Pak vs NZ| ಸೆ.17ರಿಂದ ಪಾಕಿಸ್ತಾನ-ನ್ಯೂಜಿಲ್ಯಾಂಡ್ ಏಕದಿನ ಸರಣಿ; ಇದು ವಿಶ್ವಕಪ್ ಸೂಪರ್ ಲೀಗ್‌ನ ಭಾಗವೇ?

2022-23ರ ಋತುವಿನಲ್ಲಿ ಎರಡು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಿಗಾಗಿ ನ್ಯೂಜಿಲೆಂಡ್ ಮತ್ತೊಮ್ಮೆ ಪಾಕಿಸ್ತಾನಕ್ಕೆ ಭೇಟಿ ನೀಡಲಿದೆ. ಆ ಮೂರು ಏಕದಿನ ಪಂದ್ಯಗಳನ್ನು ಮಾತ್ರ ವಿಶ್ವಕಪ್ ಸೂಪರ್ ಲೀಗ್ ಸರಣಿಯಂತೆ ಆಡಲು ಎರಡು ಮಂಡಳಿಗಳು ಒಪ್ಪಿಕೊಂಡಿವೆ.

ಪಾಕಿಸ್ತಾನ ತಂಡ.

ಪಾಕಿಸ್ತಾನ ತಂಡ.

  • Share this:
    ಸೆಪ್ಟೆಂಬರ್ 17 ರಿಂದ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ (Rawalpindi) ಆರಂಭವಾಗಲಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ( PakvsNZ) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಐಸಿಸಿ ವಿಶ್ವಕಪ್ ಸೂಪರ್ ಲೀಗ್‌ಗೆ (Super League) ಎಣಿಕೆಯಾಗುವುದಿಲ್ಲ, ಬದಲಾಗಿ ಇದು ಕೇವಲ ದ್ವಿಪಕ್ಷೀಯ ಸರಣಿಯಷ್ಟೇ ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಸ್ಪಷ್ಟಪಡಿಸಿದೆ. ಈ ಕ್ರಿಕೆಟ್​ ಸರಣಿಯಲ್ಲಿ ಎರಡು ಮಂಡಳಿಗಳು ಡಿಆರ್‌ಎಸ್ (DRS) ತಂತ್ರಜ್ಞಾನವನ್ನು ಬಳಸದಿರಲು ನಿರ್ಧರಿಸಿವೆ. ಆದರೆ ತಂತ್ರಜ್ಞಾನದ ಬಳಕೆಯಿಲ್ಲದೆ ನ್ಯೂಜಿಲ್ಯಾಂಡ್ ಉನ್ನತ ಮಟ್ಟದ ಸರಣಿಯನ್ನು ಆಡಲು ಸಿದ್ಧವಿರಲಿಲ್ಲ. ಪಿಸಿಬಿ ಮತ್ತು ಸರಣಿ ಪ್ರಸಾರಕರು, ಸರಣಿಯ ಸಮಯಕ್ಕೆ ಈ ತಂತ್ರಜ್ಞಾನಕ್ಕಾಗಿ ಐಸಿಸಿ ಅನುಮೋದನೆ ಪಡೆಯದ ಕಾರಣ ಈ ಸರಣಿಯಲ್ಲಿ ಡಿಆರ್​ಎಸ್​ ಬಳಕೆ ಸಾಧ್ಯವಿಲ್ಲ ಎಂದು ತಿಳಿಸಿದೆ.

    2022-23ರ ಋತುವಿನಲ್ಲಿ ಎರಡು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಿಗಾಗಿ ನ್ಯೂಜಿಲೆಂಡ್ ಮತ್ತೊಮ್ಮೆ ಪಾಕಿಸ್ತಾನಕ್ಕೆ ಭೇಟಿ ನೀಡಲಿದೆ. ಆ ಮೂರು ಏಕದಿನ ಪಂದ್ಯಗಳನ್ನು ಮಾತ್ರ ವಿಶ್ವಕಪ್ ಸೂಪರ್ ಲೀಗ್ ಸರಣಿಯಂತೆ ಆಡಲು ಎರಡು ಮಂಡಳಿಗಳು ಒಪ್ಪಿಕೊಂಡಿವೆ.

    ಪಾಕಿಸ್ತಾನವು ಇಲ್ಲಿಯವರೆಗೆ ಒಂಬತ್ತು ಸೂಪರ್ ಲೀಗ್ ಪಂದ್ಯಗಳನ್ನು ಆಡಿದೆ ಮತ್ತು ನಾಲ್ಕು ಗೆಲುವುಗಳೊಂದಿಗೆ 40 ಅಂಕಗಳನ್ನು ಮಾತ್ರ ಗಳಿಸಿದೆ.  ಈ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಇದುವರೆಗೆ ಕೇವಲ ಮೂರು ಸೂಪರ್ ಲೀಗ್ ಪಂದ್ಯಗಳನ್ನು ಆಡಿದ್ದು, ಮೂರನ್ನೂ ಗೆದ್ದು 30 ಅಂಕಗಳನ್ನು ಗಳಿಸಿದೆ.

    ಇದನ್ನೂ ಓದಿ: Nasir Hussain| ಐಪಿಎಲ್​ಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಪಂದ್ಯ ರದ್ದು ಮಾಡಲಾಗಿದೆ; ಬಿಸಿಸಿಐ ವಿರುದ್ಧ ನಾಸೀರ್​ ಹುಸೇನ್ ಕಿಡಿ

    2020-23 ಸೂಪರ್ ಲೀಗ್ ಸೈಕಲ್‌ನಲ್ಲಿರುವ 13 ತಂಡಗಳ ಪೈಕಿ ಭಾರತ ಸೇರಿದಂತೆ 8 ತಂಡಗಳು ಈಗಾಗಲೇ 2023ರ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದಿವೆ. ಕೆಳಗಿನ ಐದು ತಂಡಗಳು ಅರ್ಹತಾ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ನಂತರ ವಿಶ್ವಕಪ್ ಪ್ರವೇಶ ಖಚಿತವಾಗಲಿದೆ.
    Published by:MAshok Kumar
    First published: