೊದಲ ಓವರ್​ನ ಮುಜೀಬ್​​ರ 2ನೇ ಎಸೆತದಲ್ಲಿ ಫಖರ್ ಜಮಾನ್(0) ವಿಕೆಟ್ ಕಳೆದುಕೊಂಡಿತು.

ಬಳಿಕ 2ನೇ ವಿಕೆಟ್​ಗೆ ಇಮಾಮ್ ಉಲ್ ಹಖ್ ಹಾಗೂ ಬಾಬರ್ ಹಜಾಮ್ ಜೊತೆಯಾಗಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಜವಾಬ್ದಾರಿ ಹೊತ್ತರು. ಅದರಂತೆ ಈ ಜೋಡಿ 72 ರನ್​ಗಳ ಕಾಣಿಕೆ ನೀಡಿತು. ಆದರೆ, ಚೆನ್ನಾಗಿಯೆ ಬ್ಯಾಟ್ ಬೀಸುತ್ತಿದ್ದ ಇಮಾಮ್ 36 ರನ್ ಗಳಿಸಿರುವಾಗ ನಬಿ ಬೌಲಿಂಗ್​ನಲ್ಲಿ ಸ್ಟಂಪ್​ ಔಟ್​ಗೆ ಬಲಿಯಾದರೆ, ಕಳೆದ ಪಂದ್ಯದಲ್ಲಿ ಮಿಂಚಿದ್ದ ಬಾಬರ್ ಈ ಬಾರಿ 45 ರನ್​ಗೆ ಸುಸ್ತಾದರು.

3 ವಿಕೆಟ್ ಕಳೆದುಕೊಂಡ ಪಾಕ್​ಗೆ ಮೊಹಮ್ಮದ್ ಹಫೀಜ್ ಹಾಗೂ ಹ್ಯಾರಿಸ್ ಸೊಹೈಲ್ ಆಸರೆಯಾಗಿ ನಿಲ್ಲಬೇಕಿತ್ತು. ಆದರೆ ಹಫೀಜ್ 19 ರನ್​ಗೆ ನಿರ್ಗಮಿಸಿದರೆ, ಸೊಹೈಲ್ ಆಟ 27 ರನ್​ಗೆ ಅಂತ್ಯವಾಯಿತು. ನಾಯಕ ಸರ್ಫರಾಜ್ ಕೂಡ ಅನಗತ್ಯ ರನ್ ಕಲೆಹಾಕಲೋಗಿ 18 ರನ್ ಗಳಿಸಿರುವಾಗ ರನೌಟ್​ಗೆ ಬಲಿಯಾದರು.

ಹೀಗೆ ಪ್ರಮುಖ ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ಪಾಕ್​ಗೆ ಇಮಾದ್ ವಾಸಿಮ್ ಗೆಲುವಿನ ರುಚಿ ನೀಡಿದರು. ಕೆಚ್ಚೆದೆಯ ಆಟ ಪ್ರದರ್ಶಿಸಿದ ಇಮಾದ್ ಗೆಲುವಿಗಾಗಿ ಕಠಿಣ ಹೋರಾಟ ನಡೆಸಿದರು. ಇದರ ಪರಿಣಾಮ ಕೊನೆಯ ಓವರ್​ನಲ್ಲಿ ಪಾಕ್​ಗೆ ಗೆಲ್ಲಲು 6 ರನ್​ಗಳ ಅವಶ್ಯಕತೆಯಿತ್ತು. ಆದರೆ 4ನೇ ಎಸೆದಲ್ಲಿ ಇಮಾದ್ ಚೆಂಡನ್ನು ಬೌಂಡರಿಗೆ ಅಟ್ಟುವ ಮೂಲಕ ಪಾಕ್​ಗೆ ರೋಚಕ ಜಯ ತಂದಿಟ್ಟರು. 49.4 ಓವರ್​ನಲ್ಲಿ ಪಾಕಿಸ್ತಾನ 7  ವಿಕೆಟ್ ಕಳೆದುಕೊಂಡು 230 ರನ್ ಕಲೆಹಾಕಿತು. ಇಮಾದ್ 54 ಎಸೆತಗಳಲ್ಲಿ ಅಜೇಯ 49 ರನ್ ಬಾರಿಸಿದರು.

3 ವಿಕೆಟ್​ಗಳ ರೋಚಕ ಜಯದೊಂದಿಗೆ ಪಾಕ್ ತನ್ನ ಸೆಮೀಸ್ ಹಾದಿಯನ್ನು ಜೀವಂತವಾಗಿರಿಸಿದೆ. ಇತ್ತ ಅಫ್ಘಾನ್ ಗೆಲುವಿಗಾಗಿ ನಡೆಸಿದ ಹೋರಾಟ ವಿಫಲವಾಗಿದ್ದು, ಆಡಿದ ಎಂಟನೇ ಪಂದ್ಯದಲ್ಲೂ ಸೋಲುಂಡಿದೆ. ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಇಮಾದ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಈ ಗೆಲುವಿನೊಂದಿಗೆ ಪಾಕ್ ಅಖಮಪಟ್ಟಿಯಲಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದ ಅಫ್ಘಾನ್ ತಂಡದ ನಾಯಕ ಗುಲ್ಬದಿನ್ ನೈಬ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.ಓಪನರ್​ಗಳಾಗಿ ಕಣಕ್ಕಿಳಿದ ರೆಹ್ಮತ್ ಶಾ ಹಾಗೂ ನಾಯಕ ಗುಲ್ಬದಿನ್ ನೈಬ್ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಎಡವಿದರು. ಶಾಹಿನ್ ಆಫ್ರಿದಿ ಬೌಲಿಂಗ್​ನಲ್ಲಿ ನೈಬ್ 15 ರನ್ ಗಳಿಸಿರುವಾಗ ಕೀಪರ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರ ಮುಂದಿನ ಎಸೆತದಲ್ಲೇ ಹಶ್ಮತುಲ್ಲ ಶಾಹಿದಿ ಸೊನ್ನೆ ಸುತ್ತಿದರು.

ರೆಹ್ಮತ್ ಶಾ(35) ಒಂದಿಷ್ಟು ರನ್ ಕಲೆಹಾಕಿ ಬೇಗನೆ ಪೆವಿಲಿಯನ್ ಸೇರಿಕೊಂಡರು. 3 ವಿಕೆಟ್ ಕಳೆದುಕೊಂಡಿರುವಾಗ ತಂಡಕ್ಕೆ ಅಫ್ಘಾನ್ ಅಸ್ಗರ್ ಹಾಗೂ ಇಕ್ರಮ್ ಅಲಿ ಆಸರೆಯಾಗಿ ನಿಂತರು. ಎಚ್ಚರಿಕೆಯ ಆಟ ಪ್ರದರ್ಶಿಸಿದ ಈ ಜೋಡಿಯ ಖಾತೆಯಿಂದ 64 ರನ್​ಗಳ ಕಾಣಿಕೆ ಮೂಡಿಬಂತು.

ಬಿರುಸಿನ ಆಟಕ್ಕೆ ಮೊರೆಹೋದ ಅಸ್ಗರ್ 35 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಿಡಿಸಿ 42 ರನ್​ಗೆ ಔಟ್ ಆದರು. ಇದರ ಬೆನ್ನಲ್ಲೆ 66 ಎಸೆತಗಳಲ್ಲಿ 24 ರನ್ ಕಲೆಹಾಕಿದ್ದ ಇಕ್ರಮ್ ಕೂಡ ನಿರ್ಗಮಿಸಿ ಆಘಾತ ನೀಡಿದರು. ಮೊಹಮ್ಮದ್ ನಬಿ ಕೂಡ ತಂಡಕ್ಕೆ ಆಸರೆಯಾದರೆ 16 ರನ್​ಗೆ ಬ್ಯಾಟ್ ಕೆಳಗಿಟ್ಟರು.

ಈ ಸಂದರ್ಭ ನಜಿಬುಲ್ಲ ಜರ್ದನ್ 54 ಎಸೆತಗಳಲ್ಲಿ 42 ರನ್ ಕಲೆಹಾಕಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಪರಿಣಾಮ ಅಫ್ಘಾನಿಸ್ತಾನ 50 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 227 ರನ್ ಕಲೆಹಾಕಿತು. ಪಾಕ್ ಪರ ಶಾಹಿನಿ ಅಫ್ರಿದಿ 4 ವಿಕೆಟ್ ಕಿತ್ತು ಮಿಂಚಿದರೆ, ಇಮಾದ್ ವಾಸಿಮ್ ಹಾಗೂ ವಹಾಬ್ ರಿಯಾಝ್ ತಲಾ 2 ವಿಕೆಟ್ ಮತ್ತು ಶಬಾದ್ ಖಾನ್ 1 ವಿಕೆಟ್ ಪಡೆದರು.

 
First published:June 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading