ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು; ಭಾರತದ ವಿರುದ್ಧ ಪಾಕ್​ ಕ್ರಿಕೆಟ್​ ನಾಯಕ ಕಿಡಿ

ಕರಾಚಿಯಲ್ಲಿ ನಡೆದ ಈದ್​ ಹಬ್ಬದ ಪ್ರಯುಕ್ತ ಮಾಧ್ಯಮದವರೊಂದಿಗೆ ಮಾತನಾಡಿದ ಸರ್ಫರಾಜ್​ ಅಹ್ಮದ್​, ನಮ್ಮ ಕಾಶ್ಮೀರಿ ಸಹೋದರರು ಈ ಕಠಿಣ ಪರಿಸ್ಥಿತಿಯಿಂದ ಪಾರಾಗಲೂ ಹಾಗೂ ನೆರವಾಗಲು ಸರ್ವಶಕ್ತನಾದ ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.

news18
Updated:August 13, 2019, 11:05 PM IST
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು; ಭಾರತದ ವಿರುದ್ಧ ಪಾಕ್​ ಕ್ರಿಕೆಟ್​ ನಾಯಕ ಕಿಡಿ
ಸರ್ಫರಾಜ್​ ಅಹ್ಮದ್
  • News18
  • Last Updated: August 13, 2019, 11:05 PM IST
  • Share this:
ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ಕಲ್ಪಿಸಿದ ಆರ್ಟಿಕಲ್​ 370ನೇ ವಿಧಿಗೆ ತಿಲಾಂಜಲಿ ಹೇಳಿದ ಬೆನ್ನಲ್ಲೇ ಪಾಕ್​ ಭಾರತದ ಮೇಲೆ ಹರಿಹಾಯುತ್ತಿದ್ದು, ಇದೀಗ ಪಾಕಿಸ್ತಾನದ  ಕ್ರಿಕೆಟರ್ಸ್​ ಕೂಡ ಇದೇ ವಿಚಾರವನ್ನು ಇಟ್ಟುಕೊಂಡು ಮತ್ತೆ ಭಾರತದ ಮೇಲೆ ಹರಿಹಾಯುತ್ತಿದ್ದಾರೆ. ಮಾಜಿ ಕ್ರಿಕೆಟಿಗರಾದ ಶೋಯೆಬ್​ ಅಖ್ತರ್​ ಹಾಗೂ ಆಲ್​ ರೌಂಡರ್​ ಶಾಹಿದ್​ ಅಫ್ರಿದಿ ಕೂಡ ಮೋದಿ ವಿರುದ್ಧ ಕಿಡಿ ಕಾರಿದ್ದರು. ಇದೀಗ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಸರ್ಫರಾಜ್​ ಅಹ್ಮದ್​ ಕೂಡ ಅವರಿಗೆ ಸಾಥ್​​ ನೀಡಿದ್ದಾರೆ.

ಕರಾಚಿಯಲ್ಲಿ ನಡೆದ ಈದ್​ ಹಬ್ಬದ ಪ್ರಯುಕ್ತ ಮಾಧ್ಯಮದವರೊಂದಿಗೆ ಮಾತನಾಡಿದ ಸರ್ಫರಾಜ್​ ಅಹ್ಮದ್​, ನಮ್ಮ ಕಾಶ್ಮೀರಿ ಸಹೋದರರು ಈ ಕಠಿಣ ಪರಿಸ್ಥಿತಿಯಿಂದ ಪಾರಾಗಲೂ ಹಾಗೂ ನೆರವಾಗಲು ಸರ್ವಶಕ್ತನಾದ ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.

ಸಂಪೂರ್ಣ ಪಾಕಿಸ್ತಾನ ಕಾಶ್ಮೀರ ಜನತೆಯ ಜೊತೆಗಿದ್ದು, ನಾವೆಲ್ಲರು ನೋವು ಹಾಗೂ ದುಃಖವನ್ನು ಸಮಾನಾಗಿ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಪ್ರವಾಹ ರೌದ್ರತೆ: ಕರ್ನಾಟಕದ 54 ಸೇರಿ ದೇಶಾದ್ಯಂತ 200ರ ಗಡಿ ದಾಟಿದ ಸಾವಿನ ಪ್ರಮಾಣ

 ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪಾಕ್​ ಮಾಜಿ ಕ್ಯಾಪ್ಟನ್​​​ ಶಾಹೀದ್​ ಅಫ್ರಿದಿ, ಕಾಶ್ಮೀರ ವಿಚಾರದಲ್ಲಿ ಅಮೆರಿಕ ಅಧ್ಯಕ್ಷರು ಮಧ್ಯೆ ಪ್ರವೇಶ ಮಾಡಬೇಕು ಎಂದು ತಿಳಿಸಿದ್ದಾರೆ. ಅಂತೆಯೇ, ನಿನ್ನೆ ಶೋಯೆಬ್​ ಅಖ್ತರ್​ ಕೂಡ ಟ್ವೀಟ್​ ಮಾಡಿದ್ದು, ನಿಮಗೆಲ್ಲರಿಗೆ ಈದ್​ ಮುಬಾರಕ್​ ಶುಭಾಷಯಗಳು.. ಕಾಶ್ಮೀರ ಭಾರತದಿಂದ ತುಳಿತಕ್ಕೊಳಗಾಗುತ್ತಿದ್ದು, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ.

First published:August 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading