ಬಡವಾಗುತ್ತಿದೆ ಪಿಸಿಬಿ; ದಶಕಗಳ ಬಳಿಕ ನಡೆಯುತ್ತಿರುವ ಟೆಸ್ಟ್​ನ ಟಿಕೆಟ್ ದರ ಕೇಳಿದ್ರೆ ಅಚ್ಚರಿ ಪಡ್ತೀರಾ!

ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ಬಡವಾದಂತೆ ಕಾಣುತ್ತಿದೆ. ಹತ್ತು ವರ್ಷಗಳ ನಂತರ ಪಾಕ್ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿರುವ ಕಾರಣ ಪ್ರೇಕ್ಷಕರನ್ನು ಕ್ರೀಡಾಂಗಣಕ್ಕೆ ಕರೆತರಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅತ್ಯಂತ ಅಗ್ಗದ ಟಿಕೆಟ್‌ಗಳನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿದೆ.

Vinay Bhat | news18-kannada
Updated:November 29, 2019, 3:47 PM IST
ಬಡವಾಗುತ್ತಿದೆ ಪಿಸಿಬಿ; ದಶಕಗಳ ಬಳಿಕ ನಡೆಯುತ್ತಿರುವ ಟೆಸ್ಟ್​ನ ಟಿಕೆಟ್ ದರ ಕೇಳಿದ್ರೆ ಅಚ್ಚರಿ ಪಡ್ತೀರಾ!
ಪಾಕಿಸ್ತಾನ ಕ್ರಿಕೆಟ್
  • Share this:
ಬೆಂಗಳೂರು (ನ. 29): ಭದ್ರತೆಯ ಭೀತಿಯಿಂದ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಬಹುತೇಕ ಎಲ್ಲ ತಂಡಗಳು ಹಿಂದೇಟು ಹಾಕುತ್ತಿದ್ದವು. 2009 ರಲ್ಲಿ ಭಯೋತ್ಪಾದಕರು ಶ್ರೀಲಂಕಾ ಆಟಗಾರರು ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ಇತರೆ ದೇಶದ ತಂಡಗಳು ಪಾಕ್​ನಲ್ಲಿ ಕ್ರಿಕೆಟ್ ಪಂದ್ಯವನ್ನಾಡಲು ನಿರಾಕರಿಸಿದ್ದರು.

ಆದರೆ, ಇತ್ತೀಚೆಗಷ್ಟೆ ಶ್ರೀಲಂಕಾ ತಂಡ ಪಾಕಿಸ್ತಾನ ನೆಲದಲ್ಲಿ ಸೀಮಿತ ಓವರ್ ಕ್ರಿಕೆಟ್​ನಲ್ಲಿ ಭಾಗವಹಿಸಿತ್ತು. ಸದ್ಯ ದಶಕಗಳ ಬಳಿಕ ಪಾಕಿಸ್ತಾನದಲ್ಲಿ ಮತ್ತೆ ಅಂತರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ ನಡೆಯುತ್ತಿದೆ. ಶ್ರೀಲಂಕಾ ವಿರುದ್ಧ ಪಾಕ್ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲು ಸಜ್ಜಾಗಿದೆ.

ಇದರೊಂದಿಗೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನ ತವರು ನೆಲದಲ್ಲಿ ಅಭಿಯಾನ ಆರಂಭಿಸಲಿದೆ. ಡಿಸೆಂಬರ್ 11 ರಿಂದ 15ರ ವರೆಗೆ ರಾವಲ್ಪಿಂಡಿಯಲ್ಲಿ ಮೊದಲ ಟೆಸ್ಟ್​ ಆಯೋಜನೆ ಮಾಡಿದ್ದರೆ, ಡಿ. 19 ರಿಂದ 23ರ ವರೆಗೆ ಕರಾಚಿ ಮೈದಾನದಲ್ಲಿ ಎರಡನೇ ಟೆಸ್ಟ್​ ನಡೆಯಲಿದೆ.

10 ವಿಕೆಟ್ ಕಿತ್ತ ಕಾರ್ನ್​ವಾಲ್​; ಅಫ್ಘಾನ್ ವಿರುದ್ಧದ ಏಕೈಕ ಟೆಸ್ಟ್​ನಲ್ಲಿ ವಿಂಡೀಸ್​ಗೆ ಭರ್ಜರಿ ಜಯ

ಆದರೆ, ಸದ್ಯ ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ಬಡವಾದಂತೆ ಕಾಣುತ್ತಿದೆ. ಹತ್ತು ವರ್ಷಗಳ ನಂತರ ಪಾಕ್ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿರುವ ಕಾರಣ ಪ್ರೇಕ್ಷಕರನ್ನು ಕ್ರೀಡಾಂಗಣಕ್ಕೆ ಕರೆತರಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅತ್ಯಂತ ಅಗ್ಗದ ಟಿಕೆಟ್‌ಗಳನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿದೆ.

ಇಂಗ್ಲಿಷ್ ಪತ್ರಿಕೆಯೊಂದು ಮಾಡಿರುವ ವರದಿ ಪ್ರಕಾರ, ಪಾಕ್- ಲಂಕಾ ನಡುವಿನ ಟೆಸ್ಟ್ ಪಂದ್ಯಕ್ಕಾಗಿ ಪಿಸಿಬಿ ಕೇವಲ 100 ರೂಪಾಯಿಗಳಿಗೆ ಟಿಕೆಟ್ ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದೆಯಂತೆ. ಅಂದರೆ ಭಾರತದ ಮೌಲ್ಯದ ಪ್ರಕಾರ ಕೇವಲ 46 ರೂ.ಗೆ ಟಿಕೆಟ್ ಸಿಗಲಿದೆ. ಪಂದ್ಯದ ಅತ್ಯಂತ ದುಬಾರಿ ಟಿಕೆಟ್ ಬೆಲೆ ಅಂದರೆ 500 ರೂ., ಭಾರತೀಯ ರೂಪಾಯಿಗಳಲ್ಲಿ ಕೇವಲ 230 ರೂಪಾಯಿಗಳಾಗಿರುತ್ತದೆ.

ಸಾಮಾನ್ಯವಾಗಿ ಭಾರತದಲ್ಲಿ ಟೆಸ್ಟ್​ ಪಂದ್ಯ ನಡೆಯುತ್ತದೆ ಎಂದಾದರೆ ಟಿಕೆಟ್ ಬೆಲೆ ಕನಿಷ್ಠ 400-500 ರೂಪಾಯಿಗಳಿರುತ್ತದೆ. ಪಾಕಿಸ್ತಾನದಲ್ಲಿ ಟೆಸ್ಟ್​ ಕ್ರಿಕೆಟ್​ ನೋಡಲು ಬರುವ ಪ್ರೇಕ್ಷಕರ ಸಂಖ್ಯೆ ತೀರಕಡಮೆ. ಹೀಗಾಗಿ ದಶಕಗಳ ಬಳಿಕ ಟೆಸ್ಟ್​ ಕ್ರಿಕೆಟ್ ನಡೆಯುತ್ತಿರುವ ಕಾರಣ ಪ್ರೇಕ್ಷಕರನ್ನು ಮೈದಾನಕ್ಕೆ ಕರೆತರಲೇಬೇಕು ಎಂಬ ಉದ್ದೇಶದಿಂದ ಇಷ್ಟು ಕಡಿಮೆ ಬೆಲೆ ನಿಗದಿ ಪಡಿಸಿದೆ ಎಂದು ಹೇಳಲಾಗಿದೆ.(VIDEO): ವಿಕೆಟ್ ಪಡೆದಾಗ ಈ ಬೌಲರ್ ಮೈದಾನದಲ್ಲೇ ಮಾಡ್ತಾನೆ ಮ್ಯಾಜಿಕ್; ಹೇಗೆ ಗೊತ್ತಾ?

ಸದ್ಯ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಟೆಸ್ಟ್​ ಸರಣಿ ಆಡುತ್ತಿದೆ. ಮೊದಲ ಟೆಸ್ಟ್​ನಲ್ಲಿ ಪಾಕ್ ಸೋಲುಂಡಿದ್ದು, ಎರಡನೇ ಟೆಸ್ಟ್​ನಲ್ಲಾದರು ಗೆಲುವು ಸಾಧಿಸುತ್ತ ನೋಡಬೇಕಿದೆ.

First published: November 29, 2019, 3:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading