ಕ್ರೀಡೆ

  • associate partner
HOME » NEWS » Sports » CRICKET PAKISTAN SUPER LEAGUE DO YOU KNOW HOW MUCH MONEY A TEAM WON IN PAKISTAN SUPER LEAGUE TROPHY PSL 2020 VB

PSL 2020: ಐಪಿಎಲ್​ನಂತಿರುವ ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಟ್ರೋಫಿ ಗೆದ್ದ ತಂಡಕ್ಕೆ ಸಿಕ್ಕ ಹಣವೆಷ್ಟು ಗೊತ್ತೆ?

ಈ ಬಾರಿ ಐಪಿಎಲ್​ನಲ್ಲಿ ದಾಖಲೆಯ ಐದನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್​ 20 ಕೋಟಿ ರೂ. ಬಾಜಿಕೊಂಡಿತ್ತು. ಆದರೆ, ಪಿಎಸ್​ಎಲ್ ವಿನ್ನರ್ ಕರಾಚಿ ಕಿಂಗ್ಸ್ ಪಡೆದಿದ್ದು ಕೇವಲ...

news18-kannada
Updated:November 19, 2020, 10:11 AM IST
PSL 2020: ಐಪಿಎಲ್​ನಂತಿರುವ ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಟ್ರೋಫಿ ಗೆದ್ದ ತಂಡಕ್ಕೆ ಸಿಕ್ಕ ಹಣವೆಷ್ಟು ಗೊತ್ತೆ?
PSL2020
  • Share this:
ಮಂಗಳವಾರಷ್ಟೆ ಪಾಕಿಸ್ತಾನ ಸೂಪರ್ ಲೀಗ್ ಐದನೇ ಆವೃತ್ತಿಗೆ ತೆರೆಬಿದ್ದಿದ್ದು ಕರಾಚಿ ಕಿಂಗ್ಸ್​ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಲಾಹೋರ್‌ ಕಲಂದರ್ಸ್‌ ವಿರುದ್ಧದ ಫೈನಲ್ ಕಾದಾಟಕ್ಕೆ ಐದು ವಿಕೆಟ್‌ಗಳ ಜಯ ಸಾಧಿಸಿ ಕರಾಚಿ ಕಿಂಗ್ಸ್‌ ತಂಡ ಪಿಎಸ್​ಎಲ್​ ಟೂರ್ನಿಯಲ್ಲಿ ತನ್ನ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದರ ಬೆನ್ನಲ್ಲೆ ಪಿಎಸ್​ಎಲ್​ನಲ್ಲಿ ಗೆದ್ದ ತಂಡಕ್ಕೆ ಸಿಕ್ಕ ಹಣ ಸಾಕಷ್ಟು ಸುದ್ದಿಯಾಗಿದೆ. ಇಂಡಿಯನ್ ಸೂಪರ್ ಲೀಗ್​ಗೆ ಪಾಕಿಸ್ತಾನ ಪ್ರೀಮಿಯರ್ ಲೀಗ್ ಅನ್ನು ಹೋಲಿಕೆ ಮಾಡಿ ಭಾರೀ ಟ್ರೋಲ್ ಆಗುತ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಪಿಎಸ್​ಎಲ್ ಅನ್ನು ಹಿಂದಿನಿಂದಲೂ ಹೋಲಿಕೆ ಮಾಡುವುದು ನಡೆಯುತ್ತಿದೆ. ಆದರೆ, ಪಿಎಸ್​ಎಲ್​ನಲ್ಲಿ ವಿಜೇತ ತಂಡ ಪಡೆಯುವ ಹಣ, ಆಟಗಾರರು ಗಳಿಸುವ ವೇತನ ಹಾಗೂ ಕ್ರಿಕೆಟ್​ ಬೋರ್ಡ್​ ಗಳಿಸಿಕೊಳ್ಳುವ ಒಟ್ಟು ಹಣದಲ್ಲಿ ಭಾರತಕ್ಕೆ ಹೋಲಿಕೆ ಮಾಡಿದರೆ ಸಾಕಷ್ಟು ವ್ಯತ್ಯಾಸವಿದೆ.

India vs Australia: ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಸಿಕ್ತು ಭರ್ಜರಿ ನ್ಯೂಸ್

ಈ ಬಾರಿ ಐಪಿಎಲ್​ನಲ್ಲಿ ದಾಖಲೆಯ ಐದನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್​ 20 ಕೋಟಿ ರೂ. ಬಾಜಿಕೊಂಡಿತ್ತು. ಆದರೆ, ಪಿಎಸ್​ಎಲ್ ವಿನ್ನರ್ ಕರಾಚಿ ಕಿಂಗ್ಸ್ ಪಡೆದಿದ್ದು ಕೇವಲ​ 3.75 ಕೋಟಿ ರೂ. ಅಷ್ಟೆ. ಐಪಿಎಲ್​ನಲ್ಲಿ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್​ 12.5 ಕೋಟಿ ರೂ. ಪಡೆದರೆ, ಪಿಎಸ್​ಎಲ್ ರನ್ನರ್​ ಅಪ್​ ಲಾಹೋರ್ ಕಲಂದರ್ಸ್ ಪಡೆದಿದ್ದು 1.5 ಕೋಟಿ ರೂಪಾಯಿ.

ಈ ಹಿಂದೆ ಪಾಕಿಸ್ತಾನದ ಕೆಲ ಆಟಗಾರರು, ಐಪಿಎಲ್​ಗಿಂತ ಪಿಎಸ್​ಎಲ್ ಸಾಕಷ್ಟು ಪ್ರಸಿದ್ದಿ ಪಡೆದಿದೆ ಎಂದಿದ್ದರು. ಸದ್ಯ ಇದೇ ವಿಚಾರವನ್ನಿಡಿದು ಪಾಕ್ ಸೂಪರ್ ಲೀಗ್ ಸಾಕಷ್ಟು ಟ್ರೋಲ್ ಆಗುತ್ತಿದೆ. ಅಷ್ಟೇ ಅಲ್ಲದೆ ಐಪಿಎಲ್​ನಲ್ಲಿ 2ನೇ ಕ್ವಾಲಿಫೈಯರ್​ನಲ್ಲಿ ಹಾಗೂ ಎಲಿಮಿನೇಟರ್​ನಲ್ಲಿ ಸೋತ 3 ಮತ್ತು 4ನೇ ಸ್ಥಾನ ಪಡೆಯುವ ತಂಡಗಳೂ ತಲಾ 8.75 ಕೋಟಿ ರೂ ಪಡೆಯಲಿವೆ. ಆದರೆ, ಪಿಎಸ್​ಎಲ್​ನಲ್ಲಿ 3 ಮತ್ತು 4ನೇ ಸ್ಥಾನ ಪಡೆಯುವ ತಂಡಗಳಿಗೆ ಬಹುಮಾನ ಮೊತ್ತವೇ ಇಲ್ಲ.

ಮಂಗಳವಾರ ನಡೆದ ಪಿಎಲ್​ಎಲ್ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಲಾಹೋರ್‌ ಕಲಂದರ್ಸ್‌ ತಂಡ 20 ಓವರ್​ಗಳಲ್ಲಿ 133 ರನ್‌ಗಳ ಸಾಧಾರಣ ಮೊತ್ತ ದಾಖಲಿಸುವುದಕ್ಕಷ್ಟೇ ಶಕ್ತವಾಯಿತು. ಬಳಿಕ ಗುರಿ ಬೆನ್ನತ್ತಿದ ಕರಾಚಿ ಕಿಂಗ್ಸ್‌ 18.4 ಓವರ್‌ಗಳಲ್ಲಿ ಗುರಿ ಮುಟ್ಟಿ ಪ್ರಶಸ್ತಿಗೆ ಮುತ್ತಿಕ್ಕಿತು.

ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಸರಣಿ ಘೋಷಿಸಿದ ಇಂಗ್ಲೆಂಡ್; ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ

ಈ ಪಂದ್ಯದಲ್ಲಿ ಅಬ್ಬರಿಸಿದ ಕರಾಚಿ ಕಿಂಗ್ಸ್‌ ತಂಡದ ಪರ ಮಿಂಚಿದ ಸ್ಟಾರ್‌ ಬ್ಯಾಟ್ಸ್‌ಮನ್‌ ಬಾಬರ್‌ ಆಝಮ್‌ 49 ಎಸೆತಗಳಲ್ಲಿ ಅಜೇಯ 69 ರನ್‌ಗಳನ್ನು ಸಿಡಿಸುವ ಮೂಲಕ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಜೊತೆಗೆ ಟೂರ್ನಿಯಲ್ಲಿ 59.12ರ ಸರಾಸರಿಯಲ್ಲಿ 473 ರನ್‌ಗಳನ್ನು ಬಾರಿಸಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡು ಪಂದ್ಯಶ್ರೇಷ್ಠ ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.
Published by: Vinay Bhat
First published: November 19, 2020, 10:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories