ವಿಶ್ವ ದಾಖಲೆ ಬರೆದ ಪಾಕ್-ಇಂಗ್ಲೆಂಡ್: ಮತ್ತೊಮ್ಮೆ ಬೃಹತ್ ಮೊತ್ತ ಬೆನ್ನತ್ತಿ ಗೆದ್ದ ಆಂಗ್ಲರು

ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಸ್ಪೋಟಕ ಆಟಗಾರ ಬಾಬರ್ ಆಝಂ (115) ಶತಕದ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 340 ರನ್ ಗಳಿಸಿತ್ತು.

zahir | news18
Updated:May 18, 2019, 4:07 PM IST
ವಿಶ್ವ ದಾಖಲೆ ಬರೆದ ಪಾಕ್-ಇಂಗ್ಲೆಂಡ್: ಮತ್ತೊಮ್ಮೆ ಬೃಹತ್ ಮೊತ್ತ ಬೆನ್ನತ್ತಿ ಗೆದ್ದ ಆಂಗ್ಲರು
@Sports24hour
  • News18
  • Last Updated: May 18, 2019, 4:07 PM IST
  • Share this:
ನಾಟಿಂಗ್​ಹ್ಯಾಮ್​ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯವನ್ನು ಇಂಗ್ಲೆಂಡ್ ತಂಡ 3 ವಿಕೆಟ್​ಗಳಿಂದ ಗೆದ್ದು ಬೀಗಿದೆ. ತೀವ್ರ ರೋಚಕತೆಯಿಂದ ಕೂಡಿದ ಈ ಪಂದ್ಯವನ್ನು ಕೊನೆಯ ಓವರ್​ನಲ್ಲಿ ಗೆಲ್ಲುವ ಮೂಲಕ ಆಂಗ್ಲರು ಪಾಕ್ ವಿರುದ್ಧ 5 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ತನ್ನದಾಗಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಸ್ಪೋಟಕ ಆಟಗಾರ ಬಾಬರ್ ಆಝಂ (115) ಶತಕದ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 340 ರನ್ ಗಳಿಸಿತ್ತು. ಈ ಸವಾಲಿನ ಮೊತ್ತವನ್ನು ಚೇಸ್ ಮಾಡಿದ ಇಂಗ್ಲೆಂಡ್ ತಂಡ ಜೇಸನ್ ರಾಯ್(114) ಬಿರುಸಿನ ಶತಕ ಹಾಗೂ ಬೆನ್ ಸ್ಟೋಕ್ಸ್ (ಔಟಾಗದೆ 71) ಹೊಡಿಬಡಿಯ ಅರ್ಧಶತಕದ ಬೆಂಬಲದಿಂದ ಕೊನೆಯ ಓವರ್​ನಲ್ಲಿ ಗೆಲುವಿನ ದಡ ಸೇರಿತು.

ಈ ಪಂದ್ಯದಲ್ಲಿ ಪಾಕಿಸ್ತಾನ 340 ರನ್​ಗಳಿಸುವ ಮೂಲಕ ಸತತ 339 ಕ್ಕಿಂತಲೂ ಹೆಚ್ಚಿನ ರನ್ ಬಾರಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿತು. ಈ ದಾಖಲೆಯನ್ನು ಕೆಲವೇ ಅಂತರದಲ್ಲಿ ಇಂಗ್ಲೆಂಡ್ ತಂಡ ಮುರಿದಿರುವುದು ವಿಶೇಷ. ಬೃಹತ್ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 341 ರನ್​ಗಳಿಸಿ ಹೊಸ ದಾಖಲೆ ಬರೆಯಿತು.

ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧ ಆಡಿದ ಮೂರು ಏಕದಿನ ಪಂದ್ಯಗಳಲ್ಲಿ ಸತತ 361, 358 ಹಾಗೂ 340 ರನ್​ ಬಾರಿಸಿ ಕ್ರಿಕೆಟ್​ ಇತಿಹಾಸದ ಅಪರೂಪ ದಾಖಲೆಗೆ ಕಾರಣವಾಗಿತ್ತು. ಈ ಮೂರು ಪಂದ್ಯಗಳಲ್ಲಿ 373, 359 ಹಾಗೂ 341 ರನ್ ಕಲೆ ಹಾಕಿದ ಇಂಗ್ಲೆಂಡ್ ಅದೇ ದಾಖಲೆಯನ್ನು ತನ್ನದಾಗಿಸಿಕೊಂಡಿರುವುದು ವಿಶೇಷ.

ಇದೀಗ ಪಾಕಿಸ್ತಾನ ಸತತ ಮೂರು ಬಾರಿ ಮುನ್ನೂರ ಮೂವತ್ತೊಂಭತ್ತಕ್ಕೂ ಅಧಿಕ ಮೊತ್ತ ಬಾರಿಸಿದ ಮೊದಲ ತಂಡವಾಗಿ ಗುರುತಿಸಿಕೊಂಡರೆ, ಇಂಗ್ಲೆಂಡ್ ಸತತ 340 ಕ್ಕೂ ಅಧಿಕ ರನ್​ ಬಾರಿಸಿ ಮೊದಲ ತಂಡವಾಗಿ ದಾಖಲೆ ಬರೆದಿದೆ. ಈ ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಆಂಗ್ಲರು ತವರಿನ 5 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಮೊದಲ ಪಂದ್ಯ ಮಳೆಗೆ ಆಹುತಿಯಾದರೆ, ಕೊನೆಯ ಏಕದಿನ ಪಂದ್ಯ ಭಾನುವಾರ ನಡೆಯಲಿದೆ.ಇದನ್ನೂ ಓದಿ: ಈ ಬಾರಿ ವಿಶ್ವಕಪ್​ನಲ್ಲಿ ಸಿಡಿಯಲಿದೆ 500 ರನ್?ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ

ಇದನ್ನೂ ಓದಿ: ವಿಶ್ವಕಪ್ ಪ್ರಶಸ್ತಿ ಮೊತ್ತ ಪ್ರಕಟ: ಚಾಂಪಿಯನ್ ತಂಡಕ್ಕೆ ಸಿಗಲಿರುವ ಮೊತ್ತ ಎಷ್ಟು ಗೊತ್ತೆ?

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:May 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ