ಹೀನಾಯವಾಗಿ ಸೋತ ಬಳಿಕ ಭಾರತೀಯ ಆಟಗಾರರು ನಮ್ಮಲ್ಲಿ ಕ್ಷಮೆ ಕೇಳಿದ್ದರು: ಅಫ್ರಿದಿ ಶಾಕಿಂಗ್ ಹೇಳಿಕೆ

ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಆಡುವುದು ನನಗೆ ಇಷ್ಟ. ಏಕೆಂದರೆ ಆ ಪಂದ್ಯಗಳಲ್ಲಿ ಒತ್ತಡ ಹೆಚ್ಚಿರುತ್ತದೆ. ಅವು ದೊಡ್ಡ ಹಾಗೂ ಬಲಿಷ್ಠ ತಂಡಗಳು ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.

news18-kannada
Updated:July 6, 2020, 11:04 AM IST
ಹೀನಾಯವಾಗಿ ಸೋತ ಬಳಿಕ ಭಾರತೀಯ ಆಟಗಾರರು ನಮ್ಮಲ್ಲಿ ಕ್ಷಮೆ ಕೇಳಿದ್ದರು: ಅಫ್ರಿದಿ ಶಾಕಿಂಗ್ ಹೇಳಿಕೆ
ಶಾಹಿದ್ ಅಫ್ರಿದಿ ಹಾಗೂ ಗೌತಮ್ ಗಂಭೀರ್.
  • Share this:
ಭಾರತ ತಂಡದ ವಿರುದ್ಧ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿರುವ ಪಾಕಿಸ್ತಾನ ತಂಡದ​ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ, ನಮ್ಮೆದುರು ಟೀಂ ಇಂಡಿಯಾ ಹೀನಾಯವಾಗಿ ತೋತ ಬಳಿಕ ಭಾರತದ ಆಟಗಾರರು ನಮ್ಮ ಬಳಿ ಬಂದು ಕ್ಷಮೆ ಕೋರುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕೊರೋನಾ ವೈರಸ್‌ ಸೋಂಕಿನಿಂದ ಸುದ್ದಿಯಾಗಿದ್ದ ಅಫ್ರಿದಿ, ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

"ನಾನು ಯಾವಾಗಲು ಟೀಂ ಇಂಡಿಯಾ ವಿರುದ್ಧ ಆಡುವುದನ್ನು ಬಹಳಷ್ಟು ಇಷ್ಟಪಡುತ್ತೇನೆ. ನಾವು ನಿಜಕ್ಕೂ ಯೋಗ್ಯವಾಗಿಯೇ ಭಾರತ ತಂಡವನ್ನು ಸೋಲಿಸಿದ್ದೇವೆ. ಸೋತಾಗಲೆಲ್ಲಾ ಪಂದ್ಯದ ನಂತರ ಟೀಂ ಇಂಡಿಯಾ ಆಟಗಾರರು ನಮ್ಮ ಬಳಿ ಕ್ಷಮೆ ಕೋರುತ್ತಿದ್ದರು."

Virat Kohli: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ದೂರು ದಾಖಲು!

"ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಆಡುವುದು ನನಗೆ ಇಷ್ಟ. ಏಕೆಂದರೆ ಆ ಪಂದ್ಯಗಳಲ್ಲಿ ಒತ್ತಡ ಹೆಚ್ಚಿರುತ್ತದೆ. ಅವು ದೊಡ್ಡ ಹಾಗೂ ಬಲಿಷ್ಠ ತಂಡಗಳು. ಅಂತಹ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ಬಹಳ ದೊಡ್ಡ ಸಂಗತಿ ಆಗಿರುತ್ತದೆ" ಎಂದು ಅಫ್ರಿದಿ ಹೇಳಿದ್ದಾರೆ.

"ಭಾರತದ ವಿರುದ್ಧ 141 ರನ್​ ಬಾರಿಸಿದ್ದ ನನ್ನ ಜೀವನದ ಅವಿಸ್ಮರಣೀಯ ಇನ್ನಿಂಗ್ಸ್​ ಆಗಿದೆ. ಅದೂ ಭಾರತ ನೆಲದಲ್ಲೇ ಹೆಚ್ಚಿನ ರನ್​ ಗಳಿಸಿದ್ದೆ. ಅಂದು ನಾನು ಇಂಡಿಯಾ ಪ್ರವಾಸಕ್ಕೆ ಆಯ್ಕೆಯಾಗಿರಲಿಲ್ಲ. ಆ ಸಮಯದಲ್ಲಿ ವಾಸಿಂ ಭಾಯ್​ ಮತ್ತು ಮುಖ್ಯ ಆಯ್ಕೆಗಾರ ನನಗೆ ಬೆಂಬಲವಾಗಿ ನಿಂತರು. ಅದು ಕಷ್ಟಕರವಾದ ಪ್ರವಾಸವೂ ಆಗಿತ್ತು ಮತ್ತು ಇನ್ನಿಂಗ್ ಬಹಳ ಮುಖ್ಯವಾಗಿತ್ತು. ಇಂಹತ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದು ಅವಿಸ್ಮರಣೀಯ" ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.

ಕ್ರಿಕೆಟ್‌ನಲ್ಲಿ ಒಮ್ಮೆಯೂ ನೋ-ಬಾಲ್‌ ಎಸೆಯದ ಐವರು ಬೌಲರ್‌ಗಳು..!ಕಾಶ್ಮೀರದ ಕುರಿತು ಆಫ್ರಿದಿ ಇತ್ತೀಚೆಗೆ ಮಾಡಿದ ಕಾಮೆಂಟ್‌ಗಳು ಮತ್ತು ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಕುರಿತಾದ ಹೇಳಿಕೆಯಿಂದಾಗಿ ಈಗ ಯಾವ ರೀತಿ ಬಾಂದವ್ಯ ಇದೆ ಅನ್ನೋದು ತಿಳಿದಿಲ್ಲ. ಆದರೆ, ನಾನು ಅಂದಿನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದಿದ್ದಾರೆ .
Published by: Vinay Bhat
First published: July 6, 2020, 11:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading