ICC Cricket World Cup 2019: ವಿರಾಟ್ vs ಅಮೀರ್: ವಿಶ್ವಕಪ್ಗಾಗಿ ಬಲಿಷ್ಠ ಪಾಕ್ ತಂಡ ಪ್ರಕಟ
ICC Cricket World Cup 2019: ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಪಾಕ್ ಬ್ಯಾಟ್ಸ್ಮನ್ ಉತ್ತಮ ಪ್ರದರ್ಶನ ತೋರಿದರೂ ಬೌಲಿಂಗ್ ವಿಭಾಗವು ಕಳಪೆಯಾಗಿತ್ತು.

ಕೊಹ್ಲಿ-ಅಮೀರ್
- News18
- Last Updated: May 23, 2019, 11:26 AM IST
ವಿಶ್ವಕಪ್ ಟೂರ್ನಿಗಾಗಿ ಪಾಕಿಸ್ತಾನ ತಂಡ ಅಂತಿಮ ತಂಡವನ್ನು ಪ್ರಕಟಿಸಿದ್ದು, ಯುವ ವೇಗಿ ಮೊಹಮ್ಮದ್ ಅಮೀರ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕ್ ತಂಡವನ್ನು ಸರಣಿಯಲ್ಲಿ ಹೀನಾಯ ಸೋತಿದ್ದು, ಇದರ ಬೆನ್ನಲ್ಲೇ ಅನುಭವಿ ಬೌಲರ್ಗಳನ್ನು ತಂಡಕ್ಕೆ ಸೇರ್ಪಡೆಗೊಳಿಸಿ ಮತ್ತಷ್ಟು ಬಲಿಷ್ಠಗೊಳಿಸಿದೆ.
ಈ ಹಿಂದೆ ಪ್ರಾಥಮಿಕ ತಂಡವನ್ನು ಪ್ರಕಟಿಸಿದ್ದ ತಂಡವನ್ನು ಇಂಗ್ಲೆಂಡ್ ಸರಣಿಯಲ್ಲಿ ಆಡಿಸಲಾಗಿತ್ತು. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯನ್ನು ಪಾಕ್ ತಂಡವು 4-0 ಅಂತರದಿಂದ ಸೋಲುವ ಮೂಲಕ ವ್ಯಾಪಕ ಟೀಕೆಗೆ ಒಳಗಾಗಿತ್ತು. ಇದೀಗ ಸರ್ಫರಾಜ್ ಅಹ್ಮದ್ ನಾಯಕತ್ವದಲ್ಲೇ ಮೂರು ಬದಲಾವಣೆಯೊಂದಿಗೆ ಅಂತಿಮ 15 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ.
ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಪಾಕ್ ಬ್ಯಾಟ್ಸ್ಮನ್ ಉತ್ತಮ ಪ್ರದರ್ಶನ ತೋರಿದರೂ ಬೌಲಿಂಗ್ ವಿಭಾಗವು ಕಳಪೆಯಾಗಿತ್ತು. ಇದನ್ನು ಪರಿಗಣಿಸಿ ಅಬಿದ್ ಆಲಿ, ಫಾಹಿಮ್ ಅಶ್ರಫ್ ಹಾಗೂ ಜುನೈದ್ ಖಾನ್ಗೆ ಗೇಟ್ ಪಾಸ್ ನೀಡಲಾಗಿದೆ. ಅಲ್ಲದೆ ಅನುಭವಿ ಎಡಗೈ ವೇಗಿಗಳಾದ ವಯಾಬ್ ರಿಯಾಝ್ ಹಾಗೂ ಮೊಹಮ್ಮದ್ ಅಮೀರ್ಗೆ ಮಣೆಹಾಕಲಾಗಿದೆ. ಅಲ್ಲದೆ ಈಗಾಗಲೇ ತಂಡದಲ್ಲಿರುವ ಆಸಿಫ್ ಅಲಿ ಅವರನ್ನು ವಿಶ್ವಕಪ್ಗೆ ಆಯ್ಕೆ ಮಾಡಲಾಗಿದೆ.ಈಗಾಗಲೇ ವಿಶ್ವದ ಅತ್ಯುತ್ತಮ ಬೌಲರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮೊಹಮ್ಮದ್ ಅಮೀರ್ ಮತ್ತೊಮ್ಮೆ ತಂಡಕ್ಕೆ ಮರಳಿರುವುದು ಪಾಕ್ ತಂಡಕ್ಕೆ ಬಲಬಂದಂತಾಗಿದೆ. ಇನ್ನು ತಂಡ ಬೌಲಿಂಗ್ ವಿಭಾಗಕ್ಕೆ ಅನುಭವವನ್ನು ಧಾರೆಯೆರೆಯಲು 2011 ಹಾಗೂ 2015ರ ವಿಶ್ವಕಪ್ ತಂಡವನ್ನು ಪ್ರತಿನಿಧಿಸಿದ್ದ ವಹಾಬ್ ರಿಯಾಝ್ಗೆ ಸ್ಥಾನ ನೀಡಲಾಗಿದೆ.
ಇನ್ನು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಭಾರತ ಮತ್ತು ಪಾಕಿಸ್ತಾನದ ನಡುವಣ ಪಂದ್ಯವು ಜೂನ್ 16 ರಂದು ನಡೆಯಲಿದ್ದು, ಇದೀಗ ಅಮೀರ್ ತಂಡಕ್ಕೆ ಮರಳಿರುವುದು ಪ್ರಬಲ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ. ಕ್ರಿಕೆಟ್ ಅಂಗಳದ ಬದ್ಧ ವೈರಿಗಳ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಅಮೀರ್ ಮೇಲೆ ಕ್ರಿಕೆಟ್ ಅಭಿಮಾನಿಗಳು ಕಣ್ಣಿಟ್ಟಿದ್ದು ಇಬ್ಬರು ಸ್ಟಾರ್ ಆಟಗಾರರು ಪಂದ್ಯವನ್ನು ಮತ್ತಷ್ಟು ರೋಚಕತೆಗೆ ಕೊಂಡೊಯ್ಯಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.
ಪಾಕಿಸ್ತಾನ ತಂಡ ಇಂತಿದೆ : ಸರ್ಫರಾಜ್ ಅಹ್ಮದ್ (ನಾಯಕ), ಆಸಿಫ್ ಅಲಿ, ಬಾಬರ್ ಅಝಾಮ್, ಫಖರ್ ಜಮಾನ್, ಹಾರಿಸ್ ಸೊಹೈಲ್, ಹಸನ್ ಅಲಿ, ಇಮಾದ್ ವಾಸಿಮ್, ಇಮಾಮ್-ಉಲ್-ಹಕ್, ಮೊಹಮ್ಮದ್ ಅಮೀರ್, ಮೊಹಮ್ಮದ್ ಹಫೀಝ್, ಮೊಹಮ್ಮದ್ ಹಸ್ನೈನ್, ಶಾದಬ್ ಖಾನ್, ಶಾಹೀನ್ ಅಫ್ರಿದಿ, ಶೋಯೆಬ್ ಮಲಿಕ್, ವಹಾಬ್ ರಿಯಾಜ್.
ಟೀಂ ಇಂಡಿಯಾ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉಪನಾಯಕ), ಮಹೇಂದ್ರ ಸಿಂಗ್ ಧೋನಿ( ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೆ.ಎಲ್ ರಾಹುಲ್, ಮೊಹಮ್ಮದ್ ಶಮೀ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಾಹಲ್, ಶಿಖರ್ ಧವನ್, ಕೇದರ್ ಜಾಧವ್, ದಿನೇಶ್ ಕಾರ್ತಿಕ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ವಿಜಯ ಶಂಕರ್. ವಿಶ್ವಕಪ್ ಬಳಿಕ ಕ್ರಿಕೆಟ್ಗೆ ಧೋನಿ ಗುಡ್ಬೈ? ನಿವೃತ್ತಿ ಬಳಿಕ ಮಾಡ್ತಾರಂತೆ ಈ ಕೆಲಸ..!
ಈ ಹಿಂದೆ ಪ್ರಾಥಮಿಕ ತಂಡವನ್ನು ಪ್ರಕಟಿಸಿದ್ದ ತಂಡವನ್ನು ಇಂಗ್ಲೆಂಡ್ ಸರಣಿಯಲ್ಲಿ ಆಡಿಸಲಾಗಿತ್ತು. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯನ್ನು ಪಾಕ್ ತಂಡವು 4-0 ಅಂತರದಿಂದ ಸೋಲುವ ಮೂಲಕ ವ್ಯಾಪಕ ಟೀಕೆಗೆ ಒಳಗಾಗಿತ್ತು. ಇದೀಗ ಸರ್ಫರಾಜ್ ಅಹ್ಮದ್ ನಾಯಕತ್ವದಲ್ಲೇ ಮೂರು ಬದಲಾವಣೆಯೊಂದಿಗೆ ಅಂತಿಮ 15 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ.
ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಪಾಕ್ ಬ್ಯಾಟ್ಸ್ಮನ್ ಉತ್ತಮ ಪ್ರದರ್ಶನ ತೋರಿದರೂ ಬೌಲಿಂಗ್ ವಿಭಾಗವು ಕಳಪೆಯಾಗಿತ್ತು. ಇದನ್ನು ಪರಿಗಣಿಸಿ ಅಬಿದ್ ಆಲಿ, ಫಾಹಿಮ್ ಅಶ್ರಫ್ ಹಾಗೂ ಜುನೈದ್ ಖಾನ್ಗೆ ಗೇಟ್ ಪಾಸ್ ನೀಡಲಾಗಿದೆ. ಅಲ್ಲದೆ ಅನುಭವಿ ಎಡಗೈ ವೇಗಿಗಳಾದ ವಯಾಬ್ ರಿಯಾಝ್ ಹಾಗೂ ಮೊಹಮ್ಮದ್ ಅಮೀರ್ಗೆ ಮಣೆಹಾಕಲಾಗಿದೆ. ಅಲ್ಲದೆ ಈಗಾಗಲೇ ತಂಡದಲ್ಲಿರುವ ಆಸಿಫ್ ಅಲಿ ಅವರನ್ನು ವಿಶ್ವಕಪ್ಗೆ ಆಯ್ಕೆ ಮಾಡಲಾಗಿದೆ.ಈಗಾಗಲೇ ವಿಶ್ವದ ಅತ್ಯುತ್ತಮ ಬೌಲರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮೊಹಮ್ಮದ್ ಅಮೀರ್ ಮತ್ತೊಮ್ಮೆ ತಂಡಕ್ಕೆ ಮರಳಿರುವುದು ಪಾಕ್ ತಂಡಕ್ಕೆ ಬಲಬಂದಂತಾಗಿದೆ. ಇನ್ನು ತಂಡ ಬೌಲಿಂಗ್ ವಿಭಾಗಕ್ಕೆ ಅನುಭವವನ್ನು ಧಾರೆಯೆರೆಯಲು 2011 ಹಾಗೂ 2015ರ ವಿಶ್ವಕಪ್ ತಂಡವನ್ನು ಪ್ರತಿನಿಧಿಸಿದ್ದ ವಹಾಬ್ ರಿಯಾಝ್ಗೆ ಸ್ಥಾನ ನೀಡಲಾಗಿದೆ.
ಇನ್ನು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಭಾರತ ಮತ್ತು ಪಾಕಿಸ್ತಾನದ ನಡುವಣ ಪಂದ್ಯವು ಜೂನ್ 16 ರಂದು ನಡೆಯಲಿದ್ದು, ಇದೀಗ ಅಮೀರ್ ತಂಡಕ್ಕೆ ಮರಳಿರುವುದು ಪ್ರಬಲ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ. ಕ್ರಿಕೆಟ್ ಅಂಗಳದ ಬದ್ಧ ವೈರಿಗಳ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಅಮೀರ್ ಮೇಲೆ ಕ್ರಿಕೆಟ್ ಅಭಿಮಾನಿಗಳು ಕಣ್ಣಿಟ್ಟಿದ್ದು ಇಬ್ಬರು ಸ್ಟಾರ್ ಆಟಗಾರರು ಪಂದ್ಯವನ್ನು ಮತ್ತಷ್ಟು ರೋಚಕತೆಗೆ ಕೊಂಡೊಯ್ಯಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.
ಪಾಕಿಸ್ತಾನ ತಂಡ ಇಂತಿದೆ : ಸರ್ಫರಾಜ್ ಅಹ್ಮದ್ (ನಾಯಕ), ಆಸಿಫ್ ಅಲಿ, ಬಾಬರ್ ಅಝಾಮ್, ಫಖರ್ ಜಮಾನ್, ಹಾರಿಸ್ ಸೊಹೈಲ್, ಹಸನ್ ಅಲಿ, ಇಮಾದ್ ವಾಸಿಮ್, ಇಮಾಮ್-ಉಲ್-ಹಕ್, ಮೊಹಮ್ಮದ್ ಅಮೀರ್, ಮೊಹಮ್ಮದ್ ಹಫೀಝ್, ಮೊಹಮ್ಮದ್ ಹಸ್ನೈನ್, ಶಾದಬ್ ಖಾನ್, ಶಾಹೀನ್ ಅಫ್ರಿದಿ, ಶೋಯೆಬ್ ಮಲಿಕ್, ವಹಾಬ್ ರಿಯಾಜ್.
ಟೀಂ ಇಂಡಿಯಾ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉಪನಾಯಕ), ಮಹೇಂದ್ರ ಸಿಂಗ್ ಧೋನಿ( ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೆ.ಎಲ್ ರಾಹುಲ್, ಮೊಹಮ್ಮದ್ ಶಮೀ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಾಹಲ್, ಶಿಖರ್ ಧವನ್, ಕೇದರ್ ಜಾಧವ್, ದಿನೇಶ್ ಕಾರ್ತಿಕ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ವಿಜಯ ಶಂಕರ್.
Loading...
Loading...